ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕಂಟೆಂಟ್ ಆಧಾರಿತ ಸಿನಿಮಾಗಳದ್ದೇ ಹವಾ. ಹೊಸ ತಂಡಗಳ ವಿಭಿನ್ನ ಪ್ರಯೋಗಗಳನ್ನು ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ. ಈ ಸಾಲಿಗೆ ಸೇರ್ಪಡೆಯಾಗಲು ಮತ್ತೊಂದು ಹೊಸಬರ ವಿಶಿಷ್ಟ ಸಿನಿಮಾ "ಅನಂತ ಪಯಣ" ಕಾತರದಿಂದ ಕಾಯುತ್ತಿದೆ.
ಇದು ಶ್ರೀ ಕಾಕಾ ಅವರ ಸಿನಿಮಾ
ವೃತ್ತಿಯಲ್ಲಿ ನೃತ್ಯ ಕಲಾವಿದರಾಗಿ, ಸಹ ನಿರ್ದೇಶಕರಾಗಿ ದುಡಿದ ಅನುಭವವಿರುವ ಶ್ರೀ ಕಾಕಾ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮತ್ತು ನಾಯಕರಾಗಿ ಚಿತ್ರರಂಗದಲ್ಲಿ ಬಡ್ತಿ ಹೊಂದುತ್ತಿದ್ದಾರೆ. ಎಸ್ ಕೆ ಫಿಲಂಸ್ ಫ್ಯಾಕ್ಟರಿ ಲಾಂಛನದಲ್ಲಿ ಸಂತೋಷ್ ಅಶೋಕ್ ಹೆಗಡೆ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Kuruba community: ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿಎಂ
ಏನಿದು 'ಅನಂತ ಪಯಣ'?
ಶೀರ್ಷಿಕೆಯೇ ಹೇಳುವಂತೆ ಇದೊಂದು ಪಯಣದ ಕಥೆ. ನಿರ್ದಿಷ್ಟವಾದ ಮನೆಯಿಲ್ಲದೆ, ಋತುಮಾನಗಳಿಗೆ ಅನುಗುಣವಾಗಿ ಕುರಿಗಳೊಂದಿಗೆ ನೂರಾರು ಕಿಲೋಮೀಟರ್ ಸಂಚರಿಸುವ "ಸಂಚಾರಿ ಕುರುಬರ" ಬದುಕನ್ನು ಈ ಚಿತ್ರದ ಮೂಲಕ ತೆರೆದಿಡಲಾಗುತ್ತಿದೆ. ಕನ್ನಡದಲ್ಲಿ ಇಂತಹ ಕಥಾವಸ್ತುಗಳು ಬರುವುದು ತೀರಾ ಅಪರೂಪವಾಗಿದ್ದು, ನಿರ್ದೇಶಕ ಶ್ರೀ ಕಾಕಾ ಅವರೇ ಕಥೆ ಬರೆದು ಕುರಿಗಾಹಿಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ಬೆಳಗಾವಿ, ಬೆಂಗಳೂರು ಹಾಗೂ ಮಹಾರಾಷ್ಟ್ರದ ನೈಸರ್ಗಿಕ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
Kurubara Sangha: 34 ಕೋಟಿ ರೂ. ವೆಚ್ಚದಲ್ಲಿ ಕುರುಬರ ಸಂಘದ ನೂತನ ಕಟ್ಟಡ ನಿರ್ಮಿಸಲು ಕ್ರಮ: ಸಿಎಂ ಸಿದ್ದರಾಮಯ್ಯ
ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ಅನಂತ ಪಯಣ ಚಿತ್ರದದಲ್ಲಿ ಶ್ರೀ ಕಾಕಾಗೆ ನಾಯಕಿಯಾಗಿ ನಿವಿಶ್ಕಾ ಪಾಟೀಲ್ ನಟಿಸಿದ್ದು, ಎಂ. ಕೆ ಮಠ, ಮಂಜುನಾಥ್ ಹೆಗಡೆ, ಅಪೂರ್ವ ಶ್ರೀ, ಲಕ್ಷ್ಮೀ ಸಿದ್ದಯ್ಯ, ಬಲ ರಾಜವಾಡಿ, ಸಂದೀಪ್ ನೀನಾಸಂ, ಪ್ರಶಾಂತ್ ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಆಕಾಶ ಪರ್ವ ಅವರ ಸಂಗೀತ, ವಿನೋದ್ ಭಾರತಿ ಅವರ ಛಾಯಾಗ್ರಹಣ ಹಾಗೂ ದೀಪು ಗೌಡ ಅವರ ಸಂಕಲನ ಅನಂತ ಪಯಣ ಚಿತ್ರಕ್ಕಿದೆ.
ಕುರುಬ ಸಮುದಾಯದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಶಾಸಕ ಗೌರಿಶಂಕರ್ ಧನಸಹಾಯ
ಚಿತ್ರದಲ್ಲಿ ಐದು ಹಾಡುಗಳು ಹಾಗೂ ರಿಸ್ಕಿ ಶಿವು ಸಂಯೋಜಿಸಿರುವ ಮೂರು ಸಾಹಸ ಸನ್ನಿವೇಶಗಳಿವೆ. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ರೀ-ರೆಕಾರ್ಡಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.