ಬಾಲಿವುಡ್‌ನ ಖ್ಯಾತ ಹಿರಿಯ ನಟ ಗೋವಿಂದ (62) ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ದಾಂಪತ್ಯ ಕಲಹ ಇದೀಗ ಮತ್ತೊಂದು ಸ್ಫೋಟಕ ಹಂತ ತಲುಪಿದೆ. ನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದ ವಿವಾಹವಾಗಲು ಸಿದ್ಧತೆ ನಡೆಸಿದ್ದರು ಎಂಬ ಗಂಭೀರ ಆರೋಪವನ್ನು ಸುನೀತಾ ಮಾಡಿದ್ದಾರೆ. ಇತ್ತೀಚೆಗೆ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಿಚ್ಛೇದನ ಅರ್ಜಿಯನ್ನು ಸುನೀತಾ ಹಿಂಪಡೆದ ಬೆನ್ನಲ್ಲೇ ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ.
ಸ್ಪೀಕರ್ ಆನ್ ಮಾಡಿ ಮಾತನಾಡಿದ ರಾಖಿ ಸಾವಂತ್!
ಇತ್ತೀಚೆಗೆ ಮುಂಬೈನಲ್ಲಿ ಪಾಪರಾಜಿಗಳ ಎದುರು ಮಾತನಾಡುತ್ತಿದ್ದ ನಟಿ ರಾಖಿ ಸಾವಂತ್, ನೇರವಾಗಿ ಸುನೀತಾ ಅಹುಜಾ ಅವರಿಗೆ ಫೋನ್ ಕರೆ ಮಾಡಿ ಎಲ್ಲರೆದುರೇ ಸ್ಪೀಕರ್ ಆನ್ ಮಾಡಿ ಮಾತನಾಡಿದ್ದರು. ಈ ಸಂಭಾಷಣೆಯ ವೇಳೆ ಸುನೀತಾ, "ಗೋವಿಂದ ಮತ್ತು ಕೋಮಲ್ ಪರಸ್ಪರ ಮದುವೆಯಾಗಲು ಯೋಜಿಸುತ್ತಿದ್ದರು. ಅವರ ಮದುವೆ ಯೋಜನೆಗೆ ಬ್ರೇಕ್ ಹಾಕುವ ಉದ್ದೇಶದಿಂದಲೇ ನಾನು ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ
ಇದಕ್ಕೆ ಪ್ರತಿಕ್ರಿಯಿಸಿದ ರಾಖಿ ಸಾವಂತ್, ಸುನೀತಾ ಅವರ ನಿರ್ಧಾರವನ್ನು ಬೆಂಬಲಿಸುತ್ತಾ, "ಅರ್ಜಿ ಹಿಂಪಡೆದು ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ₹200 ಕೋಟಿ ಮೌಲ್ಯದ ಆಸ್ತಿಯನ್ನು ಮೊದಲು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ, ಇಲ್ಲದಿದ್ದರೆ ಬೇರೆಯವರು ಅದನ್ನು ಕಬಳಿಸುತ್ತಾರೆ" ಎಂದು ಎಲ್ಲರೆದುರೇ ಸಲಹೆ ನೀಡಿದ್ದಾರೆ.
'ಶುಗರ್ ಡ್ಯಾಡಿ' ಟೀಕೆ ಹಾಗೂ ಗೋವಿಂದ ಆಕ್ರೋಶ
ವಿಮಾನ ನಿಲ್ದಾಣದಲ್ಲಿ ನಟಿ ಕೋಮಲ್ ಜೊತೆ ಗೋವಿಂದ ಕಾಣಿಸಿಕೊಂಡ ನಂತರ ವಿವಾದ ಮತ್ತಷ್ಟು ತಾರಕಕ್ಕೇರಿತು. ಮಾಧ್ಯಮಗಳ ಮುಂದೆ ಗೋವಿಂದ ಅವರನ್ನು 'ಕೋಮಲ್‌ನ ಶುಗರ್ ಡ್ಯಾಡಿ' ಎಂದು ಸುನೀತಾ ಲೇವಡಿ ಮಾಡಿದ್ದರು. ಮಗಳ ವಯಸ್ಸಿನ ನಟಿ ಸುತ್ತಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮಗಳ ವಯಸ್ಸಿನ ಆ ನಟಿಯನ್ನೇ ಗೋವಿಂದ ಮದುವೆ ಆಗೋಕೆ ಪ್ಲಾನ್ ಮಾಡಿದ್ರಾ? ಇಂಥದ್ದೊಂದು ಅನುಮಾನ ಹುಟ್ಟಿಕೊಳ್ಳಲು ಸುನೀತಾ ಅವರ ಹೇಳಿಕೆ ಕಾರಣವಾಗಿದೆ.
ಖಾರವಾಗಿ ಪ್ರತಿಕ್ರಿಯಿಸಿರುವ ಗೋವಿಂದ
"ಸುನೀತಾ ಅವರೇ, ಸಾರ್ವಜನಿಕವಾಗಿ ತೀರಾ ಕೀಳು ಶಬ್ದಗಳಿಂದ ನಿಂದಿಸುವುದನ್ನು ನಿಲ್ಲಿಸಿ. ಯುವಜನತೆ ನಿಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ಬಳಸುವ ಭಾಷೆಯ ಮೇಲೆ ಸಂಯಮವಿರಲಿ" ಎಂದು ಗೋವಿಂದ ಹೇಳಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಿಚ್ಛೇದನ ಅರ್ಜಿಯನ್ನು ಈಚೆಗೆ ತಮ್ಮ ಪುತ್ರ ಯಶವರ್ಧನ್ ಜೊತೆ ತೆರಳಿ ಅಧಿಕೃತವಾಗಿ ಸುನೀತಾ ವಾಪಸ್ ಪಡೆದುಕೊಂಡಿದ್ದಾರೆ.
Govinda-Sunita Ahuja: ವಿಚ್ಛೇದನ ವದಂತಿ ಬೆನ್ನಲ್ಲೇ ಪತ್ನಿ ಸುನೀತಾ ಜತೆ ಗಣೇಶೋತ್ಸವ ಆಚರಿಸಿದ ನಟ ಗೋವಿಂದ
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ, "ಕೌಟುಂಬಿಕ ಸಮಸ್ಯೆಗಳನ್ನು ಮನೆಯಲ್ಲೇ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು. ನ್ಯಾಯಾಲಯದ ಮೆಟ್ಟಿಲೇರಿದರೆ ಇಡೀ ಜಗತ್ತಿಗೆ ತಿಳಿಯುತ್ತದೆ. ಅಂತಿಮವಾಗಿ ಹಿಂಪಡೆಯುವುದೇ ಆಗಿದ್ದರೆ ಕೇಸ್ ದಾಖಲಿಸುವ ಅಗತ್ಯವೇನಿತ್ತು? ಅನಗತ್ಯವಾಗಿ ಸಾರ್ವಜನಿಕವಾಗಿ ನಗೆಪಾಟಲಾಗುತ್ತಿದ್ದೇವೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.