ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಸ್ಪಂದನಾ ಸೋಮಣ್ಣ; ಬಹುಕಾಲದ ಗೆಳೆಯ ವರುಣ್ ಜೊತೆ ಅದ್ಧೂರಿ ವಿವಾಹ

Spandana Somanna: ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ಖ್ಯಾತಿಯ ಸ್ಪಂದನಾ ಸೋಮಣ್ಣ ಅವರು ತಮ್ಮ ಬಹುಕಾಲದ ಪ್ರಿಯಕರ ವರುಣ್ ಮುನಿರಾಜು ಅವರೊಂದಿಗೆ ಇಂದು ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೆ ಚಿತ್ರರಂಗ ಹಾಗೂ ಕಿರುತೆರೆಯ ಅನೇಕ ಕಲಾವಿದರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ.

ಸ್ಪಂದನ ಸೋಮಣ್ಣ

ಮೈಸೂರು: ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ಖ್ಯಾತಿಯ ಸ್ಪಂದನಾ ಸೋಮಣ್ಣ (Spandana Somanna) ಅವರು ತಮ್ಮ ಬಹುಕಾಲದ ಪ್ರಿಯಕರ ವರುಣ್ ಮುನಿರಾಜು ಅವರೊಂದಿಗೆ ಇಂದು ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೆ ಚಿತ್ರರಂಗ ಹಾಗೂ ಕಿರುತೆರೆಯ ಅನೇಕ ಕಲಾವಿದರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ. ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದ ಈ ವಿವಾಹ ಮಹೋತ್ಸವದಲ್ಲಿ ಎರಡೂ ಕುಟುಂಬಗಳ ಹಿರಿಯರು, ಆಪ್ತರು ಹಾಗೂ ಕಿರುತೆರೆಯ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

ಸ್ಪಂದನಾ ಮತ್ತು ವರುಣ್ ಕಾಲೇಜು ದಿನಗಳಿಂದಲೇ ಪರಸ್ಪರ ಪರಿಚಿತರಾಗಿದ್ದು, ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ವರುಣ್ ಮುನಿರಾಜು ಅವರು ಲಂಡನ್‌ನಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪ್ಯಾರಿಸ್‌ನ ಐಫೆಲ್ ಟವರ್ ಎದುರು ವರುಣ್ ಪ್ರಪೋಸ್ ಮಾಡಿದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸ್ಪಂದನಾ ತಮ್ಮ ಮದುವೆಯ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದರು.

ವಿವಾಹಕ್ಕೂ ಮುನ್ನ ನಡೆದ ಹೂ ಮುಡಿಸುವ ಶಾಸ್ತ್ರ, ಅರಿಶಿನ ಶಾಸ್ತ್ರ ಹಾಗೂ ಸಂಗೀತ್ ಕಾರ್ಯಕ್ರಮಗಳು ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿದವು. ಮದುವೆ ಸಮಾರಂಭದಲ್ಲಿ 'ಬಿಗ್ ಬಾಸ್' ಮನೆಯ ಸಹಸ್ಪರ್ಧಿಗಳಾದ ಗಿಲ್ಲಿ ನಟ, ಕಾವ್ಯಾ, ರಘು ಸೇರಿದಂತೆ ಕನ್ನಡ ಕಿರುತೆರೆಯ ಹಲವು ಕಲಾವಿದರು ಆಗಮಿಸಿದ್ದರು.

Spandana Somanna: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಸೋಮಣ್ಣ ಜೋಡಿ

ಮೈಸೂರಿನವರೇ ಆದ ಸ್ಪಂದನಾ ಸೋಮಣ್ಣ, ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಎಂಜಿನಿಯರಿಂಗ್ ಪದವೀಧರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕರಿಮಣಿ'ಯಲ್ಲಿನ ಸಾಹಿತ್ಯ ಪಾತ್ರದ ಮೂಲಕ ಮನೆಮಾತಾದ ಇವರು, 'ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲಿ ಸ್ಪರ್ಧಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಇದಲ್ಲದೆ 'ದಿಲ್ ಖುಷ್', 'ಮರೀಚಿ' ಸಿನಿಮಾಗಳು ಹಾಗೂ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಮದುವೆಯ ನಂತರ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಉದ್ಯಮ ಆರಂಭಿಸುವ ಯೋಜನೆಯನ್ನು ಸ್ಪಂದನಾ ಹೊಂದಿದ್ದಾರೆ.

Vishakha Bhat Heggar

View all posts by this author