ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಕೇಕೆʼ ಚಿತ್ರದ ʻಗುಂಟೂರು ಅಮ್ಮಾಯಿʼ ಐಟಂ ಸಾಂಗ್‌ನಲ್ಲಿ ಸೋನು ಶ್ರೀನಿವಾಸ್‌ ಗೌಡ ಭರ್ಜರಿ ಸ್ಟೆಪ್‌; ಹುಟ್ಟುಹಬ್ಬಕ್ಕೆ ಸಖತ್‌ ಗಿಫ್ಟ್‌

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ‘ಕೇಕೆ’ ಚಿತ್ರದ ‘ಗುಂಟೂರು ಅಮ್ಮಾಯಿ’ ಎಂಬ ವಿಶೇಷ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರಣ್ ತೋಟಂಬೈಲ್ ಸಂಗೀತ ನೀಡಿರುವ ಈ ಹಾಡಿನಲ್ಲಿ ತೆಲುಗು ಸಾಹಿತ್ಯ ಬಳಸಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಮತ್ತು ಚಿತ್ರತಂಡದ ನಡುವೆ ಭಾರಿ ವಾಗ್ವಾದ ಜರುಗಿತು.

ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಾ ವೈರಲ್ ಆಗುವ ಸೋನು ಶ್ರೀನಿವಾಸ್ ಗೌಡ ಇದೀಗ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬಹುತೇಕ ಹೊಸ ಕಲಾವಿದರೇ ನಟಿಸಿರುವ, ಬಿಡುಗಡೆಗೆ ಸಜ್ಜಾಗಿರುವ ‘ಕೇಕೆ’ ಚಿತ್ರದ ವಿಶೇಷ ಐಟಂ ಹಾಡಿಗೆ ಸೋನು ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಈ ಹಾಡನ್ನು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ.

ಈ ಹಾಡಿಗೆ ಐಶ್ವರ್ಯಾ ರಂಗರಾಜನ್‌ ಧ್ವನಿ

ಜಿ. ಕೆ. ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೇಕೆ’ ಚಿತ್ರಕ್ಕೆ ಬಳ್ಳಾರಿ ಹೊಸಪೇಟೆ ಮೂಲದ ರಮಾಲಿ ನಾಯ್ಕ್ ಮತ್ತು ಕಲ್ಯಾಣ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಭರತ್ ಇಂಡಿಯಾ ಅವರ ಛಾಯಾಗ್ರಹಣವಿದೆ. ಉಪೇಂದ್ರ ನಟನೆಯ ‘ಐ ಲವ್ ಯೂ’ ಚಿತ್ರದ ಖ್ಯಾತಿಯ ಕಿರಣ್ ತೋಟಂಬೈಲ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪ್ರಸ್ತುತ ಬಿಡುಗಡೆಯಾಗಿರುವ ‘ಗುಂಟೂರು ಅಮ್ಮಾಯಿ’ ಹಾಡಿಗೆ ಅವರೇ ಸಾಹಿತ್ಯ ಬರೆದು ಟ್ಯೂನ್ ಹಾಕಿದ್ದಾರೆ. ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧನಿಯಾಗಿದ್ದಾರೆ.

Sonu Srinivas Gowda: ಬಿಕಿನಿ ತೊಟ್ಟು ಶ್ರೀಲಂಕಾ ಬೀಚ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

ಪ್ರೆಸ್‌ಮೀಟ್‌ನಲ್ಲಿ ಸಾಹಿತ್ಯದ ಕುರಿತು ಮಾತಿನ ಚಕಮಕಿ

‘ಗುಂಟೂರು ಅಮ್ಮಾಯಿ...’ ಹಾಡು ತೆಲುಗು ಮಿಶ್ರಿತವಾಗಿದೆ. ಕನ್ನಡ ಹಾಡಿನಲ್ಲಿ ತೆಲುಗು ಪದಗಳನ್ನು ಬಳಸಿದ್ದು ಗಲಾಟೆಗೆ ಕಾರಣವಾಗಿದೆ. ಹೌದು, ಪತ್ರಿಕಾಗೋಷ್ಠಿಯಲ್ಲಿ ಈ ಹಾಡಿನ ಭಾಷೆಯ ವಿಚಾರವಾಗಿ ಚಿತ್ರತಂಡ ಮತ್ತು ಪತ್ರಕರ್ತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. "ಕನ್ನಡ ಚಿತ್ರದಲ್ಲಿ ತೆಲುಗು ಸಾಹಿತ್ಯದ ಬಳಕೆ ಏಕೆ?" ಎಂದು ಪತ್ರಕರ್ತರು ಪ್ರಶ್ನಿಸಿದಾಗ, "ಸಾಧ್ಯವಾದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳಲಾಗುವುದು" ಎಂದು ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಸ್ಪಷ್ಟನೆ ನೀಡಿದರು.

ಸೋನು ಶ್ರೀನಿವಾಸ್ ಗೌಡಗೆ ಹುಟ್ಟುಹಬ್ಬದ ಸಂಭ್ರಮ

ಬೆಳ್ಳಿಪರದೆ ಮೇಲೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿರುವ ಸೋನು ಶ್ರೀನಿವಾಸ್ ಗೌಡ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮೊದಲ ಸಿನಿಮಾದ ಅನುಭವವನ್ನು ಹಂಚಿಕೊಂಡರು. ತಮಗೆ ಸಿಕ್ಕ ಈ ದೊಡ್ಡ ಅವಕಾಶಕ್ಕೆ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ಅವರು, ಪ್ರೇಕ್ಷಕರ ಆಶೀರ್ವಾದ ಸದಾ ಇರಲಿ ಎಂದು ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರತಂಡವು ಸೋನು ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿತು. ಸದ್ಯ ‘ಕೇಕೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಇನ್ನಿತರ ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ಪ್ರಕಟಿಸಿದೆ.