ಸ್ಯಾಂಡಲ್‌ವುಡ್‌ನಲ್ಲಿ (Sandalwood) ತಮ್ಮ ತಮ್ಮ ಪ್ರತಿಭೆಯನ್ನ ಪ್ರೂವ್ ಮಾಡುವುದಕ್ಕೆ ಹಲವು ವಿಭಿನ್ನ ಪ್ರಯತ್ನಗಳನ್ನ ಯುವ ಪ್ರತಿಭೆಗಳು ಮಾಡುತ್ತಲೇ ಇರುತ್ತಾರೆ.ಸದ್ಯ ಇದೆ ಸಾಲಿಗೆ ಹರಿಶ್ ಲೇಖಿ ಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಕುಣಿ ಕಿರು ಚಿತ್ರ(Short Movie) ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಹರೀಶ್ ಲೇಖಿ ನಿರ್ದೇಶನದ ಕುಣಿ ಸಿನಿಮಾ ವಿವಿಧ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮತ್ತು ನಾಗತಿಗಳ್ಳಿ ಚಂದ್ರಶೇಖರ್ ಕಾರ್ಕೋಚ್ ಸುಧಿ, ರಾಜೇಶ್ ನಟರಂಗ, ಸಾಗರ್ ಪುರಾಣಿಕ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರಿಂದ ಪ್ರಶಂಸೆ ಪಡೆದಿದೆ.
ಇದನ್ನೂ ಓದಿ: Anchor Anushre: ಆ ಪದದಿಂದ ನನ್ನನ್ನು ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ; ಅನುಶ್ರೀ ಬೇಸರ
ತಂದೆ ಮತ್ತು ಮಗನ ನಡುವೆ ನಡೆಯುವ ಕಥಾ ಹಂದರ ಹೊಂದಿರುವ ಕುಣಿ ಕಿರು ಚಿತ್ರವು ಸತ್ಯ ಹೆಗಡೆ ಸ್ಟಡಿಯೋಸ್‌ನಲ್ಲಿ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಗಣ್ಯರಿಂದ ಪ್ರಶಂಸೆ
ಹರೀಶ್ ಲೇಖಿ ನಿರ್ದೇಶನದ, ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮತ್ತು ಚಿತ್ರಗಂಗದ ಗಣ್ಯರಿಂದ ಪ್ರಶಂಸೆ ಪಡೆದಿರುವ, ತಂದೆ ಮತ್ತು ಮಗನ ನಡುವೆ ನಡೆಯುವ ಕಥಾ ಹಂದರ ಹೊಂದಿರುವ, ಕುಣಿ ಕಿರು ಚಿತ್ರವು ಸತ್ಯ ಹೆಗಡೆ ಸ್ಟಡಿಯೋಸ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Jailer 2 Update: ಜೈಲರ್ 2 ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ರಜನಿಕಾಂತ್! ಕಮಲ್ ಜೊತೆಗಿನ ಮೂವಿ ಬಗ್ಗೆ ಹೇಳಿದ್ದನು?
ಈಗಾಗಲೇ ಸತ್ಯ ಹೆಗಡೆ ಸ್ಟುಡಿಯೋಸ್ ಯ್ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು. ಎಲ್ಲ ನೋಡುಗರಿಂದ ಉತ್ತಮ ಪ್ರಶಂಸೆ ದೊರೆಯುತ್ತಿದೆ. ಸದ್ಯದ ಎಲ್ಲರ ಮನೆಯ ಪರಿಸ್ಥಿತಿಗೆ ಈ ಚಿತ್ರದ ಕಥೆಯು ಕನ್ನಡಿ ಹಿಡಿದಂತಿದೆ.