ನಟ ಯುವ ರಾಜ್‌ಕುಮಾರ್ (Yuva Rajkumar) ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ಭಿನ್ನಾಭಿಪ್ರಾಯ ಹಾಗೂ ಡಿವೋರ್ಸ್ (Divorce) ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ತಾವು ಹಂಚಿಕೊಂಡಿರುವ ಎಲ್ಲ ಫೋಟೊಗಳನ್ನು ತಮ್ಮ ಗಂಡ ಯುವ ರಾಜ್‌ಕುಮಾರ್ ಅವರು ತಮ್ಮ ಫೋನಿನಲ್ಲಿ ಕ್ಲಿಕ್ಕಿಸಿದ್ದು ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಕುತೂಹಲ ಮೂಡಿಸಿದೆ ಶ್ರೀದೇವಿ ಭೈರಪ್ಪ ಪೋಸ್ಟ್
ಶ್ರೀದೇವಿ ಭೈರಪ್ಪ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗಷ್ಟೇ ಹಾಕಿರುವ ಪೋಸ್ಟ್‌ವೊಂದು ಇದೀಗ ಕುತೂಹಲ ಮೂಡಿಸಿದೆ. ತಮ್ಮದೇ ಫೋಟೊಗಳನ್ನು ಹಂಚಿಕೊಂಡಿರುವ ಅವರು 'ಡಿಯರ್ ಹಸ್ಬೆಂಡ್' ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Nana Patekar: ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ
'ಅವನ ಫೋನ್‌ನಲ್ಲಿ ನನ್ನ ಇಂತಹ ಸಾವಿರಾರು ಫೋಟೊಗಳಿದ್ದವು; ಅವುಗಳನ್ನು ನೋಡಿ ನಾನೇನೋ ತುಂಬಾ 'ಸ್ಪೆಷಲ್' ಎಂದುಕೊಂಡಿದ್ದೆ. ಆದರೆ, ಒಂದು ದಿನ ಅವನ ಗ್ಯಾಲರಿಯಲ್ಲಿ ಮತ್ತೊಬ್ಬ ಹುಡುಗಿಯ ಇದೇ ರೀತಿಯ ಫೋಟೊಗಳನ್ನು ನೋಡುವವರೆಗೂ ಮಾತ್ರ ಆ ನಂಬಿಕೆ ಇತ್ತು! ನಾನು ಆಕೆಗೆ ಇಷ್ಟನ್ನು ಹೇಳಲು ಬಯಸುತ್ತೇನೆ. 'ನೀನು ಕೂಡ ಸ್ಪೆಷಲ್ ಏನೂ ಅಲ್ಲ'. ಆ ಫೋಟೊಗಳ ಮೇಲೆ ದೃಷ್ಟಿಬೊಟ್ಟಿಟ್ಟು ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನವಿಲ್ಲ ಎಂದು ಬರೆದುಕೊಂಡಿದ್ದಾರೆ.
ಶ್ರೀದೇವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವಾರು ನೆಟ್ಟಿಗರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ' "ಒಂದು ವೇಳೆ ಅಪ್ಪು ಸರ್ ಇದ್ದಿದ್ದರೆ ಖಂಡಿತ ನಿಮ್ಮ ಪರವಾಗಿ ನಿಲ್ಲುತ್ತಿದ್ದರು ಅಲ್ವಾ?" ಎಂದು ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗೆ ತಕ್ಷಣವೇ ಸ್ಪಂದಿಸಿದ ಶ್ರೀದೇವಿ ಭೈರಪ್ಪ ಅವರು, "100000%" ಎಂದು ಬರೆದು ರೆಡ್ ಹಾರ್ಟ್ ಎಮೋಜಿ ನೀಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ನಿಮ್ಮದು ಮೊಸಳೆ ಕಣ್ಣೀರೆ! ಮಾತಲ್ಲೇ ಆಸಿಯಾಗೆ ಚಾಟಿ ಏಟು ಕೊಟ್ಟ ಗಾನವಿ
ಆಕೆಯೊಂದಿಗೆ ಅಫೇರ್ ಹೊಂದಿದ್ದಾರೆಯೇ ಎಂದು ಕೇಳಿದ್ದಕ್ಕೆ, ಯೆಸ್ ಎಂದು ಉತ್ತರಿಸಿದ್ದಾರೆ.ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಡಿವೋರ್ಸ್ ಪ್ರಕರಣವು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು.