ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ನನ್ನ ಹೊಗಳ್ತಾ ಇದ್ದೀರಾ? ಅಥವಾ ಟ್ರೋಲ್‌ ಮಾಡ್ತಿದ್ದೀರಾ?’: ಪತಿ ನಾಗ ಚೈತನ್ಯ ಮೇಲೆ ಹುಸಿ ಮುನಿಸು ತೋರಿದ ನಟಿ ಶೋಭಿತಾ ಧೂಳಿಪಾಲ!

ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮಾಷೆಯ ಪೋಸ್ಟ್ ಪ್ರೇಕ್ಷಕರ ಗಮನ ಸೆಳೆದಿದೆ. ಮದುವೆಯಾದ ಎರಡು ವರ್ಷಗಳ ನಂತರ ಶೋಭಿತಾ ತಮಗಾಗಿ ರಾತ್ರಿ ಊಟ ಸಿದ್ಧಪಡಿಸಿದ್ದಾಳೆ ಎಂದು ಚೈತನ್ಯ ಕಾಲೆಳೆದರೆ, ಇದಕ್ಕೆ ಶೋಭಿತಾ ನೀಡಿದ ಪ್ರತ್ಯುತ್ತರ ಏನು?

ಟಾಲಿವುಡ್‌ನ ತಾರಾ ದಂಪತಿ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಮುದ್ದಾದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟ ನಾಗ ಚೈತನ್ಯ ಅವರು ತಮ್ಮ ಪತ್ನಿಯನ್ನು ತಮಾಷೆಯಾಗಿ ಕಾಲೆಳೆದಿರುವ ಪೋಸ್ಟ್‌ವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗಿದೆ.

2 ವರ್ಷಗಳ ನಂತರ ಅಡುಗೆ!

ಶೋಭಿತಾ ಅವರು ತಮಗೆ ಊಟ ಬಡಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡ ನಾಗ ಚೈತನ್ಯ, "ಮದುವೆಯಾಗಿ ಸುಮಾರು 2 ವರ್ಷಗಳ ನಂತರ ನನ್ನ ಹೆಂಡತಿ ನನಗಾಗಿ ರಾತ್ರಿ ಊಟ ತಯಾರಿಸಿದ್ದಾಳೆ. ಬಹುಶಃ ನಾನು ಇಂದು ಏನೋ ಒಳ್ಳೆಯ ಕೆಲಸ ಮಾಡಿರಬೇಕು" ಎಂದು ತಮಾಷೆಯ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ತಕ್ಷಣವೇ ಕಾಮೆಂಟ್ ಮಾಡಿದ ಶೋಭಿತಾ, "ನೀವು ನನ್ನನ್ನು ಟ್ರೋಲ್ ಮಾಡುತ್ತಿದ್ದೀರಾ ಅಥವಾ ಹೊಗಳುತ್ತಿದ್ದೀರಾ?" ಎಂದು ಹುಸಿ ಮುನಿಸಿನಿಂದ ಚುರುಕಾಗಿ ಪ್ರಶ್ನಿಸಿದ್ದಾರೆ. ಈ ಜೋಡಿಯ ಮುದ್ದಾದ ಸಂಭಾಷಣೆಗೆ ಅಭಿಮಾನಿಗಳು ಫಿದಾ ಆಗಿದ್ದು, "ಚೈತನ್ಯ ಅವರು ಎರಡನ್ನೂ ಬಹಳ ಮುದ್ದಾಗಿ ಮಾಡುತ್ತಿದ್ದಾರೆ" ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಕಾಲೆಳೆದಿದ್ದಾರೆ.

Naga Chaitanya: ಸಮಂತಾಗೆ ಮೋಸ ! ವೃತ್ತಿಜೀವನವನ್ನು ಹಾಳು ಮಾಡಿದ್ರಿ ಎಂದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ

ನಾಗ ಚೈತನ್ಯ ಹಂಚಿಕೊಂಡ ಪೋಸ್ಟ್‌



ಪ್ರೀತಿ, ನಿಶ್ಚಿತಾರ್ಥ ಮತ್ತು ಮದುವೆ

2022ರಲ್ಲಿ ಲಂಡನ್ ಮತ್ತು ಯುರೋಪ್ ಪ್ರವಾಸಗಳ ಸಂದರ್ಭದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿಯ ಪ್ರೇಮಕಥೆ ಭಾರಿ ಸದ್ದು ಮಾಡಿತ್ತು. ತಮ್ಮ ಸಂಬಂಧವನ್ನು ಖಾಸಗಿಯಾಗಿರಿಸಿಕೊಂಡಿದ್ದ ಇವರು, ಆಗಸ್ಟ್ 8ರಂದು ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ತದನಂತರ, 2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಕುಟುಂಬದ ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ವಿವಾಹವಾದರು.

Naga Chaitanya: ಧೂತ ಸೀಸನ್ 2 ರ ಮೂಹೂರ್ತ ಸಮಾರಂಭದ ಫೋಟೋ ಹಂಚಿಕೊಂಡ ಪಾರ್ವತಿ ತಿರುವೋತ್ತು!

ಸದ್ಯ ಇಬ್ಬರ ವೃತ್ತಿಜೀವನ ಹೇಗಿದೆ?

ನಟಿ ಶೋಭಿತಾ ಧೂಳಿಪಾಲ ಅವರು ಇತ್ತೀಚೆಗೆ ಶರಣ್ ಕೊಪ್ಪಿಶೆಟ್ಟಿ ನಿರ್ದೇಶನದ ‘ಚೀಕಟಿಲೊ’ (2026) ಎಂಬ ತೆಲುಗು ಕ್ರೈಮ್-ಥ್ರಿಲ್ಲರ್ ಚಿತ್ರದಲ್ಲಿ ವಿಶ್ವದೇವ್ ರಚಕೊಂಡ, ಚೈತನ್ಯ ಕೃಷ್ಣ ಹಾಗೂ ಇಶಾ ಚಾವ್ಲಾ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅತ್ತ ನಟ ನಾಗ ಚೈತನ್ಯ ಅವರು ಚಂದೂ ಮೊಂಡೇಟಿ ನಿರ್ದೇಶನದ ‘ತಂಡೇಲ್’ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆ ನಟಿಸಿದ್ದು, ಸದ್ಯ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.