ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sudhindra venkatesh: ಪ್ರಚಾರಕರ್ಥ ಸುಧೀಂದ್ರ ವೆಂಕಟೇಶ್‍ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍

Sudhindra venkatesh: ಸೋಮವಾರ (ಫೆ.23), ಮಂತ್ರಾಲಯದಲ್ಲಿ ಸುಧೀಂದ್ರ ವೆಂಕಟೇಶ್‍ ಅವರಿಗೆ ಗೌರವ ಡಾಕ್ಟರೇಟ್‍ ಪ್ರದಾನವಾಗಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸುಧೀಂದ್ರ ವೆಂಟಕೇಶ್‍ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್‍ ನೀಡಲಾಗಿದೆ.

ಸುಧೀಂದ್ರ ವೆಂಕಟೇಶ್‍

ಕನ್ನಡ ಚಿತ್ರರಂಗದ (Sandalwood) ಜನಪ್ರಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್‍, ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅಮೇರಿಕಾದ ಫ್ಲೋರಿಡಾದ ಯೋಗ – ಸಂಸ್ಕೃತಂ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದೆ. ಸೋಮವಾರ (ಫೆ.23), ಮಂತ್ರಾಲಯದಲ್ಲಿ ಸುಧೀಂದ್ರ ವೆಂಕಟೇಶ್‍ (sudhindra venkatesh) ಅವರಿಗೆ ಗೌರವ ಡಾಕ್ಟರೇಟ್‍ ಪ್ರದಾನವಾಗಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸುಧೀಂದ್ರ ವೆಂಟಕೇಶ್‍ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್‍ (Doctarate) ನೀಡಲಾಗಿದೆ.

ಇದನ್ನೂ ಓದಿ: Samantha Ruth Prabhu : ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ? ಸ್ಯಾಮ್‌ ಕೊಟ್ಟ ಸ್ಪಷ್ಟನೆ ಇದು

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕಳೆದ 50 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಇತಿಹಾಸವಿರುವ ಮತ್ತು ಇನ್ನೂ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿ ಶ್ರೀ ರಾಘವೇಂದ್ರ ಚಿತ್ರವಾಣಿ ಗುರುತಿಸಿಕೊಂಡಿದೆ.

Sudhindra Venkatesh awarded honorary doctorate by American University

ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಚಿತ್ರಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ಈಶ್ವರಿ ಪ್ರೊಡಕ್ಷನ್ಸ್, ಕೆ.ಸಿ.ಎನ್‍ ಎಂಟರ್ ಪ್ರೈಸಸ್, ರಾಕ್‍ಲೈನ್‍ ಪ್ರೊಡಕ್ಷನ್ಸ್, ಹೊಂಬಾಳೆ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್‍, ರಿಷಭ್‍ ಶೆಟ್ಟಿ ಫಿಲ್ಮ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಕೆಲಸ ಮಾಡಿರುವ ವೆಂಕಟೇಶ್‍, ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Amruthadhaare Serial: ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯಾಯ್ತು; ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!

ಸುಧೀಂದ್ರ ಅವರ ನಿಧನದ ನಂತರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

Yashaswi Devadiga

View all posts by this author