ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಈ ವಾರ ಮಹಾಕವಿ ಮಂಜ ಎಲಿಮಿನೇಟ್‌? ವೀಕ್ಷಕರಿಗೆ ಭಾರೀ ಅಸಮಾಧಾನ

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಬೀಪ್ ಪದಗಳನ್ನು ಮಂಜ ಬಳಸಿದ್ದಕ್ಕೆ ಇನ್ನುಳಿದ ಸ್ಪರ್ಧಿಗಳಿಗೆ ಅಸಹ್ಯ ಎನಿಸಿದೆ. ಶೋನ ಪ್ರಾಪರ್ಟಿ ಹಾನಿಗೊಳಿಸಿ ಇತರ ಸ್ಪರ್ಧಿ ನಿಂದಿಸಿದ ಅವರ ಈ ವರ್ತನೆಯಿಂದಾಗಿ, ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರವೇ ಅವರನ್ನು ಎಲಿಮಿನೇಟ್ (Eliminate) ಮಾಡ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಮಹಾಕವಿ ಮಂಜ

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಬೀಪ್ ಪದಗಳನ್ನು ಮಂಜ ಬಳಸಿದ್ದಕ್ಕೆ ಇನ್ನುಳಿದ ಸ್ಪರ್ಧಿಗಳಿಗೆ ಅಸಹ್ಯ ಎನಿಸಿದೆ. ಶೋನ ಪ್ರಾಪರ್ಟಿ ಹಾನಿಗೊಳಿಸಿ ಇತರ ಸ್ಪರ್ಧಿ ನಿಂದಿಸಿದ ಅವರ ಈ ವರ್ತನೆಯಿಂದಾಗಿ, ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರವೇ ಅವರನ್ನು ಎಲಿಮಿನೇಟ್ (Eliminate) ಮಾಡ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನೀಡಲಾಗಿತ್ತು. ಯಶಸ್​ಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’ ಎಂದು ಮಂಜ ಕರೆದಿದ್ದರು. ಯಶಸ್​ ಅವರನ್ನು ಕಾಮುಕ ಎಂದರು. ಆ ಬಳಿಕ ಅತಿಯಾದ ಅವಾಚ್ಯ ಶಬ್ದಗಳ ಬಳಸಿದರು. ಯಶಸ್ ಅವರ ಕುಟುಂಬದವರ ಬಗ್ಗೆ ಮಂಜ ಅಶ್ಲೀಲ ಪದಗಳನ್ನು ಬಳಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ರಾಕ್ಷಸನಾಗಿ ಮೆರೆದ ಮಂಜನ ವಿರುದ್ಧ ತಿರುಗಿ ಬಿದ್ದ ಸ್ಪರ್ಧಿಗಳು!



ರಾಕ್ಷಸರು ಹೇಳಿದ ಬಹುತೇಕ ಎಲ್ಲ ಕೆಲಸವನ್ನೂ ಮಂಜ ಮಾಡುತ್ತಿದ್ದರು.ಅಂತಿಮವಾಗಿ ತುಂಬಾ ಅಸಹ್ಯವಾಗಿ ಮಾತನಾಡಿದ್ದಾರೆ.ಈ ವಾರಾಂತ್ಯದಲ್ಲಿ ಮಂಜ ಹೊರಗೆ ಹೋಗೋದು ಪಕ್ಕಾ ಅಂತ ಕಮೆಂಟ್‌ ಮಾಡಿದ್ದಾರೆ ವೀಕ್ಷಕರು.

ಇದನ್ನೂ ಓದಿ: Bigg Boss Kannada 13: ರಾಕ್ಷಸನಾಗಿ ಮೆರೆದ ಮಂಜನ ವಿರುದ್ಧ ತಿರುಗಿ ಬಿದ್ದ ಸ್ಪರ್ಧಿಗಳು!

ಕೆಲವು ಟಾರ್ಚರ್‌ ಅತಿರೇಕಕ್ಕೆ ಹೋಗುತ್ತಿದ್ದರೂ, ನೋಡಿಕೊಂಡು ಸುಮ್ಮನಿದ್ದ ಉಸ್ತುವಾರಿ ಆಸಿಯಾ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್ ಮೇಲೆ ವೀಕ್ಷಕರಿಗೆ ಭಾರೀ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಮಟ್ಟ ತಲುಪುವಲ್ಲಿ ಸ್ಪರ್ಧಿಗಳು ವಿಫಲರಾಗಿದ್ದಾರೆ

Yashaswi Devadiga

View all posts by this author