ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gatha Vaibhava OTT: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು! ಸ್ಟ್ರೀಮಿಂಗ್ ಎಲ್ಲಿ?

Gatha Vaibhava: ಗತವೈಭವ ಚಿತ್ರ ಕಳೆದ ವರ್ಷ ರಿಲೀಸ್ ಆಗಿತ್ತು. ನವೆಂಬರ್-14 ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಸಿಂಪಲ್ ಸುನಿ ಇಲ್ಲಿ ನಾಲ್ಕು ವಿಭಿನ್ನವಾದ ಕಥೆಗಳನ್ನ ಅಷ್ಟೆ ವಿಶೇಷಾಗಿಯೇ ಹೇಳಿದ್ದರು. ಕಥೆ,ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲವನ್ನು ಮಾಡಿದ್ದರು. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಗತವೈಭವ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದರು. ದುಷ್ಯಂತ್ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರದ ಮೂಲಕವೇ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಪಳಗಿದ ನಾಯಕನ ರೀತಿ ನಟಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದ್ದರು.

ಗತ ವೈಭವ ಸಿನಿಮಾ

ಗತವೈಭವ (gatha vaibhava) ಚಿತ್ರ ಕಳೆದ ವರ್ಷ ರಿಲೀಸ್ ಆಗಿತ್ತು. ನವೆಂಬರ್-14 ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಸಿಂಪಲ್ ಸುನಿ (Simple Suni) ಇಲ್ಲಿ ನಾಲ್ಕು ವಿಭಿನ್ನವಾದ ಕಥೆಗಳನ್ನ ಅಷ್ಟೆ ವಿಶೇಷಾಗಿಯೇ ಹೇಳಿದ್ದರು. ಕಥೆ,ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲವನ್ನು ಮಾಡಿದ್ದರು. ಇದೀಗ ಸಿನಿಮಾ ಒಟಿಟಿಗೆ (gatha vaibhava OTT) ಎಂಟ್ರಿ ಕೊಟ್ಟಿದೆ. ಗತವೈಭವ ಚಿತ್ರದಲ್ಲಿ ಆಶಿಕಾ (Ashika)ರಂಗನಾಥ್ ನಟಿಸಿದ್ದರು. ದುಷ್ಯಂತ್ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರದ ಮೂಲಕವೇ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಪಳಗಿದ ನಾಯಕನ ರೀತಿ ನಟಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದ್ದರು.

ಸಿನಿಮಾ ಸ್ಟ್ರೀಮಿಂಗ್‌ ಎಲ್ಲಿ?

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ಹೊಸ ಹೀರೋ ದುಷ್ಯಂತ್ ನಾಯಕನಾಗಿ ಹಾಗೂ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿರುವ ಗತವೈಭವ ಸಿನಿಮಾವೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಇಂದಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಗತವೈಭವ ಸ್ಟ್ರೀಮಿಂಗ್ ಆಗ್ತಿದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ಲಭ್ಯವಿದೆ.

ಇದನ್ನೂ ಓದಿ: Dhurandhar OTT: ಅಂತೂ ಒಟಿಟಿಗೆ ಬಂತು 'ಧುರಂಧರ್' ; ಇದೊಂದು ಕಾರಣಕ್ಕೆ ಅಭಿಮಾನಿಗಳು ಆಕ್ರೋಶ

ಕಳೆದ ವರ್ಷ ನವೆಂಬರ್ 14ರಂದು ತೆರೆಕಂಡ ಈ ಚಿತ್ರದ ಮೂಲಕ ಸುನಿ ನಾಲ್ಕು ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದರು. ದುಷ್ಯಂತ್ ಚೊಚ್ಚಲ ಸಿನಿಮಾದಲ್ಲಿ ಪಳಗಿದ ನಾಯಕನಂತೆ ಅಭಿನಯಿಸಿ ಸಿನಿಪ್ರಿಯರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ರೊಮ್ಯಾಂಟಿಕ್ ಲವ್ ಸ್ಟೋರಿ

'ಗತವೈಭವ' ಸಿನಿಮಾ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾ.



ಸಿಂಪಲ್ ಸುನಿ ಗತವೈಭವ ಸಿನಿಮಾಗೆ ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ. ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Varanasi: 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ! ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಣೆ?

ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಮತ್ತು ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸುನಿ ನಿರ್ಮಾಣ ಮಾಡ್ತಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ನಟಿಸಿದ್ದಾರೆ.

Yashaswi Devadiga

View all posts by this author