ಮಿಲನಾ ಪ್ರಕಾಶ್ (Milana Prakash) ನಿರ್ದೇಶನದ 'ಡೆವಿಲ್' (The Devil Movie) ಸಿನಿಮಾ ಸಾಕಷ್ಟು ಅಡೆತಡೆ ಎದುರಿಸಿ ಡಿಸೆಂಬರ್ 11ರಂದು ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಫಸ್ಟ್ ವೀಕೆಂಡ್ ಒಳ್ಳೆ ಕಲೆಕ್ಷನ್ ಮಾಡಿತ್ತು. ಬಳಿಕ ಸದ್ದು ಮಾಡಿರಲಿಲ್ಲ. ಇದೀಗ ಸಿನಿಮಾ ಒಟಿಟಿಗೆ (OTT) ಎಂಟ್ರಿ ಕೊಡುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಏಳು ತಿಂಗಳ ಬಳಿಕ ಇದೀಗ ಸಿನಿಮಾ ಒಟಿಟಿಗೆ ಬರುತ್ತಿದೆ.
ಡಿಜಿಟಲ್ ಸ್ಟ್ರೀಮಿಂಗ್
ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡೋಣ ಎಂದು ಸುಮ್ಮನಾಗಿದ್ದರು. ಒಂದು ತಿಂಗಳು ಎರಡು ತಿಂಗಳು ಕಳೆದರೂ ಸಿನಿಮಾ ಓಟಿಟಿಗೆ ಎಂಟ್ರಿ ಕೊಡಲಿಲ್ಲ. ಅಭಿಮಾನಿಗಳಂತೂ ಕಾದು ಕಾದು ಸುಮ್ಮನಾಗಿದ್ದರು. ಇಷ್ಟು ತಡವಾಗಿ ಒಟಿಟಿಗೆ ಬರಲು ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕೊನೆಗೂ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತಿದೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ: Amruthadhaare Serial: ದಿಯಾ ಕಾಣೆಯಾಗಿರೋ ವಿಷ್ಯ ಜೈದೇವ್ ನೆಮ್ಮದಿ ಕೆಡಿಸ್ತಿದೆ! ಮುಂದೇನು?
Zee 5 ಕನ್ನಡದಲ್ಲಿ ಸ್ಟ್ರೀಮ್
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳ 17ನೇ ತಾರೀಖಿಗೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಜುಲೈ 17ರಿಂದ ‘ಡೆವಿಲ್’ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.
ಮೂಲಗಳ ಪ್ರಕಾರ, ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವೇ ಒಟಿಟಿಯಲ್ಲಿ ಲಭ್ಯವಿರಲಿದೆ ಎನ್ನಲಾಗುತ್ತಿದೆ. ಇನ್ನು ‘ಡೆವಿಲ್’ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸಹ ಜೀ ಸಂಸ್ಥೆಯವರೇ ಖರೀದಿ ಮಾಡಿದ್ದು, ಕೆಲವೇ ದಿನಗಳಲ್ಲಿ ಜೀ ಚಾನೆಲ್ನಲ್ಲಿ ವರ್ಲ್ಡ್ ಪ್ರೀಯಮರ್ ಸಹ ಆಗಲಿದೆ.
‘ಡೆವಿಲ್’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಜೀ5 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ಡೆವಿಲ್’ ಸಿನಿಮಾದ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿರುವ ಜೀ5, ‘ಅಧಿಕಾರದ ಆಟದಲ್ಲಿ ಇವನದೇ ರೂಲ್ಸ್. ಸಿಂಹಾಸನ ಒಂದೇ, ಅದರ ಮೇಲೆ ಕೂರೋ ರಾಜನೂ ಒಬ್ಬನೇ… “ದಿ ಡೆವಿಲ್”. ಜುಲೈ 17ರಿಂದ Zee 5 ಕನ್ನಡದಲ್ಲಿ ಸ್ಟ್ರೀಮ್ ಆಗುತ್ತಿದೆ’ ಎಂದು ಬರೆದುಕೊಂಡಿದೆ.
'ಡೆವಿಲ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ದರ್ಶನ್ ಅಭಿಮಾನಿಗಳನ್ನು ರಂಜಿಸಿದ್ದರು. ಸಿಎಂ ಮಗ ಧನುಷ್ ಹಾಗೂ ವಿದೇಶದಲ್ಲಿರುವ ಡಾನ್ ಜೊತೆಗೆ ಸಾಮಾನ್ಯ ವ್ಯಕ್ತಿ ಕೃಷ್ಣ ಆಗಿ ದರ್ಶನ್ ಬಣ್ಣ ಹಚ್ಚಿದ್ದರು.
'ತಾರಕ್' ಬಳಿಕ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬಂದ 2ನೇ ಸಿನಿಮಾ ಇದಾಗಿತ್ತು. ಸ್ವತಃ ಪ್ರಕಾಶ್ ಸಿನಿಮಾ ನಿರ್ಮಾಣ ಮಾಡಿದ್ದರು. ಮೊದಲ ದಿನವೇ ಸಿನಿಮಾ 13.8 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಬಳಿಕ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಸಿಗಲಿಲ್ಲ.
ಇದನ್ನೂ ಓದಿ: B Jayashree Karavali: ವಿವಾದಗಳ ಮಧ್ಯೆ ಕರಾವಳಿ ಚಿತ್ರತಂಡದಿಂದ ಹೊರ ಬಿತ್ತು ಬಿಗ್ ಅಪ್ಡೇಟ್!
40 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ಒಟ್ಟಾರೆ 30ರಿಂದ 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದರು. ಸಿನಿಮಾ ಬಜೆಟ್ 40 ಕೋಟಿ ರೂ. ದಾಟಿತ್ತು ಎನ್ನಲಾಗಿತ್ತು.