Dhurandhar 2: 'ಧುರಂಧರ್ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
PM Narendra Modi: ಆದಿತ್ಯ ಧರ್ ಅವರ ಧುರಂಧರ್ 2 ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014 ರ ವಿಜಯೋತ್ಸವ ಭಾಷಣವನ್ನು ಪ್ರಮುಖ ದೃಶ್ಯದಲ್ಲಿ ತೋರಿಸಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಚಿತ್ರದೊಳಗಿನ ದೂರದರ್ಶನದಲ್ಲಿ ತೋರಿಸಲಾದ ಈ ಕ್ಷಣವು, ವೀಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಿ ರಿಲೀಸ್ ಪ್ರಾರಂಭಿಸುತ್ತಿದ್ದಂತೆ, ಪ್ರೇಕ್ಷಕರು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಧುರಂಧರ್ 2 ಸಿನಿಮಾ -
ಆದಿತ್ಯ ಧರ್ (Aditya Dhar) ಅವರ ಧುರಂಧರ್ 2 (Dhurandhar 2) ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014 ರ ವಿಜಯೋತ್ಸವ ಭಾಷಣವನ್ನು ಪ್ರಮುಖ ದೃಶ್ಯದಲ್ಲಿ ತೋರಿಸಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಚಿತ್ರದೊಳಗಿನ ದೂರದರ್ಶನದಲ್ಲಿ ತೋರಿಸಲಾದ ಈ ಕ್ಷಣವು, ವೀಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಿ ರಿಲೀಸ್ (Pre Release) ಪ್ರಾರಂಭಿಸುತ್ತಿದ್ದಂತೆ, ಪ್ರೇಕ್ಷಕರು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್
ಐತಿಹಾಸಿಕ ಕ್ಷಣ
2014 ರ ಲೋಕಸಭಾ ಗೆಲುವಿನ ನಂತರ ನರೇಂದ್ರ ಮೋದಿಯವರ ಭಾಷಣ ದೃಶ್ಯ ಇದು. ನಟ ಮೋದಿ ಜಿ ಅವರ ಚೊಚ್ಚಲ ಪ್ರವೇಶ" ಎಂದು ಟ್ವೀಟ್ ಮಾಡಿದ್ದಾರೆ ಕೆಲವರು. ಇತರರು ಐತಿಹಾಸಿಕ ಕ್ಷಣವನ್ನು ನೆನಪಿಸಿಕೊಂಡರು "ಮೋದಿ 2014 ರ ಭಾಷಣವನ್ನು ನೋಡುವುದು, ಆ ದಿನದ ಭಾವನಾತ್ಮಕ ನೆನಪುಗಳು... ಧುರಂಧರ್ 2."ಎಂದು ಬರೆದುಕೊಂಡಿದ್ದಾರೆ
ರಾಜಕೀಯ ಉಲ್ಲೇಖವನ್ನು ಮೀರಿ, ಚಿತ್ರವನ್ನು ನೋಡುತ್ತಿರುವ ಪ್ರೇಕ್ಷಕರು ಈಗಾಗಲೇ ಇದನ್ನು "ಬ್ಲಾಕ್‌ಬಸ್ಟರ್" ಎಂದು ಕರೆಯುತ್ತಿದ್ದಾರೆ. ಮೊದಲಾರ್ಧದಲ್ಲಿ ಎದ್ದು ಕಾಣುವ ಮೂರು ಕ್ಷಣಗಳನ್ನು ಹಲವಾರು ವೀಕ್ಷಕರು ಬರೆದುಕೊಂಡಿದ್ದಾರೆ - ಜಸ್ಕಿರತ್ ಸಿಂಗ್ ರಂಗಿ ಅವರ ಹಿನ್ನೆಲೆ ಕಥೆ, ಪ್ರಧಾನಿ ಮೋದಿಯವರ ಪ್ರಮಾಣವಚನ ಇಷ್ಟ ಪಡುತ್ತಿದ್ದಾರೆ.
Goat Actor MODI JI's debut in DHURANDHAR 2 😭😭#Dhurandhar2 pic.twitter.com/A9Z81pz5JK
— 🦕 (@adkeys22) March 18, 2026
ಯಾರೆಲ್ಲ ಇದ್ದಾರೆ?
ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಬಹುತಾರಾಗಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೊಂದಿಗೆ ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಕೂಡ ನಟಿಸಿದ್ದಾರೆ.
ಆದಿತ್ಯ ಧರ್ ಈ ಚಿತ್ರವನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಆಕ್ಷನ್, ಸ್ಪೈ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಆದಿತ್ಯ ಧರ್, ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಸಿನಿಮಾ ನೋಡಿದವರು ಧುರಂಧರ್ ದಿ ರಿವೆಂಜ್ ಗೆ ಪಾಸಿಟಿವ್ ರೇಟಿಂಗ್ (Positive Rating) ಕೂಡ ನೀಡಿದ್ದಾರೆ.
ಇದನ್ನೂ ಓದಿ: Dhurandhar 2 Twitter Review: ಮಾಸ್ಟರ್ ಪೀಸ್ ಪಕ್ಕಾ! ಯಶಸ್ಸು ಖಚಿತ; ಧುರಂಧರ್ 2 ಸಿನಿಮಾ ನೋಡಿದವರು ಏನಂದ್ರು?
ವಿಕಾಸ್ ನೌಲಖಾ ಛಾಯಾಗ್ರಾಹಕ, ಶಾಶ್ವತ್ ಸಚ್‌ದೇವ್ ಸಂಗೀತ ನಿರ್ದೇಶಕ, ಮತ್ತು ಶಿವಕುಮಾರ್ ವಿ ಪಣಿಕರ್ ಸಂಕಲನ ಮಾಡಿದ್ದಾರೆ. ಧುರಂಧರ್ 1 ಡಿಸೆಂಬರ್ 5, 2025 ರಂದು ಬಿಡುಗಡೆಯಾಯಿತು ಮತ್ತು ಅದ್ಭುತ ಯಶಸ್ಸನ್ನು ಕಂಡಿತು. ಈ ಚಿತ್ರದ ಎರಡನೇ ಭಾಗವು ಮಾರ್ಚ್ 19 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.