ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Govinda: 30 ವರ್ಷದ ಆ ನಟಿ ಜೊತೆ ಗೋವಿಂದಾ ಅಫೇರ್‌? ಡಿವೋರ್ಸ್ ಅರ್ಜಿ ಸಲ್ಲಿಸಿದ ಪತ್ನಿ ಸುನೀತಾ ಅಹುಜಾ!

ಬಾಲಿವುಡ್‌ ಹಿರಿಯ ನಟ ಗೋವಿಂದಾ ಅವರ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನವ ಸುದ್ದಿ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಗೋವಿಂದಾ ಅವರ ಪತ್ನಿ ಸುನೀತಾ ಅಹುಜಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಮುಂಬೈ: ಬಾಲಿವುಡ್‌ ಹಿರಿಯ ನಟ ಗೋವಿಂದಾ (Actor Govinda) ಅವರ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನವ ಸುದ್ದಿ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಗೋವಿಂದ್ ಹಾಗೂ ಸುನೀತಾ ಅಹುಜಾ (Sunita Ahuja) ದಾಂಪತ್ಯಗೊಳಿಸುತ್ತಿದ್ದಾರೆ ಎಂದು ಹಲವು ಬಾರಿ ಹೇಳಲಾಗಿತ್ತು. ಬಳಿಕ ಈ ಜೋಡಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡು ವಿವಾದಗಳಿಗೆ ತೆರೆ ಎಳೆದಿದ್ದರು. ಇದೀಗ ಗೋವಿಂದಾ ಅವರ ಪತ್ನಿ ಸುನೀತಾ ಅಹುಜಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಗೋವಿಂದಾ ತನೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ವ್ಯಭಿಚಾರದ ಆರೋಪ ಮಾಡಿ ಪತಿ ಗೋವಿಂದರಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಸುನೀತಾ ಅಹುಜಾ ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 13 (1) (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ . ಮೇ 25 ರಂದು ನ್ಯಾಯಾಲಯ ಗೋವಿಂದಾಗೆ ಸಮನ್ಸ್ ಜಾರಿ ಮಾಡಿತ್ತು ಮತ್ತು ಜೂನ್‌ನಿಂದ ಇಬ್ಬರೂ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಹೇಳಿಕೊಂಡಿದೆ. ಜೂನ್ ತಿಂಗಳಿಂದ ಎರಡು ಬಾರಿ ಕೋರ್ಟ್ ವಿಚಾರಣೆ ನಡೆಸಿದೆ. ಆದರೆ ಗೋವಿಂದಾ ಎರಡೂ ಬಾರಿ ಗೈರಾಗಿದ್ದರೆ, ಸುನೀತಾ ಎರಡು ಬಾರಿ ಕೋರ್ಟ್‌ಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

ಸುನೀತಾ ಅಹುಜಾ ಆರೋಪವೇನು?

ಖಾಸಗಿ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಸುನೀತಾ ಈ ಕುರಿತು ಮಾತನಾಡಿದ್ದರು. ಬಾಲ್ಯದಿಂದ ನಾನು ಮಹಾಲಕ್ಷ್ಮಿ ಮಂದಿರಕ್ಕೆ ಭೇಟಿ ನೀಡುತ್ತಿದ್ದೇನೆ, ದರ್ಶನ ಪಡೆಯುತ್ತಿದ್ದೇನೆ. ನನ್ನ ಎಲ್ಲಾ ಸುಖ ದುಖಗಳನ್ನು ಹಂಚಿಕೊಂಡಿದ್ದೇನೆ. ನನಗೆ ಪ್ರತಿ ಬಾರಿ ಮಹಾಲಕ್ಷ್ಮಿ ಮಂದಿರ ಮಾತೆ ಬೆನ್ನೆಲುಬಾಗಿ ನಿಂತಿದೆ. ನಾನು ಮೊದಲ ಬಾರಿಗೆ ಗೋವಿಂದಾ ಭೇಟಿಯಾದ ಬಳಿಕ ದೇವರಲ್ಲಿ ಬೇಡಿಕೊಂಡಿದ್ದೆ. ನಾನು ಗೋವಿಂದಾ ಅವರನ್ನೇ ಮದುವೆಯಾಗುತ್ತೇನೆ. ಉತ್ತಮ ದಾಂಪತ್ಯ ಜೀವನ ಕರುಣಿಸು ಎಂದು ಬೇಡಿಕೊಂಡಿದ್ದೆ. ದೇವರು ನನಗೆ ಉತ್ತಮ ಜೀವನ ಮಾತ್ರವಲ್ಲ ಇಬ್ಬರು ಮಕ್ಕಳನ್ನು ನೀಡಿದರೂ, ನನ್ನ ಎಲ್ಲಾ ಬೇಡಿಕೆಯನ್ನೂ ಪೂರೈಸಿದ್ದರು. ಸತ್ಯ ಜೀವನದಲ್ಲಿ ಒಳ್ಳೆಯದು. ಸೋಲು ಗೆಲುವು ಜೀವನದ ಭಾಗವಾಗಿದೆ. ಈಗಲೂ ನನಗೆ ದೇವರಲ್ಲಿ ನಂಬಿಕೆ ಇದೆ. ಎಲ್ಲೂ ಒಳ್ಳೆಯದಾಗಲಿದೆ ಎಂದು ಸುನೀತಾ ಅಹುಜಾ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Javeria Abbasi: ವಿಚ್ಛೇದನವಾಗಿ 14ವರ್ಷದ ಬಳಿಕ ಮತ್ತೆ 51ನೇ ವಯಸ್ಸಿಗೆ ಮರುವಿವಾಹವಾದ ಖ್ಯಾತ ನಟಿ!

ಅಷ್ಟೇ ಅಲ್ಲದೆ, ನನಗೆ ದೇವಿಯ ಮೇಲೆ ತುಂಬಾ ನಂಬಿಕೆ ಇದೆ, ಇಂದು ನಾನು ಏನನ್ನೇ ನೋಡುತ್ತಿದ್ದರೂ, ನನ್ನ ಮನೆಯನ್ನು ಮುರಿಯಲು ಪ್ರಯತ್ನಿಸುವವರಿಗೆ ದೇವಿ ತಕ್ಕ ಪಾಠ ಕಲಿಸುತ್ತಾಳೆ ಎಂದು ಹೇಳಿದ್ದರು. ಅಲ್ಲಿಗೆ ಯಾವುದೂ ಸರಿ ಎಂಬುದು ಸ್ವಷ್ಟವಾಗಿದೆ. ಫೆಬ್ರವರಿ ತಿಂಗಳಿನಿಂದ ಗೋವಿಂದಾ ಹಾಗೂ ಸುನೀತಾ ಅಹುಜಾ ವೈವಾಹಿಕ ಜೀವನದಲ್ಲಿ ಬಿರುಕಿದೆ ಎಂದು ಎಲ್ಲೆಡೆ ಸದ್ದಿ ಹರಡಿತ್ತು. ನಟ ಗೋವಿಂದ 30 ವರ್ಷದ ಮರಾಠಿ ನಟಿ ಜೊತೆ ಹೆಚ್ಚು ಆತ್ಮೀಯರಾಗಿದ್ದಾರೆ. ಇದೇ ಕಾರಣದಿಂದ ಸುನೀತಾ ಅಹುಜಾ ಹಾಗೂ ಗೋವಿಂದಾ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ವರದಿಯಾಗಿದೆ. ಇದೀಗ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ.