ತಮಿಳು ನಟ ಸೂರ್ಯ, ತ್ರಿಷಾ, ಆರ್ ಜೆ ಬಾಲಾಜಿ, ಇಂದ್ರನ್ ಅಭಿನಯದ 'ಕರುಪ್ಪು' ಸಿನಿಮಾವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಮೂಲಕ ಸೂರ್ಯಗೆ ಬಹಳ ದಿನಗಳ ನಂತರ ದೊಡ್ಡ ಗೆಲುವು ಸಿಕ್ಕಿದೆ. ಒಂದು ಕಾಲದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದ ಸೂರ್ಯ, ಇತ್ತೀಚಿನ ವರ್ಷಗಳಲ್ಲಿ ಒಂದು ಹಿಟ್ ಕೂಡ ನೀಡಿರಲಿಲ್ಲ. ಆದರೆ ಆರ್.ಜೆ. ಬಾಲಾಜಿ ನಿರ್ದೇಶನದ ʻಕರುಪ್ಪುʼ ಚಿತ್ರವು ಪುನಃ ಸೂರ್ಯ ಅವರನ್ನು ಯಶಸ್ಸಿನ ಹಳಿಗೆ ಮರಳಿಸಿದೆ.
ಎಷ್ಟಾಗಿದೆ ಈ ಸಿನಿಮಾ ಕಲೆಕ್ಷನ್?
ವಿಶ್ವಾದ್ಯಂತ ಮೊದಲ ದಿನವೇ ʻಕರುಪ್ಪುʼ ಸಿನಿಮಾವು 29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಎರಡನೇ ದಿನ 40 ಕೋಟಿಗೂ ಹೆಚ್ಚು ಕಮಾಯಿ ಮಾಡುವ ಮೂಲಕ ಅಬ್ಬರಿಸಿದೆ. ಇದರೊಂದಿಗೆ ಕೇವಲ 2 ದಿನಗಳಲ್ಲಿ ಒಟ್ಟು ಕಲೆಕ್ಷನ್ 70 ಕೋಟಿ ರೂಪಾಯಿಗಳನ್ನು ತಲುಪಿದೆ. ಶುಕ್ರವಾರಕ್ಕಿಂತ ಶನಿವಾರ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರೇಕ್ಷಕರಿಂದ ಕೇಳಿಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಮತ್ತು ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಬಿಡುಗಡೆಯಾದಾಗಿನಿಂದಲೂ ಚಿತ್ರವು ಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿದೆ.
Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್ ಅಪ್‌ಡೇಟ್!
ಕರ್ನಾಟಕದಲ್ಲಿ ಎಷ್ಟಾಗಿದೆ ಗಳಿಕೆ?
‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ಶನಿವಾರದಂದು ‘ಕರುಪ್ಪು’ ಚಿತ್ರವು ಭಾರತದಲ್ಲಿ 23.40 ಕೋಟಿ ಗಳಿಸಿದೆ. ಆಕ್ಯುಪೆನ್ಸಿಯಲ್ಲಿ ಮೊದಲ ದಿನಕ್ಕೆ ಹೋಲಿಸಿದರೆ ಶೇ.55ರಷ್ಟು ಭಾರಿ ಹೆಚ್ಚಳ ಕಂಡಿದೆ. ಅಲ್ಲದೆ, ಎರಡನೇ ದಿನ ಈ ಚಿತ್ರವು ಒಟ್ಟು ದೇಶಾದ್ಯಂತ 6,288 ಶೋಗಳಲ್ಲಿ ಪ್ರದರ್ಶನ ಕಂಡಿದೆ. ಸಾಮಾನ್ಯವಾಗಿ ತಮಿಳು ಸಿನಿಮಾಗಳಿಗೆ ಮೊದಲ ದಿನದ ನಂತರ ಕಲೆಕ್ಷನ್‌ನಲ್ಲಿ ಇಷ್ಟು ದೊಡ್ಡ ಜಂಪ್ ಸಿಗುವುದು ವಿರಳ. ಆದರೆ 'ಕರುಪ್ಪು' ಚಿತ್ರವು ಶನಿವಾರ ದೇಶೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 55% ಕ್ಕಿಂತ ಹೆಚ್ಚಿನ ಬೆಳವಣಿಗೆ ಕಾಣುವ ಮೂಲಕ ದಾಖಲೆ ಬರೆದಿದೆ. ಸಿಂಗಂ ನಂತರ ಸೂರ್ಯಗೆ ಭರ್ಜರಿ ಗೆಲುವು ಸಿಗುವ ಸೂಚನೆ ಸಿಕ್ಕಿದೆ.
ಅಡೆತಡೆಗಳನ್ನು ದಾಟಿ ಥಿಯೇಟರ್‌ಗೆ ಬಂದ ʻಕರುಪ್ಪುʼ ಸಿನಿಮಾ; ನಿರ್ಮಾಪಕರ ಪಾಲಿಗೆ ಕರ್ಣನಾದ ನಟ ಸೂರ್ಯ!
ಇನ್ನು, ಈ ಸಿನಿಮಾವು ತಮಿಳುನಾಡು 16.25 ಕೋಟಿ ರೂ. ಗಳಿಸಿದ್ದರೆ, ಕರ್ನಾಟಕದಲ್ಲಿ 3.60 ಕೋಟಿ ರೂ.ಗಳಿಸಿದೆ. ಕೇರಳ 2.15 ಕೋಟಿ ರೂ. ಗಳಿಕೆಯಾದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಟ್ಟು 50 ಲಕ್ಷ ರೂ. ಸಿಕ್ಕಿದೆ. ಭಾರತದ ಇತರೆ ಪ್ರದೇಶಗಳಿಂದ ಸುಮಾರು 61 ಲಕ್ಷ ರೂ. ಕಲೆಕ್ಷನ್ ಆಗಿದೆ.
ಮೊದಲ ದಿನವೇ ವಿಘ್ನ
ಆರ್.ಜೆ. ಬಾಲಾಜಿ ನಿರ್ದೇಶನದ ʻಕರುಪ್ಪುʼ ಸಿನಿಮಾ ಗುರುವಾರವೇ (ಮೇ 14) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ನಿರ್ಮಾಪಕರು ಮತ್ತು ಫೈನಾನ್ಶಿಯರ್ಸ್ ನಡುವಿನ ಹಣದ ಇತ್ಯರ್ಥದ ಸಮಸ್ಯೆಯಿಂದಾಗಿ ಚಿತ್ರದ ಬಿಡುಗಡೆ ತಡವಾಗಿತ್ತು. ನಂತರ ನಟ ಸೂರ್ಯ ಅವರ ಮಧ್ಯಸ್ಥಿಕೆಯಲ್ಲಿ ಹಣಕಾಸಿನ ವ್ಯವಹಾರ ಬಗೆಹರಿದಿತ್ತು.