ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐದೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ 160+ ಕೋಟಿ ರೂ. ದಾಟಿದ ʻಕರುಪ್ಪುʼ ಕಲೆಕ್ಷನ್‌; ಸೋಲಿನ ಸರಪಳಿ ತುಂಡರಿಸಿದ ಸೂರ್ಯ!

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಜೋಡಿಯ ‘ಕರುಪ್ಪು’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಐದೇ ದಿನಕ್ಕೆ 160 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾದ ಕಲೆಕ್ಷನ್ ಭಾರತದಲ್ಲೇ 110 ಕೋಟಿ ರೂ. ದಾಟಿದೆ. ಕರ್ನಾಟಕ ಒಂದರಲ್ಲೇ 13 ಕೋಟಿ ಬಾಚಿರುವ ಆರ್‌ಜೆ ಬಾಲಾಜಿ ನಿರ್ದೇಶನದ ಈ ಚಿತ್ರ ಸೂರ್ಯ ಅವರ ಸೋಲಿನ ಸರಣಿಗೆ ಬ್ರೇಕ್ ಹಾಕಿದೆ.

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ನಟನೆಯ 'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲುಗಿನ ನಾಗಾಲೋಟವನ್ನು ಮುಂದುವರಿಸಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಈ ಚಿತ್ರವು 5ನೇ ದಿನ (ಮಂಗಳವಾರ) ಭಾರತದಾದ್ಯಂತ ಅಂದಾಜು 12.75 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದೆ. ಇದು ಸೋಮವಾರದ ಗಳಿಕೆಗೆ (14.30 ಕೋಟಿ ರೂ.) ಹೋಲಿಸಿದರೆ ಕೇವಲ ಶೇ. 10.8 ರಷ್ಟು ಮಾತ್ರ ಕುಸಿತ ಕಂಡಿದೆ. ಕಳೆದ 13 ವರ್ಷಗಳಿಂದ ಒಂದು ಭರ್ಜರಿ ಗೆಲುವಿಗಾಗಿ ಹಾತೊರೆಯತ್ತಿದ್ದ ನಟ ಸೂರ್ಯ ಅವರಿಗೆ ಈಗ ಬ್ಲಾಕ್‌ ಬಸ್ಟರ್‌ ಹಿಟ್‌ ಸಿಕ್ಕಿದೆ. ಸೋಲಿನ ಸುಳಿಯಿಂದ ಅವರೀಗ ಹೊರಬಂದಿದ್ದಾರೆ.

ಮಂಗಳವಾರ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದರೂ, ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಬಾಕ್ಸ್‌ ಆಫೀಸ್‌ನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಅಲ್ಲದೆ, ಈ ವರ್ಷ ತಮಿಳು ಚಿತ್ರರಂಗದಲ್ಲಿ ಅತಿ ದೊಡ್ಡ ಕಮರ್ಷಿಯಲ್ ಸಕ್ಸಸ್ ಕಂಡ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಭಾರತದ ಇತರ ರಾಜ್ಯಗಳು ಹಾಗೂ ವಿದೇಶಗಳಲ್ಲೂ ಈ ಕರುಪ್ಪು ಸಿನಿಮಾಗೆ ಅಭೂತಪೂರ್ವ ರೆಸ್ಪಾನ್ಸ್‌ ಸಿಗುತ್ತಿದೆ.

Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!

ಬಾಕ್ಸ್ ಆಫೀಸ್‌ನಲ್ಲಿ ಕರುಪ್ಪು ಭರ್ಜರಿ ಪ್ರದರ್ಶನ

ಹೌಸ್ ಫುಲ್ ಪ್ರದರ್ಶನಗಳು, ಪ್ರೇಕ್ಷಕರಿಂದ ಸಿಗುತ್ತಿರುವ ಪಾಸಿಟಿವ್ ಪ್ರತಿಕ್ರಿಯೆಯಿಂದಾಗಿ 'ಕರುಪ್ಪು' ಸಿನಿಮಾ ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. 5ನೇ ದಿನದ ಗಳಿಕೆಯೊಂದಿಗೆ 'ಕರುಪ್ಪು' ಚಿತ್ರದ ಒಟ್ಟು ಭಾರತದಲ್ಲಿನ ಒಟ್ಟು ಕಲೆಕ್ಷನ್ 110 ಕೋಟಿ ರೂಪಾಯಿ ದಾಟಿದೆ. ಮಂಗಳವಾರದಂದು ಈ ಸಿನಿಮಾ ದೇಶಾದ್ಯಂತ ಒಟ್ಟು 6 ಸಾವಿರ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಂಡಿದೆ.

ಇನ್ನು ಈ ಸಿನಿಮಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಒಟ್ಟಾರೆ ಗಳಿಕೆಯನ್ನು ಗಣನೆಗೆ ತೆಗೆದುಕೊಂಡರೆ, ಕರುಪ್ಪು ಸಿನಿಮಾ ವಿಶ್ವಾದ್ಯಂತ ಈವರೆಗೂ ಗಳಿಸಿರುವ ಹಣ 160 ಕೋಟಿ ರೂ. ದಾಟಿದೆ. ಮೊದಲ ವಾರ ಮುಗಿಯುವುದರೊಳಗೆ ಈ ಮೊತ್ತವು 180+ ಕೋಟಿ ರೂ. ದಾಟುವುದು ನಿಶ್ಚಿತ ಎಂಬ ಮಾತುಗಳು ಕೇಳಿಬಂದಿವೆ.

Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌!

ಕರ್ನಾಟಕದಲ್ಲಿ ಎಷ್ಟಾಯ್ತು ಗಳಿಕೆ?

ಇನ್ನು, ಕರ್ನಾಟಕದಲ್ಲೂ ಕರುಪ್ಪು ಸಿನಿಮಾವು ಉತ್ತಮ ಕಮಾಯಿ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈವರೆಗೂ ಸುಮಾರು 13+ ಕೋಟಿ ರೂ. ಹಣವನ್ನು ಕರ್ನಾಟಕದಿಂದಲೇ ಬಾಚಿಕೊಂಡಿದೆ ಈ ಸಿನಿಮಾ. ಈ ವರ್ಷ ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳು ಉತ್ತಮವಾಗಿ ಹಣ ಗಳಿಸುತ್ತಿದ್ದು, ಆ ಸಾಲಿಗೆ ಈಗ ಕರುಪ್ಪು ಕೂಡ ಸೇರಿಕೊಂಡಿದೆ.

'ಕರುಪ್ಪು' ಚಿತ್ರವನ್ನು ಪ್ರತಿಷ್ಠಿತ 'ಡ್ರೀಮ್ ವಾರಿಯರ್ ಪಿಕ್ಚರ್ಸ್' ಸಂಸ್ಥೆ ನಿರ್ಮಿಸಿದೆ. ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿದ್ದರೆ, ಆರ್.ಜೆ. ಬಾಲಾಜಿ, ಶಿವದಾ, ಯೋಗಿ ಬಾಬು ಮತ್ತು ಸ್ವಾಸಿಕಾ ಸೇರಿದಂತೆ ಮುಂತಾದ ಪ್ರಮುಖ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಆರ್ ಜೆ ಬಾಲಾಜಿ ನಿರ್ದೇಶನ ಮಾಡಿದ್ದಾರೆ.