ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವಿದೇಶದಲ್ಲಿ ರೆಸ್ಪೋರೆಂಟ್‌ ಚೈನ್, ಮುಂಬೈ-ಪುಣೆಯಲ್ಲಿ ಐಷಾರಾಮಿ ಮನೆʼ;‌ ಆಶಾ ಬೋಸ್ಲೆ ಹೆಸರಿನಲ್ಲಿರುವ ಆಸ್ತಿ ಎಷ್ಟು ಗೊತ್ತಾ?

Asha Bhonsle Net Worth: ಗಾಯಕಿ ಆಶಾ ಭೋಸ್ಲೆ ಅವರು ನೂರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಹೊಂದಿದ್ದರು ಎಂದು ಅಂದಾಜಿಸಲಾಗಿದೆ. 12 ಸಾವಿರಕ್ಕೂ ಹೆಚ್ಚು ಹಾಡುಗಳು ಮತ್ತು ಜಾಗತಿಕ ಕನ್ಸರ್ಟ್‌ಗಳ ಮೂಲಕ ಆದಾಯ ಗಳಿಸಿದ್ದ ಅವರು, ರೆಸ್ಟೋರೆಂಟ್ ಸರಣಿ ಮೂಲಕ ಉದ್ಯಮದಲ್ಲೂ ಯಶಸ್ವಿಯಾಗಿದ್ದರು.

ಭಾರತೀಯ ಚಿತ್ರರಂಗ ಕಂಡ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಅವರು ನಿಧನರಾಗಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡ ಆಶಾ ಭೋಸ್ಲೆ ಅವರು ತಮ್ಮ ವೃತ್ತಿಬದುಕಿನಲ್ಲಿ ಮಾತ್ರ ಏರುಗತಿಯಲ್ಲೇ ಸಾಗಿದರು. ಅದರ ಜೊತೆಗೆ ಆರ್ಥಿಕವಾಗಿಯೂ ಉನ್ನತಿ ಹೊಂದಿದ್ದರು. ಅವರ ಆಸ್ತಿಯ ಒಟ್ಟಾರೆ ಮೌಲ್ಯ ಸುಮಾರು 250 ಕೋಟಿ ರೂ. ಗಳಿಗೂ ಅಧಿಕ ಎಂಬ ಮಾಹಿತಿ ಇದೆ.

ಸುಮಾರು 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಆಶಾ ಭೋಸ್ಲೆ ಅವರು ನೂರಾರು ಮ್ಯೂಸಿಕ್‌ ಕನ್ಸರ್ಟ್‌ಗಳನ್ನು ದೇಶ-ವಿದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ. ಜೊತೆಗೆ ಜೊತೆಗೆ ಆರಂಭದಲ್ಲಿ ಸಿಗದೇ ಇದ್ದರೂ, ನಂತರ ಕಾಲ ಬದಲಾದಂತೆ ರಾಯಲ್ಟಿಯನ್ನು ಕೂಡ ಪಡೆದುಕೊಳ್ಳುತ್ತಿದ್ದರು. ಸಂಗೀತದಿಂದಲೇ ಅಪಾರ ಆದಾಯ ಪಡೆಯುತ್ತಿದ್ದ ಆಶಾ ಭೋಸ್ಲೆ, ನಂತರ ಉದ್ಯಮಕ್ಕಿಳಿದರು. ಅದರಲ್ಲೂ ಅವರ ರೆಸ್ಟೋರೆಂಟ್‌ ಬ್ಯುಸಿನೆಸ್‌ ವಿದೇಶಗಳಲ್ಲಿ ಹೆಚ್ಚು ಫೇಮಸ್‌ ಆಗಿದೆ.

Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಬಾಲಿವುಡ್‌ ತಾರೆಯರು ಸಂತಾಪ

ತಮ್ಮದೇ ಹೆಸರಿನ ರೆಸ್ಟೋರೆಂಟ್‌ ಸರಣಿ

ಆಶಾ ಭೋಸ್ಲೆ ಅವರು 'ಆಶಾಸ್' ಎಂಬ ತಮ್ಮದೇ ಆದ ರೆಸ್ಟೋರೆಂಟ್ ಸರಣಿಯೊಂದಿಗೆ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸಿದರು. ದುಬೈ ಮತ್ತು ಯುಕೆಗಳಲ್ಲಿ 'ಆಶಾಸ್' ರೆಸ್ಟೋರೆಂಟ್‌ನ ಶಾಖೆಗಳಿವೆ. ಇವು ವಿದೇಶಗಳಲ್ಲಿ ಭಾರತೀಯ ಭೋಜನದ ಅನುಭವಕ್ಕೆ ಹೆಸರುವಾಸಿಯಾಗಿವೆ. ಹಾಸ್ಪಿಟಾಲಿಟಿ ಗ್ರೂಪ್‌ಗಳ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ರೆಸ್ಟೋರೆಂಟ್‌ ಉದ್ಯಮದಿಂದ ಆಶಾ ಭೋಸ್ಲೆ ಅವರು ಸ್ಥಿರವಾದ ಆದಾಯವನ್ನು ಪಡೆಯಲು ಆರಂಭಿಸಿದರು. ರೆಸ್ಟೋರೆಂಟ್‌ನಲ್ಲಿ ತಮ್ಮ ಮನಸ್ಸಿಗೆ ಹತ್ತಿರವಾದ ಮತ್ತು ತಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಹಾರ ಶೈಲಿಯ ಮೆನುಗಳನ್ನು ಸ್ವತಃ ಆಶಾ ಅವರೇ ಸಿದ್ಧಪಡಿಸಿದ್ದರು ಎಂಬ ಮಾತಿದೆ.

Asha Bhosle Death: ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ: ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಂತಾಪ

ಐಷಾರಾಮಿ ಮನೆಗಳನ್ನು ಹೊಂದಿದ್ದ ಆಶಾ

ಆಶಾ ಭೋಸ್ಲೆ ಅವರು ಮುಂಬೈ ಮತ್ತು ಪುಣೆಯಲ್ಲಿ ಐಷಾರಾಮಿ ನಿವಾಸ ಹೊಂದಿದ್ದಾರೆ. ಈ ಮನೆಗೆ 'ಪ್ರಭು ಕುಂಜ್' ಎಂದು ಹೆಸರಿಡಲಾಗಿದೆ. ಈ ಮನೆಯೂ ಸೇರಿದಂತೆ ಹಲವಾರು ಆಸ್ತಿಗಳನ್ನು ಆಶಾ ಹೊಂದಿದ್ದರು. ಅವರ ರಿಯಲ್ ಎಸ್ಟೇಟ್ ಆಸ್ತಿಯ ಮೌಲ್ಯವೇ ಸುಮಾರು 80 ರಿಂದ 100 ಕೋಟಿ ರೂಪಾಯಿಗಳಷ್ಟು ಇರಬಹುದು ಎಂಬ ಮಾಹಿತಿ ಇದೆ. ನೂರಾರು ಕೋಟಿ ರೂಪಾಯಿಗೆ ಒಡೆಯರಾಗಿದ್ದರೂ, ಆಶಾ ಮಾತ್ರ ಸರಳ ಜೀವನಶೈಲಿಗೆ ಹೆಸರಾಗಿದ್ದರು.

ಮ್ಯೂಸಿಕ್‌ ಕನ್ಸರ್ಟ್‌ಗಳಿಂದ ಹೆಚ್ಚಿನ ಆದಾಯ

ಆಶಾ ಭೋಸ್ಲೆ ಅವರು ತಮ್ಮ ಸಂಗೀತವನ್ನು ಜಾಗತಿಕ ಪ್ರೇಕ್ಷಕರಿಗೆ ಯಶಸ್ವಿಯಾಗಿ ತಲುಪಿಸಿದ ಮೊದಲ ಭಾರತೀಯ ಗಾಯಕಿ ಎಂಬ ಖ್ಯಾತಿ ಪಡೆದುಕೊಂಡಿದ್ದರು. ಯುಕೆ, ಯುಎಸ್ಎ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ವಿವಿಧ ರಾಷ್ಟ್ರಗಳಲ್ಲಿ ಅನೇಕ ಲೈವ್ ಕಾನ್ಸರ್ಟ್‌ಗಳನ್ನು ನಡೆಸಿಕೊಟ್ಟಿದ್ದರು. ಆಶಾ ಅವರ ಕನ್ಸರ್ಟ್‌ಗಳ ಟಿಕೆಟ್‌ಗಳು ಬಹಳ ಬೇಗನೇ ಬಿಕರಿಯಾಗುತ್ತಿದ್ದವು. ಈ ಕಾರ್ಯಕ್ರಮಗಳಿಂದಲೂ ಆಶಾಗೆ ಅಪಾರ ಆದಾಯ ಸಿಕ್ಕಿದೆ. ತಮ್ಮ ಇಳಿವಯಸ್ಸಿನಲ್ಲೂ ಆಶಾ ಭೋಸ್ಲೆ ಅವರು ಲೈವ್ ಶೋಗಳಲ್ಲಿ ಸಕ್ರಿಯರಾಗಿದ್ದರು.

ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಏಪ್ರಿಲ್‌ 12ರಂದು ಬಹುಅಂಗಾಂಗ ವೈಫಲ್ಯದಿಂದಾಗಿ ತಮ್ಮ 92ನೇ ವಯಸ್ಸಿನಲ್ಲಿ ಆಶಾ ಭೋಸ್ಲೆ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆಯು ಸೋಮವಾರ (ಏ.13) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ.