ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Rashmika Mandanna: ವಿವಾದದ ಮಧ್ಯೆ ರಶ್ಮಿಕಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ʼಸಿಕಂದರ್‌ʼ ಚಿತ್ರದ ಮೊದಲ ಹಾಡಿನ ರಿಲೀಸ್‌ ಡೇಟ್‌ ಅನೌನ್ಸ್‌

ಸದ್ಯ ʼಛಾವಾʼ ಚಿತ್ರದ ಯಶಸ್ಸು ಮತ್ತು ಕನ್ನಡವೇ ಮರೆತಂತೆ ಆಡಿ ವಿವಾದ ಹುಟ್ಟುಹಾಕಿರುವ ರಶ್ಮಿಕಾ ಮಂದಣ್ಣ ಭಾರೀ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ ಅವರು ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಜತೆಗೆ ಮೊದಲ ಬಾರಿ ತೆರೆ ಹಂಚಿಕೊಂಡಿರುವ ʼಸಿಕಂದರ್‌ʼ ಚಿತ್ರದ ಮೊದಲ ಹಾಡಿನ ರಿಲೀಸ್‌ ಡೇಟ್‌ ರಿವೀಲ್‌ ಮಾಡಿದ್ದಾರೆ.

ರಶ್ಮಿಕಾ-ಸಲ್ಮಾನ್‌ ಜೋಡಿಯ ʼಸಿಕಂದರ್‌ʼ ಚಿತ್ರದ ಮೊದಲ ಹಾಡು ನಾಳೆ ರಿಲೀಸ್‌

ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ

Profile Ramesh B Mar 3, 2025 8:42 PM

ಮುಂಬೈ: ಸದ್ಯ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತೆರೆಕಂಡ, ವಿಕ್ಕಿ ಕೌಶಲ್‌ ಜತೆಗಿನ ಬಾಲಿವುಡ್‌ ಚಿತ್ರ 'ಛಾವಾ' (Chhaava) ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ ಮಾಡುತ್ತಿದೆ. ಈ ಮೂಲಕ 'ಅನಿಮಲ್‌' (Animal), 'ಪುಷ್ಪ 2' (Pushpa 2) ಚಿತ್ರದ ಬಳಿಕ ಸತತ 3ನೇ ಸಿನಿಮಾವೂ ಬ್ಲಾಕ್‌ ಬ್ಲಸ್ಟರ್‌ ಹಿಟ್‌ ಎನಿಸಿಕೊಂಡಿದೆ. ಇದರ ಜತೆಗೆ ಈ ಚಿತ್ರದ ತೆಲುಗು ಟ್ರೈಲರ್‌ ರಿಲೀಸ್‌ ಆಗಿದೆ. ಇತ್ತ ಕನ್ನಡವೇ ಮರೆತಂತೆ ಆಡಿ, ಹೈದರಾಬಾದ್‌ ತನ್ನ ಮೂಲವೆಂದು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದೆಲ್ಲದರ ಮಧ್ಯೆ ಅವರ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಹೊರ ಬಿದ್ದಿದೆ. ಸಲ್ಮಾನ್‌ ಖಾನ್‌ (Salman Khan) ಜತೆಗೆ ರಶ್ಮಿಕಾ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಬಾಲಿವುಡ್‌ ಚಿತ್ರ 'ಸಿಕಂದರ್‌' (Sikandar)ನ ಮೊದಲ ಹಾಡು ಬಿಡುಗಡೆಯಾಗುವ ದಿನಾಂಕ ಘೋಷಣೆಯಾಗಿದೆ.

ಸಾಜಿದ್‌ ನಾಡಿಯಾವಾಲ ಅದ್ದೂರಿಯಾಗಿ ನಿರ್ಮಿಸುತ್ತಿರುವ 'ಸಿಕಂದರ್‌' ಚಿತ್ರಕ್ಕೆ ಸೂಪರ್‌ ಹಿಟ್‌ ಚಿತ್ರಗಳ ನಿರ್ದೇಶಕ, ಕಾಲಿವುಡ್‌ನ ಎ.ಆರ್‌.ಮುರುಗದಾಸ್‌ (A.R. Murugadoss) ಆ್ಯಕ್ಷನ್‌‌ ಕಟ್‌ ಹೇಳುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಗಮನ ಸೆಳೆಯುತ್ತಿದೆ. ಫೆ. 27ರಂದು ಟೀಸರ್‌ ಹೊರಬಿಟ್ಟು ಸಲ್ಮಾನ್‌-ರಶ್ಮಿಕಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ ಚಿತ್ರತಂಡ ಇದೀಗ ಹಾಡಿನ ಮೂಲಕ ಮತ್ತೆ ಮೋಡಿ ಮಾಅಡಲು ಸಜ್ಜಾಗಿದೆ.

ಮೊದಲ ಸಾಂಗ್‌ ಯಾವಾಗ ರಿಲೀಸ್‌?

ʼಸಿಕಂದರ್ʼ ಚಿತ್ರದ ಮೊದಲ ಹಾಡು ʼಸಿಕಂದರ್‌ ಝೋಹ್ರಾ ಜಬೀನ್‌ʼ ಮಂಗಳವಾರ (ಮಾ. 4) ರಿಲೀಸ್‌ ಆಗಲಿದೆ. ಈಗಾಗಲೇ ಇದರ ಝಲಕ್‌ ಹೊರಬಿದ್ದಿದ್ದು, ಸಲ್ಮಾನ್‌ ಮತ್ತು ರಶ್ಮಿಕಾ ಕಪ್ಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಪ್ರೀತಂ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾ ಈದ್‌ ಹಬ್ಬದ ವೇಳೆ ತೆರೆಗೆ ಬರಲಿದೆ. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್​ವಾಲ್, ಕನ್ನಡದ ಕಿಶೋರ್‌, ಸುನೀಲ್‌ ಶೆಟ್ಟಿ, ಪ್ರತೀಕ್‌ ಬಬ್ಬರ್‌, ಚೈತನ್ಯ ಚೌಧರಿ, ನವಾಬ್‌ ಶಾ ಮತ್ತಿತರರು ನಟಿಸಿದ್ದಾರೆ. ಕೆಲವು ವರ್ಷಗಳಿಂದ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿರುವ ಸಲ್ಮಾನ್‌ ಖಾನ್‌ಗೆ ಈ ಚಿತ್ರದಿಂದ ಅದೃಷ್ಟ ಖುಲಾಯಿಸಲಿದೆ ಎನ್ನುವ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.



ಈ ಸುದ್ದಿಯನ್ನೂ ಓದಿ: Ravi Ganiga: ಕರ್ನಾಟಕ ಎಲ್ಲಿದೆ ಎಂದವರಿಗೆ ಬುದ್ಧಿ ಕಲಿಸಬೇಕು: ರಶ್ಮಿಕಾ ವಿರುದ್ಧ ಶಾಸಕ ರವಿ ಗಣಿಗ ಕಿಡಿ

ʼಛಾವಾʼ ಮ್ಯಾಜಿಕ್‌

‘ಛಾವ’ ಸಿನಿಮಾ ಬಿಡುಗಡೆ ಆಗಿ 18 ದಿನಗಳು ಕಳೆದಿದ್ದು, ಭಾರತದ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 471 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕೆಲವೇ ದಿನಗಳಲ್ಲಿ 500 ಕೋಟಿ ರೂ. ಕ್ಲಬ್‌ ಸೇರುವ ಸಾಧ್ಯತೆ ಇದೆ. ಇದರ ಜತೆಗೆ ʼಛಾವಾʼದ ತೆಲುಗು ವರ್ಷನ್‌ನ ಟ್ರೈಲರ್‌ ರಿಲೀಸ್‌ ಆಗಿ ಗಮನ ಸೆಳೆಯುತ್ತಿದೆ. ತೆಲುಗು ಅವತರಣಿಕೆ ಮಾ. 7ರಂದು ರಿಲೀಸ್‌ ಆಗಲಿದೆ.