ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರ್ಕೆಟ್ 'ಬೆಂಗಳೂರು'! ದೇಶದ ಇತರೆ ನಗರಗಳಲ್ಲಿ ಎಷ್ಟಿದೆ 'ಜನ ನಾಯಗನ್' ಚಿತ್ರದ ಟಿಕೆಟ್ ರೇಟ್?

ಸಿಎಂ ʻದಳಪತಿʼ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಟಿಕೆಟ್ ದರ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರೋಬ್ಬರಿ 2,600 ರೂ. ರವರೆಗೆ ಏರಿಕೆಯಾಗಿದ್ದು, ದೇಶದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರುಕಟ್ಟೆಯಾಗಿ ಸಿಲಿಕಾನ್ ಸಿಟಿ ಹೊರಹೊಮ್ಮಿದೆ. ತಮಿಳುನಾಡಿನ ಚೆನ್ನೈನಲ್ಲಿ ಗರಿಷ್ಠ 190 ಇದ್ದರೆ, ಬೆಂಗಳೂರಿನಲ್ಲಿ ದರ ಆಕಾಶ ಮುಟ್ಟಿದೆ!

ಭಾಷೆಯ ಹಂಗಿಲ್ಲದೆ ಎಲ್ಲ ಸಿನಿಮಾಗಳನ್ನು ಅಪ್ಪಿಕೊಳ್ಳುವ ಭಾರತದ ಅತ್ಯಂತ ಕಾಸ್ಮೋಪಾಲಿಟನ್ ಸಿನಿಮಾ ಮಾರುಕಟ್ಟೆ ಎನಿಸಿಕೊಂಡಿರುವ ‘ಸಿಲಿಕಾನ್ ಸಿಟಿ’ ಬೆಂಗಳೂರಿನಲ್ಲಿ ಸಿನಿಮಾ ವೀಕ್ಷಣೆ ದಿನದಿಂದ ದಿನಕ್ಕೆ ಭಾರಿ ದುಬಾರಿಯಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ 'ದಳಪತಿ' ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾದ ಟಿಕೆಟ್‌ ದರ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದೆ.

ಹಿಂದೆ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಹಾಗೂ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರಗಳ ಸಾಲಿಗೆ ಇದೀಗ ‘ಜನ ನಾಯಗನ್’ ಸೇರ್ಪಡೆಯಾಗಿದ್ದು, ದೇಶದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರುಕಟ್ಟೆಯಾಗಿ ಬೆಂಗಳೂರು ಹೊರಹೊಮ್ಮಿದೆ.

ರಿಕ್ಲೈನರ್ ಸೀಟ್‌ಗೆ ₹2,600; ದೇಶದಲ್ಲೇ ಅತಿ ದುಬಾರಿ!

ವಿಜಯ್ ಅವರ ಕೊನೆಯ ಸಿನಿಮಾವನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸಲು ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ದಿನದ ಪ್ರದರ್ಶನದ ರಿಕ್ಲೈನರ್ ಸೀಟ್‌ಗಳಿಗೆ ಬರೋಬ್ಬರಿ ₹2,600 ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಮಿಕ್ಕಂತೆ ₹1500, ₹1300 ದರಗಳು ಮಾಮೂಲಾಗಿವೆ. ಕೇವಲ ಮಲ್ಟಿಪ್ಲೆಕ್ಸ್‌ಗಳು ಮಾತ್ರವಲ್ಲದೆ, ನಗರದ ಪ್ರಮುಖ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲೂ ಟಿಕೆಟ್ ದರ ₹1,000 ಗಡಿ ದಾಟಿದೆ.

Jana Nayagan: ಸಿಎಂ ʻದಳಪತಿʼ ವಿಜಯ್ ಸಿನಿಮಾಕ್ಕಾಗಿ ಪೋಸ್ಟ್‌ಪೋನ್‌ ಆಗುತ್ತಾ ಪುತ್ರ ಜೇಸನ್ ಸಂಜಯ್ ಚೊಚ್ಚಲ ಚಿತ್ರ ʻಸಿಗ್ಮಾʼ?

ಅಗ್ಗದ ದರದ ಆಯ್ಕೆಗಳನ್ನು ಹುಡುಕುತ್ತಿರುವ ಪ್ರೇಕ್ಷಕರು ನಗರದ ಹೊರವಲಯದ ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲಿ ₹200 ಟಿಕೆಟ್‌ಗಳು ಲಭ್ಯವಿವೆಯಾದರೂ, ಆ ಶೋಗಳು ಸಹ ಈಗಾಗಲೇ ಹೌಸ್‌ಫುಲ್ ಆಗಿವೆ. ಭಾರಿ ದರ ನಿಗದಿಪಡಿಸಿದ್ದರೂ ಸಹ ನಗರದಲ್ಲಿ ಬೆಳಗಿನ ಬಹುತೇಕ ಶೋಗಳು ಸೋಲ್ಡ್‌ ಔಟ್‌ ಆಗಿರುವುದು ಗಮನಾರ್ಹ.

Jana Nayagan: ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ; ಮೂವಿ ರಿಲೀಸ್‌ ಯಾವಾಗ?

ಪ್ರಮುಖ ನಗರಗಳ ಗರಿಷ್ಠ ಟಿಕೆಟ್ ದರಗಳ ಹೋಲಿಕೆ

ʻಜನ ನಾಯಗನ್‌ʼ ತಮಿಳುನಾಡಿನ ಸೂಪರ್‌ಸ್ಟಾರ್ ಚಿತ್ರವಾಗಿದ್ದರೂ, ಸ್ವತಃ ತಮಿಳುನಾಡಿನ ರಾಜಧಾನಿ ಚೆನ್ನೈಗಿಂತ ಬೆಂಗಳೂರಿನಲ್ಲೇ ಟಿಕೆಟ್ ದರ ಗಣನೀಯವಾಗಿ ಹೆಚ್ಚಿದೆ. ದೇಶದ ಇತರೆ ನಗರಗಳ ಗರಿಷ್ಠ ಟಿಕೆಟ್ ದರ ಹೀಗಿದೆ.

ಬೆಂಗಳೂರು: ₹2,600

ಮುಂಬೈ: ₹900

ದೆಹಲಿ: ₹900

ಕೊಚ್ಚಿ: ₹750

ಹೈದರಾಬಾದ್: ₹708

ಚೆನ್ನೈ: ₹190

ಬಿಗ್ ಬಜೆಟ್ ಸಿನಿಮಾಗಳಿಗೆ 'ಸಿಲಿಕಾನ್ ಸಿಟಿ'ಯೇ ಹಾಟ್ ಸ್ಪಾಟ್

ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಭಾರಿ ದರ ನಿಗದಿಪಡಿಸುವುದು ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ. ಈ ಹಿಂದೆ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಚಿತ್ರದ ಐಮ್ಯಾಕ್ಸ್ ಟಿಕೆಟ್‌ಗೆ ₹1,600 ಹಾಗೂ ಮುಂಬರುವ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರಕ್ಕೆ ₹750 ರಿಂದ ₹1,250 ವರೆಗೆ ದರ ನಿಗದಿಪಡಿಸಲಾಗಿತ್ತು. ಎಷ್ಟೇ ದುಬಾರಿಯಾಗಿದ್ದರೂ ಪ್ರೇಕ್ಷಕರು ಮುಗಿಬಿದ್ದು ಶೋಗಳನ್ನು ಹೌಸ್‌ಫುಲ್ ಮಾಡುತ್ತಿರುವುದು ಬೆಂಗಳೂರಿಗರ ಸಿನಿಮಾ ಪ್ರೀತಿಗೆ ಸಾಕ್ಷಿಯಾಗಿದೆ. ಆದರೆ ಆ ಪ್ರೀತಿಯನ್ನು ದುರುಪಯೋಗ ಪಡಿಸಿಕೊಂಡು, ದುಬಾರಿ ಮೊತ್ತದ ಹಣವನ್ನು ಲೂಟಿ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕೂಡ ಕೇಳಬೇಕಾಗುತ್ತದೆ.