ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಅವರು ಏಪ್ರಿಲ್ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿಮಾನಿ ಸಂಘ ಒಂದು ಅತ್ಯುತ್ತಮ ಕಾರ್ಯದ ಮೂಲಕ ಬನ್ನಿ ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿದೆ. ಹೌದು, ಈ ಬಾರಿ ಮಹಿಳೆಯರ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿರುವ ಬನ್ನಿ ಫ್ಯಾನ್ಸ್, ಎಚ್‌ಪಿವಿ (HPV) ಲಸಿಕೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಈ ಲಸಿಕೆ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವರ್ಷವಿಡೀ ನಡೆಯಲಿದೆ ಈ ಜಾಗೃತಿ ಅಭಿಯಾನ
ವೈದ್ಯರ ಪ್ರಕಾರ, 13 ರಿಂದ 16 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಈ ಎಚ್‌ಪಿವಿ ಲಸಿಕೆಯನ್ನು ನೀಡಿದರೆ, ಮುಂದಿನ ದಿನಗಳಲ್ಲಿ ಅವರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಲಸಿಕೆಗೆ ಭಾರತ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಉಚಿತವಾಗಿ ಲಭ್ಯವಿದೆ. ಸದ್ಯ ಅಲ್ಲು ಅರ್ಜುನ್ ಅಭಿಮಾನಿಗಳು ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
Allu Sirish Wedding: ಅಲ್ಲು ಸಿರೀಶ್ ಹಳದಿ ಶಾಸ್ತ್ರ ಫೋಟೋ ವೈರಲ್; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?
ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾವುದಾದರೂ ಒಂದು ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹ ನೀಡುವುದು ಅಲ್ಲು ಅರ್ಜುನ್ ಅವರ ವಾಡಿಕೆ. ಅವರ ಹಾದಿಯಲ್ಲೇ ಸಾಗುತ್ತಿರುವ ಅಭಿಮಾನಿಗಳು, ಈ ವರ್ಷ ಎಚ್‌ಪಿವಿ ಲಸಿಕೆ ಕುರಿತ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಅಲ್ಲು ಅರ್ಜುನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅನುಷ್ಕಾ ಶರ್ಮಾ ವಾಪಸ್; ವಿರಾಟ್ ಕೊಹ್ಲಿ ಪತ್ನಿಯ ಭರ್ಜರಿ ರೀ-ಎಂಟ್ರಿ?
ಅಭಿಮಾನಿ ಸಂಘಗಳನ್ನು ಕೇವಲ ಸಿನಿಮಾ ಪ್ರಚಾರಕ್ಕೆ, ಸಂಭ್ರಮಾಚರಣೆಗೆ ಸೀಮಿತಗೊಳಿಸಬಾರದು ಎಂಬುದು ಅಲ್ಲು ಅರ್ಜುನ್ ಅವರ ಸ್ಪಷ್ಟ ನಿಲುವಾಗಿದೆ. ಇಂತಹ ಅರ್ಥಪೂರ್ಣ ಸಾಮಾಜಿಕ ಕೆಲಸಗಳಿಗೆ ಅಭಿಮಾನಿಗಳನ್ನು ಬಳಸಿಕೊಳ್ಳಬೇಕು ಎಂಬುದು ಅವರ ಆಶಯವಾಗಿದೆ. ಸದ್ಯ ಅಲ್ಲು ಅರ್ಜುನ್ ಅವರ ಅಭಿಮಾನಿಗಳ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಲ್ಲು ಅರ್ಜುನ್ ಅಭಿಮಾನಿಗಳ ಪೋಸ್ಟ್
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ
ಅಲ್ಲು ಅರ್ಜುನ್ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ ನಿರ್ದೇಶಕ ಅಟ್ಲೀ ಜೊತೆಗೆ ಬಿಗ್ ಬಜೆಟ್ ಸಿನಿಮಾದಲ್ಲಿ ಸಕ್ರಿಯವಾಗಿದ್ದು, ಏಪ್ರಿಲ್ 8ರಂದು ಆ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ. ಇದರ ಜೊತೆಗೆ ಲೋಕೇಶ್ ಕನಕರಾಜ್ ಜೊತೆಗೂ ಅಲ್ಲು ಅರ್ಜುನ್ ಸಿನಿಮಾ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ತ್ರಿವಿಕ್ರಮ್ ಶ್ರೀನಿವಾಸ್, ಸಂದೀಪ್ ರೆಡ್ಡಿ ವಂಗಾ, ಬೇಸಿಲ್ ಜೋಸೆಫ್ ಜೊತೆಗೂ ಒಂದೊಂದು ಸಿನಿಮಾವನ್ನು ಅಲ್ಲು ಅರ್ಜುನ್ ಮಾಡಲಿದ್ದಾರೆ ಎಂಬ ಟಾಕ್ ಇದೆ.