ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಬಜೆಟ್ ಮತ್ತು ಸ್ಟಾರ್ ನಟರ ಸಿನಿಮಾಗಳನ್ನ ಕರ್ನಾಟಕದಲ್ಲಿ ಯಶಸ್ವಿಯಾಗಿ ವಿತರಣೆ ಮಾಡುವಲ್ಲಿ ʻಕೆವಿಎನ್ʼ (KVN Production) ಸಂಸ್ಥೆ ಮುಂಚೂಣಿಯಲ್ಲಿದೆ. ಈಗ ಸೂರ್ಯ ಅಭಿನಯದ ʻಕರುಪ್ಪುʼ (Karuppu) ಸಿನಿಮಾವನ್ನ ರಾಜ್ಯಾದಂತ ಇರುವ ನೂರಾರು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲು ಕೆವಿಎನ್ ಸಜ್ಜಾಗಿದೆ.
ಸೂರ್ಯ ನಟನೆಯ 'ಕರುಪ್ಪು' ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ತೆಕ್ಕೆಗೆ ರಾಜ್ಯಾದ್ಯಂತ ಕರುಪ್ಪು ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್. ಇದೇ ತಿಂಗಳ 14ಕ್ಕೆ ಸೂರ್ಯ ಸಿನಿಮಾ ರಿಲೀಸ್ ತಮಿಳು ನಟ ಸೂರ್ಯ -ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು.
ಒಟ್ಟಾರೆಯಾಗಿ, ʻಕೆವಿಎನ್ʼ ಪ್ರೊಡಕ್ಷನ್ಸ್ ಸಂಸ್ಥೆಯು ʻಕರುಪ್ಪುʼ ಸಿನಿಮಾವನ್ನ ಕರ್ನಾಟಕದ ಮೂಲೆ ಮೂಲೆಗೂ ತಲುಪಿಸಲು ಯೋಜನೆ ಹಾಕಿಕೊಂಡಿದೆ. ಸೂರ್ಯ ಅವರ ಬದ್ದತೆ, ಆರ್‌ಜೆ ಬಾಲಾಜಿ ಅವರ ವಿಭಿನ್ನ ಮೇಕಿಂಗ್ ಮತ್ತು ಕೆವಿಎನ್ ಸಂಸ್ಥೆಯ ಬಲಿಷ್ಠ ವಿತರಣಾ ಜಾಲ ಎಲ್ಲವೂ ಸೇರಿದರೆ, ಈ ಬೇಸಿಗೆಯಲ್ಲಿ ʻಕರುಪ್ಪುʼ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಮುಂದಿದೆ .
ಇದೇ ತಿಂಗಳ 4ರಂದು ರಿಲೀಸ್ ಆಗ್ತಿರುವ ಈ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಪ್ರತಿಷ್ಠಿತ ಸಂಸ್ಥೆ ಕೆವಿಎನ್ ತೆಕ್ಕೆ ಸೇರ್ಪಡೆಯಾಗಿದೆ. ಹೌದು, ಕರುಪ್ಪು ಚಿತ್ರವನ್ನು ರಾಜ್ಯಾದ್ಯಂತ ಇರುವ ಥಿಯೇಟರ್ ಗಳಲ್ಲಿ ಕೆವಿಎನ್ ಬಿಡುಗಡೆ ಮಾಡಲಿದೆ.
ಆರ್‌ಜೆ ಬಾಲಾಜಿ ಅವರು ‘ಕರುಪ್ಪು’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ಪ್ರಕಾಶ್ ಬಾಬು ಹಾಗೂ ಎಸ್ಆರ್ ಪ್ರಭು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಗೋಪಿ ಕೃಷ್ಣನ್ ಮೊದಲಾದವರು ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.
ಇದನ್ನೂ ಓದಿ: Thalapathy Vijay: ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್?
ಸೂರ್ಯ, ತ್ರಿಷಾ ಜೊತೆಗೆ ಇಂದ್ರನ್ಸ್, ನಟ್ಟಿ, ಸ್ವಾಸಿಕಾ, ಶ್ಶಿವಧ, ಅನಘ ಮಾಯಾ ರವಿ, ಸುಪ್ರೀತ್ ರೆಡ್ಡಿ ಮುಂತಾದವರು ನಟಿಸಿದ್ದಾರೆ. ಸಾಯಿ ಅಭಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.