ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suriya and Karthi: ನಿರ್ದೇಶಕನಿಗೆ ಕಾರು ಉಡುಗೊರೆ ಕೊಟ್ಟ ಕಾರ್ತಿ-ಸೂರ್ಯ

ಹಿಟ್ ಸಿನಿಮಾ ನೀಡಿದ ನಿರ್ದೇಶಕರಿಗೆ ‌ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ʼಮೇಯಳಗನ್’ ಸಿನಿಮಾದ ನಿರ್ದೇಶಕ ಪ್ರೇಮ್ ಕುಮಾರ್ ಅವರಿಗೆ ನಟ ಕಾರ್ತಿ ಹಾಗೂ ಅವರ ಸಹೋದರ ನಟ ಸೂರ್ಯ ಸೇರಿಕೊಂಡು ಥಾರ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚೆನ್ನೈ: ಸಿನಿಮಾ ನಟ, ನಟಿಯರು ಮತ್ತು ರಾಜಕಾರಣಿಗಳಿಗೆ ಬಲು ದುಬಾರಿ ಉಡುಗೊರೆಗಳು ನೀಡುವ ಬಗ್ಗೆ ಸುದ್ದಿ ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಹಿಟ್ ಸಿನಿಮಾ ನೀಡಿದ ನಿರ್ದೇಶಕರಿಗೆ ‌ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ʼಮೇಯಳಗನ್’ ಸಿನಿಮಾದ ನಿರ್ದೇಶಕ ಪ್ರೇಮ್ ಕುಮಾರ್ (Prem Kumar) ಅವರಿಗೆ ನಟ ಕಾರ್ತಿ ಹಾಗೂ ಅವರ ಸಹೋದರ ನಟ ಸೂರ್ಯ ಸೇರಿಕೊಂಡು ಥಾರ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 

ನಟ ಕಾರ್ತಿ ನಟನೆಯ 'ಮೇಯಳಗನ್' ಸಿನಿಮಾ ಈ ಹಿಂದೆ ತೆರೆಗೆ ಬಂದಿತ್ತು. 2D ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ 'ಮೇಯಳಗನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಮೋಷ ನಲ್ ಜರ್ನಿ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ದೊಡ್ಡ ಮಟ್ಟದಲ್ಲಿ ಸಿನಿಮಾ ಸಕ್ಸಸ್ ಕಾಣಲಿಲ್ಲ. ಆದರೆ ಒಟಿಟಿಗೆ ಬಂದ ಮೇಲೆ ಸಿನಿಮಾ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಬರುತ್ತಿದೆ. ಇದೀಗ ‘ಮೇಯಳಗನ್’ ಸಿನಿಮಾದ ನಿರ್ದೇಶಕ ಪ್ರೇಮ್ ಕುಮಾರ್ ಅವರಿಗೆ ನಟ ಕಾರ್ತಿ ಹಾಗೂ ಅವರ ಸಹೋದರ ನಟ ಸೂರ್ಯ ಸೇರಿಕೊಂಡು ಥಾರ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ʼಮೇಯಳಗನ್’ ಸಿನಿಮಾದ ನಿರ್ದೇಶಕನಿಗೆ ನಟ ಕಾರ್ತಿ ಹಾಗೂ ಅವರ ಸಹೋದರ ನಟ ಸೂರ್ಯ ಸೇರಿಕೊಂಡು ಥಾರ್ ಕಾರೊಂದನ್ನು ಉಡುಗೊರೆಯಾಗಿ ನೀಡಲು ಕಾರಣ ಕೂಡ ಇದೆ. ಬಿಳಿಯ ಬಣ್ಣದ ಥಾರ್ ಕಾರು ಅನ್ನು ಪ್ರೇಮ್ ಕುಮಾರ್ ಬಹಳಷ್ಟು ಇಷ್ಟ ಪಟ್ಟಿದ್ದರಂತೆ. ಈ ಬಗ್ಗೆ ಸೂರ್ಯ ಅವರ ಆಪ್ತರ ಬಳಿ ಮಾತನಾಡಿದ್ದ ಪ್ರೇಮ್ ಕುಮಾರ್, ಬಿಳಿ ಬಣ್ಣದ ಥಾರ್ ಸಿಕ್ಕರೆ ಹೇಳಿ ನಾನು ಖರೀದಿಸುತ್ತೇನೆ ಎಂದಿದ್ದರು. ಅದರಂತೆ ಸೂರ್ಯ ಅವರಿಗೆ ಆಪ್ತರಾಗಿದ್ದ ಒಬ್ಬರು ಬಿಳಿ ಬಣ್ಣದ ಥಾರ್ ಕಾರು ಮಾರಾಟಕ್ಕಿದೆ ಎಂದಾಗ ಇಲ್ಲ ಈಗ ನನ್ನ ಬಳಿ ಅಷ್ಟು ಬಜೆಟ್ ಇಲ್ಲ, ಹಣ ಇದ್ದಾಗ ಖರೀದಿಸುವೆ ಎಂದಿದ್ದರಂತೆ. ಈ ವಿಚಾರ ತಿಳಿದ ಕೂಡಲೇ ಸೂರ್ಯ ಮತ್ತು ಕಾರ್ತಿ ಸೇರಿ ಆ ಬಿಳಿಯ ಬಣ್ಣದ ಥಾರ್ ಕಾರು ಖರೀದಿಸಿ ಆ ಕಾರನ್ನು ಪ್ರೇಮ್ ಕುಮಾರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. 

ಇದನ್ನು ಓದಿ: S\O Muthanna Movie: ಪ್ರಣಂ ದೇವರಾಜ್ ನಟನೆಯ ʼS\O ಮುತ್ತಣ್ಣʼ ಚಿತ್ರದ ಹಾಡಿಗೆ ಗಾಯಕ ಸಂಚಿತ್ ಹೆಗ್ಡೆ ಧ್ವನಿ

ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪ್ರೇಮ್‌ಕುಮಾರ್, ಇದನ್ನು ಕೇವಲ ಉಡುಗೊರೆಯಾಗಿ ನಾನು ನೋಡಿಲ್ಲ, ಇಬ್ಬರು ಸಹೋದರರು ಪೂರೈಸಿದ ಕನಸಾಗಿ ನೋಡುತ್ತೇನೆ ಎಂದು ಭಾವುಕರಾಗಿ ಬರೆದು ಕೊಂಡಿದ್ದಾರೆ. ಎರಡು ದಿನಗಳಲ್ಲಿ 50 ಕಿ.ಮೀ. ಓಡಿಸಿದ್ದೇನೆ, ಇನ್ನೂ ಅದೇ ಅನುಭವದಲ್ಲಿ ಮುಳುಗಿದ್ದೇನೆ. ಇದು ಕೇವಲ ಕಾರಿನ ಬಗ್ಗೆ ಇರುವ ಆಸಕ್ತಿ ಅಲ್ಲ, ಪ್ರೀತಿ, ಗೌರವದ ಸಂಕೇತವಾಗಿ ಇನ್ನು ಭಾವನಾತ್ಮಕವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.