ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಾಯಕಿ ಎಸ್‌. ಜಾನಕಿ - ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಬದುಕಿನಲ್ಲಿ ನಡೆದಿತ್ತು ಅದೊಂದು ಕಾಕತಾಳೀಯ ಘಟನೆ, ಇದ್ದವು ಹಲವು ಸಾಮ್ಯತೆಗಳು

ದಕ್ಷಿಣ ಭಾರತದ ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅವರು ಇಂದು ಸಂಜೆ ನಿಧನರಾಗಿದ್ದು, ಸಂಗೀತ ಲೋಕದ ಸುವರ್ಣ ಯುಗ ಅಂತ್ಯಗೊಂಡಿದೆ. ಅಂದಹಾಗೆ, ಎಸ್‌ಪಿಬಿ ಮತ್ತು ಈಗ ಜಾನಕಮ್ಮ ಇಬ್ಬರೂ ಸಂಗೀತ ಲೋಕದಲ್ಲಿ ಸೃಷ್ಟಿಸಿದ ಮೋಡಿ ಅನನ್ಯವಾದುದು. ಈ ಇಬ್ಬರು ಮಹಾನ್ ಗಾಯಕರ ನಡುವೆ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಸಾಮ್ಯತೆಗಳು ಹಾಗೂ ಕಾಕತಾಳೀಯ ಘಟನೆಗಳು ನಡೆದಿವೆ.

ದಕ್ಷಿಣ ಭಾರತದ ನೈಟಿಂಗೆಲ್‌, ಸ್ವರ ಸಾಮ್ರಾಜ್ಞಿ ಎಸ್‌. ಜಾನಕಿ ಅವರ ನಿಧನದಿಂದಾಗಿ ಸಂಗೀತ ಲೋಕದ ಎವರ್‌ಗ್ರೀನ್ ಧ್ವನಿಯೊಂದು ಇಹಲೋಕದ ಪಯಣ ಮುಗಿಸಿದೆ. ಇದರೊಂದಿಗೆ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಗಾಯನ ಜೋಡಿಯಾಗಿದ್ದ ಎಸ್‌. ಜಾನಕಿ ಮತ್ತು ಎಸ್‌. ಪಿ. ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ) ಅವರ ಅದ್ಭುತ ಯುಗ ಅಂತ್ಯಗೊಂಡಂತಾಗಿದೆ. ಸುಮಾರು 6 ವರ್ಷಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದ ಎಸ್‌ಪಿಬಿ ಮತ್ತು ಈಗ ಜಾನಕಮ್ಮ ಇಬ್ಬರೂ ಸಂಗೀತ ಲೋಕದಲ್ಲಿ ಸೃಷ್ಟಿಸಿದ ಮೋಡಿ ಅನನ್ಯವಾದುದು.

ಇಬ್ಬರ ನಡುವಿನ ಅಪೂರ್ವ ಸಾಮ್ಯತೆಗಳು

ಈ ಇಬ್ಬರು ಮಹಾನ್ ಗಾಯಕರ ನಡುವೆ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಸಾಮ್ಯತೆಗಳು ಹಾಗೂ ಕಾಕತಾಳೀಯ ಘಟನೆಗಳು ನಡೆದಿವೆ. ಇಬ್ಬರೂ ಮೂಲತಃ ಆಂಧ್ರಪ್ರದೇಶದವರಾಗಿದ್ದರೂ, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಅವರಿಗಿದ್ದ ಪ್ರೀತಿ ಅಪಾರವಾಗಿತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದ ನೂರಾರು ಕನ್ನಡ ಗೀತೆಗಳು ಇಂದಿಗೂ ಎವರ್‌ಗ್ರೀನ್ ಆಗಿ ಉಳಿದಿವೆ. ಕನ್ನಡಿಗರ ಮೇಲಿನ ಪ್ರೀತಿಯಿಂದಾಗಿಯೇ ಎಸ್‌. ಜಾನಕಿ ಅವರು ತಮ್ಮ ವಿಶ್ರಾಂತ ಬದುಕನ್ನು ಕಳೆಯಲು ಸಾಂಸ್ಕೃತಿಕ ನಗರಿ ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದರು. ಈಗ ಅವರ ಅಂತ್ಯಕ್ರಿಯೆಯೂ ಮೈಸೂರಿನಲ್ಲೇ ನೆರವೇರಲಿದೆ.

S. Janaki: ನಾಳೆ ಸಂಜೆ ಮೈಸೂರಿನಲ್ಲಿ ಎಸ್‌. ಜಾನಕಿ ಅಂತ್ಯಸಂಸ್ಕಾರ; ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಎಸ್‌ಪಿಬಿ ಪ್ರತಿಭೆ ಗುರುತಿಸಿದ್ದ ಜಾನಕಿ ಅಮ್ಮ!

ಚೆನ್ನೈನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗಾಯನ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದೇ ಜಾನಕಿ ಅಮ್ಮ. ಸಂಗೀತ ಸ್ಪರ್ಧೆಯೊಂದರಲ್ಲಿ ಎಸ್‌ಪಿಬಿ ಅವರ ಅಸಾಧಾರಣ ಗಾಯನ ಪ್ರತಿಭೆಯನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದ್ದ ಜಾನಕಿ ಅವರು, "ಮಗನೇ, ನೀನು ತುಂಬಾ ಚೆನ್ನಾಗಿ ಹಾಡುತ್ತೀಯಾ. ಚಿತ್ರರಂಗಕ್ಕೆ ಬಂದರೆ ನೀನು ದೊಡ್ಡ ಗಾಯಕನಾಗುತ್ತೀಯಾ" ಎಂದು ಬೆನ್ನುತಟ್ಟಿ ಹರಸಿದ್ದರು. ಜಾನಕಮ್ಮ ಅಂದು ಆಡಿದ ಮಾತು ಸುಳ್ಳಾಗಲಿಲ್ಲ; ಮುಂದೆ ಎಸ್‌ಪಿಬಿ ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕನಾಗಿ ಹೊರಹೊಮ್ಮಿದರು.

ಮೈಸೂರಿನಲ್ಲೇ ಕೊನೆಯ ಪ್ರದರ್ಶನ!

ಎಸ್‌. ಜಾನಕಿ ಮತ್ತು ಎಸ್‌ಪಿಬಿ ಬದುಕಿನ ಅತ್ಯಂತ ದೊಡ್ಡ ಕಾಕತಾಳೀಯ ಘಟನೆಯೆಂದರೆ, ಇಬ್ಬರೂ ತಮ್ಮ ವೃತ್ತಿಜೀವನದ ಕೊನೆಯ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡಿದ್ದು ಇದೇ ಮೈಸೂರಿನಲ್ಲಿ! ಒಮ್ಮೆ ಎಸ್‌ಪಿಬಿ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಬಂದಿದ್ದಾಗ, ಹಿಂದಿನ ದಿನ ಸಂಜೆ ಜಾನಕಮ್ಮ ಅವರ ಮನೆಗೆ ಭೇಟಿ ನೀಡಿ, ಒಟ್ಟಿಗೆ ಊಟ ಮಾಡಿ ಸುದೀರ್ಘವಾಗಿ ಮಾತನಾಡಿದ್ದರು.

S Janaki: ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?

ಎಸ್‌ಪಿಬಿ ನನಗೆ ತುಂಬಾ ಕಾಟ ಕೊಡುತ್ತಿದ್ದರು

ಎಸ್‌ಪಿಬಿ ನಿಧನರಾದ ಸಮಯದಲ್ಲಿ ಜಾನಕಿ ಅವರು ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದರು. "ನಾವು ಕೇವಲ ಸಹ-ಗಾಯಕರಷ್ಟೇ ಆಗಿರಲಿಲ್ಲ, ಆತ್ಮೀಯ ಸ್ನೇಹಿತರಾಗಿದ್ದೆವು. ರೆಕಾರ್ಡಿಂಗ್ ಸಮಯದಲ್ಲಿ ಅವರು ನನಗೆ ತುಂಬಾ ಕಾಟ ಕೊಡುತ್ತಿದ್ದರು, ನನಗೆ ಸಖತ್ ಕೋಪ ಬಂದು ಜಗಳ ಕೂಡ ಆಡುತ್ತಿದ್ದೆವು. ಆದರೆ ಅವರು ತಕ್ಷಣ 'ಸಾರಿ ಮೇಡಂ' ಎಂದು ಕ್ಷಮೆ ಕೇಳುತ್ತಿದ್ದರು" ಎಂದು ಜಾನಕಿ ನೆನೆದಿದ್ದರು. ಹಾಡುವಾಗ ಇಬ್ಬರ ನಡುವೆ ಯಾರು ಚೆನ್ನಾಗಿ ಹಾಡುತ್ತಾರೆ ಎಂಬ ಆರೋಗ್ಯಕರ ಪೈಪೋಟಿ ಇರುತ್ತಿತ್ತು. ಈ ಜೋಡಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಹಲವಾರು ಯಶಸ್ವಿ ಸ್ಟೇಜ್ ಶೋಗಳನ್ನು ಒಟ್ಟಿಗೆ ನೀಡಿದೆ.

ತಮ್ಮ ಬದುಕಿನ ಕೊನೆಯ ಶೋ ನಡೆದ ಮೈಸೂರಿನಲ್ಲಿಯೇ ಜಾನಕಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅಂದು ಎಸ್‌ಪಿಬಿ ಅಗಲಿದಾಗ ಕಣ್ಣೀರಿಟ್ಟಿದ್ದ ಜಾನಕಮ್ಮ, ಇಂದು ತಾವೂ ಇಹಲೋಕ ತ್ಯಜಿಸಿದ್ದಾರೆ.