ಡೆಡ್ಲಿ ಸ್ಟಾರ್ ಆದಿತ್ಯ ಅವರು ಸ್ಯಾಂಡಲ್‌ವುಡ್‌ಗೆ ಟೆರರ್ ಆಗಿ ಬರುತ್ತಿದ್ದಾರೆ. ಅರ್ಥಾತ್, ಅವರ ಹೊಸ ಸಿನಿಮಾ ಟೆರರ್ ತೆರೆಗೆ ಬರುತ್ತಿದೆ. ವಿಶೇಷವೆಂದರೆ, ಈ ಸಿನಿಮಾದ ಮೂಲಕ 21 ವರ್ಷಗಳ ನಂತರ ಶ್ರೀನಗರ ಕಿಟ್ಟಿ ಮತ್ತು ಆದಿತ್ಯ ಒಟ್ಟಿಗೆ ನಟಿಸಿದ್ದಾರೆ. "ನನ್ನ ಗೆಳೆಯ ಆದಿತ್ಯ ಅವರ ಜೊತೆಗೆ ಆದಿ ಚಿತ್ರದಲ್ಲಿ ನಟಿಸಿದ್ದೆ. ಬಹಳ ವರ್ಷಗಳ ನಂತರ ಈಗ ಈ ಚಿತ್ರದಲ್ಲಿ ನಟಿಸಿದ್ದೇನೆ" ಎಂದು ಖುಷಿ ವ್ಯಕ್ತಪಡಿಸುತ್ತಾರೆ ನಟ ಶ್ರೀನಗರ ಕಿಟ್ಟಿ.
ಈ ಸಿನಿಮಾವನ್ನು ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಸುವಂತೆ ಶ್ರೀನಗರ ಕಿಟ್ಟಿಗೆ ಕೇಳಿದಾಗ, "ನಿರ್ದೇಶಕರು ಬಂದು ಕಥೆ ಹೇಳಿದಾಗ, ನಿರ್ಮಾಪಕರು ಯಾರು ಎಂದು ಕೇಳಿದೆ. ಸಿಲ್ಕ್ ಮಂಜು ಅಂತ ಅವರು ಹೇಳಿದರು. ನಾನು ಕಥೆ ಹೇಳಬೇಡಿ, ಮಂಜು ನನ್ನ ಸಾಕಷ್ಟು ವರ್ಷಗಳ ಸ್ನೇಹಿತರು. ಅವರಿಗಾಗಿ ಈ ಸಿನಿಮಾ ಮಾಡುತ್ತೇನೆ ಅಂದೆ" ಎಂದು ಹೇಳುತ್ತಾರೆ.
ಗೌಳಿಯಲ್ಲಿ ರಗಡ್ ಲುಕ್ ತಾಳಿದ ಶ್ರೀನಗರ ಕಿಟ್ಟಿ
ನಟ ಆದಿತ್ಯ ಏನಂದ್ರು?
"ನಮ್ಮ ಚಿತ್ರ ಆರಂಭವಾದ ದಿನದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ. ಈ ಚಿತ್ರ ಉತ್ತಮವಾಗಿ ಮೂಡಿಬರಲು ಇಡೀ ಚಿತ್ರತಂಡ ಕಾರಣ. ವಿಶೇಷವಾಗಿ ಇಂತಹ ಸಂದರ್ಭದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರಿಗೆ ವಿಶೇಷ ಧನ್ಯವಾದ. ರಂಜನ್ ಮೊದಲ ನಿರ್ದೇಶನದಲ್ಲೇ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಹಾಗೂ ಶ್ರೀನಗರ ಕಿಟ್ಟಿ 21 ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ ಹೀಗೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಮ್ಮ ಚಿತ್ರ ಇದೇ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ" ಎನ್ನುತ್ತಾರೆ ಆದಿತ್ಯ.
ಕನ್ನಡ - ತಮಿಳಿನಲ್ಲಿ ರಿಲೀಸ್ ಆಯ್ತು ʻಲೈಫ್ ಟುಡೇʼ ಚಿತ್ರದ ಹಾಡು; ಕಿರಣ್ ಆದಿತ್ಯಗೆ ಜೋಡಿಯಾದ ಲೇಖಾ ಚಂದ್ರ
ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ "ಟೆರರ್" ಚಿತ್ರದ ಟ್ರೇಲರ್ ಅನ್ನು ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ ಬಾಬು, ಹಿರಿಯ ಕಲಾವಿದರಾದ ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಸುಂದರರಾಜ್, ಪ್ರಮೀಳಾ ಜೋಷಾಯ್, ಡಿಂಗ್ರಿ ನಾಗರಾಜ್, ಲಹರಿ ವೇಲು ಹಾಗೂ ಬ್ರಹ್ಮಾಂಡ ಗುರೂಜಿ ರಿಲೀಸ್ ಮಾಡಿ, ಸಿನಿಮಾ ಯಶಸ್ವಿಯಾಗಲೆಂದು ಹಾರೈಸಿದರು.
ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಸಂಯೋಜನೆಯ ಹಾಡುಗಳಿಗೆ ಡಾ. ವಿ. ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಸಿಹಿ ಕಹಿ ಚಂದ್ರು, ಕೀರ್ತಿರಾಜ್, ಕರಿ ಸುಬ್ಬು, ಮುಂಬೈ ನಟಿ ಶಿವಾಂಗಿ, ನಾಗೇಂದ್ರ ಅರಸ್, ರವಿಚೇತನ್, ಕೋಟೆ ಪ್ರಭಾಕರ್, ರವಿ ಭಟ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಛಾಯಾಗ್ರಹಣವನ್ನು ನವೀನ್ ಅಕ್ಷಿ ಮಾಡಿದ್ದು, ಶ್ರೀಕಾಂತ್ ಸಂಕಲನ ಮಾಡಿದ್ದಾರೆ.