ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

45 movie OTT: ಕರುನಾಡಲ್ಲಿ ಅಬ್ಬರಿಸಿದ್ದ `45’ ಮೂವಿಯಿಂದ ಗುಡ್‌ ನ್ಯೂಸ್‌; ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

Shiva Rajkumar: ರಾಜ್​ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿತ್ತು. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಇದೀಗ ಸಂಕ್ರಾಂತಿಯಂದೇ ಸಿನಿಪ್ರಿಯರಿಗೆ ಭರ್ಜರಿ ಗಿಫ್ಟ್‌(Gift) ಕೊಟ್ಟಿದೆ.

45 ಸಿನಿಮಾ

ರಾಜ್​ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾ (45 Kannada Movie) ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ (Kannada Film Industry) ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿತ್ತು. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಇದೀಗ ಸಂಕ್ರಾಂತಿಯಂದೇ (Sankranti) ಸಿನಿಪ್ರಿಯರಿಗೆ ಭರ್ಜರಿ ಗಿಫ್ಟ್‌(Gift) ಕೊಟ್ಟಿದೆ.

ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ. 'ಜೀ' ಸಂಸ್ಥೆಯು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತು ಜೀ5ಕನ್ನಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. 'ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಜೀ5ನಿಂದ ವಿಶೇಷ ಉಡುಗೊರೆ' ಎಂದು ಬರೆದುಕೊಂಡು, ಜ.23 ರಿಂದ ಜೀ5ನಲ್ಲಿ 45 ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ ಎಂದು ಮಾಹಿತಿ ನೀಡಿದೆ. ಇದರ ಜತೆಗೆ 45 ಸಿನಿಮಾದ ಟ್ರೇಲರ್ ಹಂಚಿಕೊಂಡಿದೆ.

ಇದನ್ನೂ ಓದಿ: Akhanda 2 OTT release: ಒಟಿಟಿಗೆ ಬರ್ತಿದೆ ಬಾಲಯ್ಯ ನಟನೆಯ ‘ಅಖಂಡ 2’; ನಾಳೆಯೇ ಸ್ಟ್ರೀಮಿಂಗ್‌, ಎಲ್ಲಿ?

ಹೇಗಿದೆ ಸಿನಿಮಾ?

ಇದೊಂದು ಫ್ಯಾಂಟಸಿ ಸಿನಿಮಾ. ಮನುಷ್ಯನ ಸಾವು, ಸಾವಿನ ನಂತರದ ಆತ್ಮದ ಪ್ರಯಾಣ, ಗರುಡಪುರಾಣ, ವಿಧಿ, ಪಾಪ-ಕರ್ಮ, ಕಾಯುವವನು, ಕೊಲ್ಲುವವನು ಜೊತೆಗೆ ಒಬ್ಬ ನಾರ್ಮಲ್‌ ಮನುಷ್ಯ.. ಇದೆಲ್ಲವನ್ನು ಇಟ್ಟುಕೊಂಡು, ಒಂದು ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ ಅರ್ಜುನ್‌ ಜನ್ಯ. ಅವರ ಈ ಕನಸಿಗೆ ಧಾರಾಳವಾಗಿ ಹಣ ಹಾಕಿದ್ದಾರೆ ರಮೇಶ್‌ ರೆಡ್ಡಿ.



ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಹಲವು ಅವತಾರಗಳ ಆಗಮನ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಒಂದೊಂದು ಅವತಾರದಲ್ಲೂ ಎಂಟ್ರಿ ಕೊಡುವಾಗ ಶಿವಣ್ಣ ನಡೆಸುವ ಶಿವ ತಾಂಡವ ಅಭಿಮಾನಿಗಳಿಗೆ ರೊಮಾಂಚನ ನೀಡುತ್ತದೆ.

ಯಾರೆಲ್ಲ ಇದ್ದಾರೆ?

.ಕೌಸ್ತುಭ ಮಣಿ ಹಾಗೂ ಜಿಶು ಸೆಂಗುಪ್ತ ಚಿತ್ರದ ತಾರಾಗಣದಲ್ಲಿದ್ದಾರೆ.ಸತ್ಯ ಹೆಗಡೆ ಛಾಯಾಗ್ರಹಣ, ಕೆ. ಪ್ರಕಾಶ್ ಸಂಕಲನ '45' ಚಿತ್ರಕ್ಕಿದೆ. ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಅನಿಲ್‌ ಕುಮಾರ್ ಸಂಭಾಷಣೆ ಬರೆದಿದ್ದಾರೆ. 45 ಚಿತ್ರದಲ್ಲಿ ಶಿವಣ್ಣ ನಾನಾವತಾರ ತಾಳಿದ್ದಾರೆ. ಶಿವಣ್ಣನ ಅವತಾರಗಳಿಂದ ಅಭಿಮಾನಿಗಳಿಗೆ ರೋಮಾಂಚನ ಆಗುವುದು ಖಚಿತ.

ಇದನ್ನೂ ಓದಿ: Actor Jaggesh: ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌! ಚಿತ್ರರಂಗದ ಬೆಂಬಲ ಇಲ್ಲ ಎಂದು ಪೋಸ್ಟ್‌

ಇನ್ನೂ ಉಪೇಂದ್ರ ಡಿಫರೆಂಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಯ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ನಟಿಸಿದ್ದಾರೆ. ಈವರೆಗೆ ಎಲ್ಲರೂ ಅರ್ಜುನ್ ಜನ್ಯ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾತ್ರ ನೋಡಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳನ್ನು ಅವರು ಚಿತ್ರರಂಗಕ್ಕೆ ನೀಡಿದ್ದಾರೆ.

Yashaswi Devadiga

View all posts by this author