ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌!

RJ Balaji: ಆರ್ ಜೆ ಬಾಲಾಜಿ ನಿರ್ದೇಶನದ ಸೂರ್ಯ -ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಈ ಚಿತ್ರದ ಬಗ್ಗೆ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ, ಇದರಲ್ಲಿ ಸೂರ್ಯ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಲಾಜಿ, ತಮಿಳುನಾಡು ಚುನಾವಣೆಯ ನಂತರವೇ ಈ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು

ಸೂರ್ಯ ಸಿನಿಮಾ

ಆರ್ ಜೆ ಬಾಲಾಜಿ ನಿರ್ದೇಶನದ ಸೂರ್ಯ -ತ್ರಿಷಾ ಕೃಷ್ಣನ್ (Suriya- Trisha Krishnan) ಅಭಿನಯದ ಕರುಪ್ಪು (Karuppu) ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಈ ಚಿತ್ರದ ಬಗ್ಗೆ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ, ಇದರಲ್ಲಿ ಸೂರ್ಯ ದ್ವಿಪಾತ್ರಗಳಲ್ಲಿ (Surya Movie) ನಟಿಸಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಲಾಜಿ, ತಮಿಳುನಾಡು (Tamilnadu) ಚುನಾವಣೆಯ ನಂತರವೇ ಈ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು, ಆದರೆ ಈ ಚಿತ್ರವನ್ನು ಪ್ರಚಾರ ಮಾಡಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

'ಕರುಪ್ಪು' ಸಿನಿಮಾದ ಮತ್ತೊಂದು ಹೈಲೈಟ್

'ಕರುಪ್ಪು' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಕಾಂಬಿನೇಷನ್. ಸೂರ್ಯ ಹಾಗೂ ತ್ರಿಶಾ ಕೃಷ್ಣನ್ ತಮಿಳಿನ ಹಿಟ್ ಜೋಡಿ. ಆದರೆ, ಕಳೆದ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಈಗ ಬರೋಬ್ಬರಿ 20 ವರ್ಷಗಳ ಬಳಿಕ ಸೂರ್ಯ ಹಾಗೂ ತ್ರಿಶಾ ಕೃಷ್ಣನ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Darshan Birthday: ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

ತಮಿಳುನಾಡು ಚುನಾವಣೆ ನಂತರ ಕರುಪ್ಪು ರಿಲೀಸ್‌

ಟೀಸರ್ ಬಿಡುಗಡೆಯಾಗುವ ಮೊದಲೇ 'ಕರುಪ್ಪು' ಸಿನಿಮಾ ಗಮನ ಸೆಳೆದಿದೆ. ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಚಿತ್ರವು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂದು ಬಾಲಾಜಿ ಹೇಳಿದ್ದಾರೆ.

ಕಾಲೇಜು ಕಾರ್ಯಕ್ರಮವೊಂದರಲ್ಲಿ ಚಲನಚಿತ್ರ ನಿರ್ಮಾಪಕ-ನಟ ಮಾತನಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಸೂರ್ಯ ಅವರ ಮುಂದಿನ ಚಿತ್ರದ ಬಿಡುಗಡೆಯ ಕುರಿತು ಅವರ ಅಭಿಮಾನಿಗಳು ಅಂತಿಮವಾಗಿ ನ್ಯೂಸ್‌ ಪಡೆದುಕೊಂಡಿದ್ದಾರೆ.

"ಚಿತ್ರ ಚೆನ್ನಾಗಿ ಬಂದಿದೆ, ಮತ್ತು ನಿಮಗೆಲ್ಲರಿಗೂ ಇದು ಇಷ್ಟವಾಗುತ್ತದೆ. ಈ ಬೇಸಿಗೆಯಲ್ಲಿ ಚುನಾವಣೆಯ ನಂತರ ನಾವು ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿದ್ದೇವೆ. ಇದು ಇಡೀ ಕುಟುಂಬ ಆನಂದಿಸಬಹುದಾದ ಚಿತ್ರ" ಎಂದು ಹೇಳಿದರು.

ಕರುಪ್ಪು ಸಿನಿಮಾ ಕುರಿತು

ಕರುಪ್ಪು ಚಿತ್ರವನ್ನು ಆರ್‌ಜೆ ಬಾಲಾಜಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ಎಸ್‌ಆರ್ ಪ್ರಕಾಶ್ ಬಾಬು ಮತ್ತು ಎಸ್‌ಆರ್ ಪ್ರಬು ನಿರ್ಮಿಸಿದ್ದಾರೆ. ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಟಿಎಸ್ ಗೋಪಿ ಕೃಷ್ಣನ್ ಮತ್ತು ಕರಣ್ ಅರವಿಂದ್ ಕುಮಾರ್ ಚಿತ್ರಕಥೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೂರ್ಯ, ತ್ರಿಷಾ, ಇಂದ್ರನ್ಸ್, ನಟ್ಟಿ, ಸ್ವಾಸಿಕಾ, ಶ್ಶಿವಧ, ಅನಘ ಮಾಯಾ ರವಿ, ಸುಪ್ರೀತ್ ರೆಡ್ಡಿ ಮುಂತಾದವರು ನಟಿಸಿದ್ದಾರೆ. ಸಾಯಿ ಅಭ್ಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.



ಕಳೆದ ಜೂನ್‌ನಲ್ಲಿ ಸೂರ್ಯ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಟೀಸರ್‌ನಲ್ಲಿ ಅವರು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Amruthadhaare Serial: ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!

ಸೂರ್ಯ ಇತ್ತೀಚೆಗೆ ಕಾರ್ತಿಕ್ ಸುಬ್ಬರಾಜ್ ಅವರ ರೆಟ್ರೋದಲ್ಲಿ ಕಾಣಿಸಿಕೊಂಡರು, ಇದು ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಅವರು ವೆಂಕಿ ಅಟ್ಲೂರಿ ಅವರೊಂದಿಗೆ ಇನ್ನೂ ಹೆಸರಿಡದ ಸೂರ್ಯ 46 ಮತ್ತು ಜಿತು ಮಾಧವನ್ ಅವರೊಂದಿಗೆ ಸೂರ್ಯ 47 ಚಿತ್ರೀಕರಣದಲ್ಲಿದ್ದಾರೆ.

Yashaswi Devadiga

View all posts by this author