ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!

Thalapathy Vijay : ವಿಚ್ಛೇದನದ ವದಂತಿಗಳು ಮತ್ತು ಟೀಕೆಗಳು ಜೋರಾಗಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ತಮಿಳು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ.

ದಳಪತಿ ವಿಜಯ್‌

ವಿಚ್ಛೇದನದ ವದಂತಿಗಳು (Thalapathy Vijay and Trisha Krishnan) ಮತ್ತು ಟೀಕೆಗಳು ಜೋರಾಗಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ಕುತೂಹಲ ಮೂಡಿಸಿದೆ. ತಮಿಳು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ (public appearance with Krishnan) ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ.

ಸಾಂಪ್ರದಾಯಿಕ ಉಡುಪುಗಳಲ್ಲಿ ತ್ರಿಷಾ-ವಿಜಯ್‌

ನಟ ದಳಪತಿ ವಿಜಯ್, ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು . ಚಲನಚಿತ್ರ ನಿರ್ಮಾಪಕ ಕಲ್ಪತಿ ಎಸ್ ಸುರೇಶ್ ಅವರ ಪುತ್ರನಿಗಾಗಿ ಆಯೋಜಿಸಲಾದ ಆರತಕ್ಷತೆ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮ ನಡೆಯಿತು. ವಿಜಯ್ ಹೂಗುಚ್ಛ ಹಿಡಿದುಕೊಂಡು ಆಗಮಿಸಿದಾಗ, ಇಬ್ಬರೂ ತಾರೆಯರು ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Shah Rukh Khan: ಈ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್ ಒಟ್ಟಿಗೆ ನಟನೆ: ಫ್ಯಾನ್ಸ್‌ ಖುಷ್‌

ಕಳೆದೊಂದು ವಾರದಿಂದ ವಿಜಯ್ ಹಾಗೂ ಸಂಗೀತಾ ದಂಪತಿ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ವಿಜಯ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಕ್ಷದ ಸಮಾವೇಶಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೀಗ ತ್ರಿಶಾ ಜೊತೆಗೆ ಮದುವೆ ಸಮಾರಂಭಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.

ವಿಚ್ಛೇದನ ಅರ್ಜಿಯಲ್ಲಿ ಏನಿದೆ?

ವಿಜಯ್ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದಾರೆ ಎನ್ನಲಾದ ವಿಚ್ಛೇದನ ಅರ್ಜಿಯಲ್ಲಿ, ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಲಾಗಿತ್ತು. ಸಾಮಾನ್ಯವಾಗಿ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್ ಕೇಳಿಬಂದಾಗ ಅದನ್ನು ತಳ್ಳಿಹಾಕಲು ಸೆಲೆಬ್ರಿಟಿಗಳು ಬಯಸುತ್ತಾರೆ. ಆದರೆ ತ್ರಿಷಾ ಮತ್ತು ವಿಜಯ್ ಅವರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನು ಹೀಗೆ ವಿಜಯ್, ತ್ರಿಶಾ ಬಹಿರಂಗವಾಗಿ ಸುತ್ತಾಡುತ್ತಿರುವ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.



ನಟಿಯೊಂದಿಗೆ ನಿರಂತರವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ಸಂಗೀತಾ ಅವರಿಗೆ ಭಾವನಾತ್ಮಕ ತೊಂದರೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಲಾದ ಆರೋಪಗಳು

ಅರ್ಜಿಯಲ್ಲಿ ವರದಿಯಾದ ಹೇಳಿಕೆಗಳ ಪ್ರಕಾರ, ವಿಜಯ್ ವಿದೇಶ ಪ್ರವಾಸ ಮತ್ತು ನಟಿಯೊಂದಿಗೆ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮುಂದುವರೆಸಿದ್ದಾರೆ ಎಂದು ಸಂಗೀತಾ ಹೇಳಿದ್ದಾರೆ. ಅಂತಹ ಪ್ರವಾಸಗಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಭಾವನಾತ್ಮಕ ಯಾತನೆಯನ್ನು ಉಂಟುಮಾಡಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ. ವಿಜಯ್ ಹಾಗೂ ತ್ರಿಶಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಇನ್ನು ನಿನ್ನೆಯದ್ದಲ್ಲ. ಇದೀಗ ಆ ವಿಚಾರ ಹೆಚ್ಚು ಚರ್ಚೆಗೆ ಬಂದಿದೆ.

ಇದನ್ನೂ ಓದಿ: South Movies on OTT: ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ; ಈ ಎಲ್ಲ ಸೌತ್‌ ಸಿನಿಮಾಗಳು ಸ್ಟ್ರೀಮಿಂಗ್‌ ಎಲ್ಲಿ?

ವಿಜಯ್ ಹಾಗೂ ತ್ರಿಶಾ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗಿಲ್ಲಿ', 'ತಿರುಪಾಚ್ಚಿ', 'ಆಥಿ', 'ಕುರುವಿ' ಹಾಗೂ 'ಲಿಯೋ' ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ವಯಸ್ಸು 40 ದಾಟಿದ್ರು ನಟಿ ತ್ರಿಶಾ ಇನ್ನು ಮದುವೆ ಆಗಿಲ್ಲ.

Yashaswi Devadiga

View all posts by this author