ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CM vijay: 'ಜನ ನಾಯಗನ್' ಸಿನಿಮಾ ಬಿಡುಗಡೆ ಯಾವಾಗ? ʻಸತ್ಯ ಹೇಳೋಕೆ ನಂಗೂ ಧೈರ್ಯ ಇಲ್ಲʼ ಎಂದ ನಿರ್ದೇಶಕ ಎಚ್. ವಿನೋದ್

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನನಾಯಗನ್' ಬಿಡುಗಡೆ ವಿಳಂಬದ ಕುರಿತು ನಿರ್ದೇಶಕ ಎಚ್. ವಿನೋದ್, "ನನಗೆ ನಿಜ ಹೇಳುವ ಧೈರ್ಯ ನನಗಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸೆನ್ಸಾರ್ ಮಂಡಳಿಯ ಕಾನೂನು ಹೋರಾಟ, ಆನ್‌ಲೈನ್ ಲೀಕ್ ಹಾಗೂ ಸೈಬರ್ ಕ್ರೈಮ್ ಬಂಧನಗಳ ನಡುವೆಯೂ ಚಿತ್ರದ ಮೇಲಿನ ಕ್ರೇಜ್ ಕುಗ್ಗಿಲ್ಲ.

ತಮಿಳುನಾಡು ಸಿಎಂ, ದಳಪತಿ ವಿಜಯ್‌ ನಟನೆಯ ಬಹುನಿರೀಕ್ಷಿತ 'ಜನನಾಯಗನ್' (Jana Nayagan) ಸಿನಿಮಾದ ಬಿಡುಗಡೆ ಯಾವಾಗ ಅನ್ನೋದು ಇನ್ನೂ ಪ್ರಶ್ನಾರ್ಥಕವಾಗಿಯೇ ಇದೆ. ಈಚೆಗೆ ಈ ಚಿತ್ರದ ನಿರ್ದೇಶಕ ಎಚ್.‌ ವಿನೋದ್‌ ಅವರಿಗೆ ಈ ಕುರಿತು ಪ್ರಶ್ನೆ ಎದುರಾಗಿದೆ. ಅದಕ್ಕೆ ಶಾಕಿಂಗ್‌ ಉತ್ತರವನ್ನು ವಿನೋದ್‌ ನೀಡಿದ್ದಾರೆ.

ಶಾಕಿಂಗ್‌ ಉತ್ತರ ನೀಡಿದ ವಿನೋದ್

ನಿರ್ದೇಶಕ ಪಾಂಡಿರಾಜ್ ಅವರ 'ಪರಿಮಳಾ & ಕೋ' ಚಿತ್ರದ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಎಚ್‌. ವಿನೋದ್‌ಗೆ ಅಂತಿಮವಾಗಿ 'ಜನ ನಾಯಗನ್' ಚಿತ್ರವನ್ನು ಪ್ರೇಕ್ಷಕರು ಯಾವಾಗ ಚಿತ್ರಮಂದಿರಗಳಲ್ಲಿ ನಿರೀಕ್ಷಿಸಬಹುದು ಎಂದು ಪ್ರಶ್ನಿಸಲಾಯಿತು. ಆದರೆ, ನಿರ್ದೇಶಕರು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಲಿಲ್ಲ. ಬದಲಿಗೆ ಅಚ್ಚರಯ ಉತ್ತರವನ್ನಷ್ಟೇ ನೀಡಿದ್ದಾರೆ. "ಅದು ನನ್ನ ಕೈಯಲ್ಲಿಲ್ಲ. ನಿಮಗೆ ನಿಜವನ್ನು ಹೇಳುವ ಧೈರ್ಯ ಕೂಡ ನನಗಿಲ್ಲ. ಒಂದು ವೇಳೆ ನಾನು ಧೈರ್ಯ ಮಾಡಿ ಹೇಳಿದರೂ, ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಧೈರ್ಯ ನಿಮಗಿರುವುದಿಲ್ಲ" ಎಂದು ಎಚ್‌. ವಿನೋದ್ ನಕ್ಕಿದ್ದಾರೆ. ಈ ಉತ್ತರ ಎಲ್ಲರಿಗೂ ಅಚ್ಚರಿ ನಿಡಿದೆ.

ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜನ ನಾಯಗನ್

ವಿಜಯ್ ನಟನೆಯ ಜ ನಾಯಗನ್‌ ಚಿತ್ರವು ಜನವರಿ 9 ರಂದು ರಿಲೀಸ್‌ ಆಗಬೇಕಿತ್ತು. ಆದರೆ ಆರಂಭದಿಂದಲೂ ಸಾಲು ಸಾಲು ಅಡೆತಡೆಗಳನ್ನು ಎದುರಿಸುತ್ತಲೇ ಬಂದಿರುವ ಈ ಸಿನಿಮಾಕ್ಕೆ ಇನ್ನೂ ಕೂಡ ಸೆನ್ಸಾರ್‌ ಪ್ರಮಾಣಪತ್ರ ಸಿಕ್ಕಿಲ್ಲ. ಬಿಡುಗಡೆ ವಿಳಂಬದಿಂದ ತಮಗೆ ಭಾರಿ ಆರ್ಥಿಕ ನಷ್ಟವಾಗುತ್ತಿದೆ ಎಂದು ಆರೋಪಿಸಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ದೂರುಗಳನ್ನು ಪರಿಗಣಿಸುವುದು "ಅಪಾಯಕಾರಿ ಪ್ರವೃತ್ತಿ" ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ, ಚಿತ್ರಕ್ಕೆ 'ಯು/ಎ' (U/A) ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ನಿರ್ದೇಶನ ನೀಡಿತ್ತು. ಆದರೆ, ಸೆನ್ಸಾರ್ ಮಂಡಳಿಯು ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರಿಂದ ಕಾನೂನು ಪ್ರಕ್ರಿಯೆ ಮತ್ತಷ್ಟು ಮುಂದುವರಿಯಿತು.

Jana Nayagan: 'ಜನ ನಾಯಗನ್' ದೃಶ್ಯ ಲೀಕ್‌; ಬೆಂಬಲಕ್ಕೆ ನಿಂತ ತಾರೆಯರು

ಮಾರ್ಚ್ ತಿಂಗಳಲ್ಲಿ ನಿಗದಿಯಾಗಿದ್ದ ಸೆನ್ಸಾರ್‌ ಸ್ಕ್ರೀನಿಂಗ್ ವೇಳೆ ಸಮಿತಿಯ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದ ಕಾರಣ ಪ್ರದರ್ಶನ ರದ್ದಾಗಿದ್ದು ಚಿತ್ರಕ್ಕೆ ಮತ್ತೊಂದು ಹಿನ್ನಡೆಯಾಗಿತ್ತು.‌ ಇಷ್ಟೆಲ್ಲಾ ಸಂಕಷ್ಟಗಳು ನಡೆಯುವಾಗಲೇ ಏಪ್ರಿಲ್ ತಿಂಗಳಲ್ಲಿ 'ಜನನಾಯಗನ್' ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಚಿತ್ರತಂಡ ನೀಡಿದ ದೂರಿನ ಮೇರೆಗೆ ತಮಿಳುನಾಡು ಪೊಲೀಸರ ಸೈಬರ್ ಕ್ರೈಮ್ ವಿಭಾಗವು ಡೇಟಾ ಕಳ್ಳತನ ಮತ್ತು ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೀಲಾನ್ಸ್ ಅಸಿಸ್ಟೆಂಟ್ ಎಡಿಟರ್ ಸೇರಿದಂತೆ ಮೂವರನ್ನು ಬಂಧಿಸಿತ್ತು.

‘ಜನ ನಾಯಗನ್’ ಮಾದರಿಯಲ್ಲೇ ʻಕೆಡಿʼ ಚಿತ್ರಕ್ಕೂ ಸೆನ್ಸಾರ್‌ ಸಮಸ್ಯೆ; ಕೆವಿಎನ್ ಪ್ರೊಡಕ್ಷನ್ಸ್‌ಗೆ ಮತ್ತೊಮ್ಮೆ ಅಗ್ನಿಪರೀಕ್ಷೆ

ಯಾವಾಗ ರಿಲೀಸ್‌ ಆಗಬೋದು ಈ ಸಿನಿಮಾ?

ಬಿಡುಗಡೆಯ ಸುತ್ತ ಇಷ್ಟೆಲ್ಲಾ ಗೊಂದಲಗಳಿದ್ದರೂ, ಅಭಿಮಾನಿಗಳಲ್ಲಿ ಈ ಚಿತ್ರದ ಮೇಲಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಚಿತ್ರವು ಮುಂದಿನ ಕೆಲವು ವಾರಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಹೇಳಿದ್ದಾರೆ. ಯಾವುದೇ ಅಧಿಕೃತ ಪ್ರಕಟಣೆ ಹೊರಬರದಿದ್ದರೂ, ಹಲವು ಟಿಕೆಟ್ ಬುಕ್ಕಿಂಗ್ ಆ್ಯಪ್‌ಗಳು ಜೂನ್ 19 ಅನ್ನು ಚಿತ್ರದ ತಾತ್ಕಾಲಿಕ ಬಿಡುಗಡೆಯ ದಿನಾಂಕವೆಂದು ತೋರಿಸುತ್ತಿವೆ.

'ಜನ ನಾಯಗನ್', ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಎನ್ನಲಾಗುತ್ತಿರುವುದರಿಂದ ಇದು ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದ ನಂತರ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಇವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಭರ್ಜರಿ ಜಯ ಸಾಧಿಸಿದ್ದು, ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.