ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil Trailer: ದರ್ಶನ್‌ ಸಿನಿಮಾದಲ್ಲಿ ಗಿಲ್ಲಿ ನಟನ ಕಾಮಿಡಿ ಝಲಕ್;‌ ಪಂಚ್‌ ‌ಡೈಲಾಗ್ ಪಕ್ಕಾ ಎಂದ ಫ್ಯಾನ್ಸ್!

Darshan The Devil Trailer: ದಿ ಡೆವಿಲ್‌ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ. ಜೈಲು ಕಥೆಯಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟನ ಕಾಮಿಡಿ ಝಲಕ್ ಹೈಲೈಟ್ ಆಗಿದೆ. ಗಿಲ್ಲಿ ಫ್ಯಾನ್ಸ್ ಕೂಡ ಡಿ ಬಾಸ್ ಚಿತ್ರಕ್ಕೆ ಶುಭ ಕೋರಿ, ಸಿನಿಮಾ ನೋಡುವ ಪಣ ತೊಟ್ಟಿರುವುದು ವಿಶೇಷ.

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ತೂಗುದೀಪ ಅಭಿನಯದ ʻದಿ ಡೆವಿಲ್ʼ‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದರ್ಶನ್‌ ಜೈಲಿನಲ್ಲಿರುವ ಈ ಸಿನಿಮಾ ತೆರೆಕಾಣುತ್ತಿದ್ದು, ಅಭಿಮಾನಿಗಳು ಈ ಬಾರಿ ಡಿ ಬಾಸ್‌ಗೆ ದೊಡ್ಡ ಗೆಲುವು ತಂದುಕೊಡುವ ಪಣ ತೊಟ್ಟಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಟ್ರೇಲರ್‌ನಲ್ಲಿ ಹೈಲೈಟ್‌ ಆಗಿರುವ ಅಂಶಗಳಲ್ಲಿ ಗಿಲ್ಲಿ ನಟ ಕೂಡ ಒಬ್ಬರು!

ʻಡೆವಿಲ್‌ʼನಲ್ಲಿ ಗಿಲ್ಲಿ ನಟ

ಹೌದು, ಚಿತ್ರತಂಡ ಕೆಲ ದಿನಗಳ ಹಿಂದಷ್ಟೇ ಡೆವಿಲ್‌ ಸಿನಿಮಾದಲ್ಲಿ ಗಿಲ್ಲಿ ನಟ ಆಕ್ಟ್‌ ಮಾಡಿದ್ದಾರೆ ಎಂಬ ವಿಚಾರವನ್ನು ಹಂಚಿಕೊಂಡಿತ್ತು. ಇದೀಗ ಟ್ರೇಲರ್‌ನಲ್ಲಿ ಒಂದು ಪಂಚಿಂಗ್‌ ಡೈಲಾಗ್‌ ಮೂಲಕ ಗಿಲ್ಲಿ ನಟ ಪ್ರತ್ಯಕ್ಷ ಆಗಿದ್ದು, ಟ್ರೇಲರ್‌ನಲ್ಲಿ ಹಿಂಗೆ, ಇನ್ನೂ ಸಿನಿಮಾದಲ್ಲಿ ಎಷ್ಟೆಲ್ಲಾ ಇರಬೇಡ ಎಂದು ಊಹಿಸುತ್ತಿದ್ದಾರೆ. ಪೊಲೀಸ್‌ ಅಧಿಕಾರಿ ಪಾತ್ರ ಮಾಡಿರುವ ನಟ ಶೋಭರಾಜ್‌ ಎದುರಲ್ಲಿ ಕುಳಿತು, "ಎಕ್ಸ್‌ಕ್ಯೂಸ್ ಮಿ ಪಿಸಿ, ಒಂಚೂರು ಎಸಿ ಹಾಕಮ್ಮ ಲಾಟ್‌ ಆಫ್‌ ಶೆಖೆ" ಎಂಬ ಡೈಲಾಗ್‌ ಹೇಳಿದ್ದಾರೆ.

Actor Darshan: ದರ್ಶನ್‌ಗೆ ಜಾಮೀನು ರದ್ದು; ದಿ ಡೆವಿಲ್‌ ಸಿನಿಮಾಗಿದ್ಯಾ ಕಂಟಕ? ಬಿಡುಗಡೆ ಯಾವಾಗ?

ದಿ ಡೆವಿಲ್‌ ಟ್ರೇಲರ್‌ ವಿಮರ್ಶೆ



ಈಗಾಗಲೇ ತಮ್ಮ ಪಂಚಿಂಗ್ ಡೈಲಾಗ್‌ ಮೂಲಕವೇ ಎಲ್ಲರ ಗಮನಸೆಳೆದಿರುವ ಗಿಲ್ಲಿ ನಟ, ಸಿನಿಮಾದಲ್ಲೂ ಅದೇ ಮಾದರಿಯ ಡೈಲಾಗ್‌ ಹೇಳಿದ್ದು, ಸಿನಿಮಾದಲ್ಲಿ ಇವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಮನೆ ಮಾಡಿದೆ.

ಬಿಗ್‌ ಬಾಸ್‌ನಲ್ಲಿ ಫೇಮಸ್‌ ಆಗಿರುವ ಗಿಲ್ಲಿ ನಟ

ಗಿಲ್ಲಿ ನಟ ಸದ್ಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಯಾಗಿದ್ದಾರೆ. ಮನೆಯೊಳಗೆ ಅವರು ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿದ್ದಾರೆ. ಹೊರಗಡೆಯೂ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್‌ ಫಾಲೋಯಿಂಗ್‌ ಇದೆ. ಬಿಗ್‌ ಬಾಸ್‌ ಶೋನಿಂದಾಗಿ ಅವರಿಗೆ ಫ್ಯಾನ್ಸ್‌ ಸಂಖ್ಯೆಯು ಜಾಸ್ತಿ ಆಗಿದೆ. ಇದೀಗ ಡಿ ಬಾಸ್‌ ಸಿನಿಮಾದಲ್ಲಿ ಅವರಿಗೆ ಚಾನ್ಸ್‌ ಸಿಕ್ಕಿರುವುದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಗಿಲ್ಲಿ ಫ್ಯಾನ್ಸ್‌ ಏನಂದ್ರು?

ಟ್ರೇಲರ್‌ನಲ್ಲಿ ಗಿಲ್ಲಿಯನ್ನು ಕಂಡ ಫ್ಯಾನ್ಸ್‌ ಖುಷಿಯಾಗಿದ್ದಾರೆ. "ಗಿಲ್ಲಿ ಅಭಿಮಾನಿಗಳ ಕಡೆಯಿಂದ ಡೆವಿಲ್ ಚಿತ್ರಕ್ಕೆ ಶುಭಾಶಯಗಳು..", "ಗಿಲ್ಲಿಗಾಗಿ ನಾವು ಸಿನಿಮಾ ನೋಡ್ತಿವಿ", "ನಮ್‌ ಬಾಸ್‌ ಜೊತೆ ಗಿಲ್ಲಿ ಕಾಮಿಡಿ ಮಸ್ತ್‌ ಇರಲಿದೆ", "ಡೆವಿಲ್‌ ಸಿನಿಮಾದಲ್ಲಿ ಗಿಲ್ಲಿ ಡೈಲಾಗ್‌ ಹೇಗಿರಲಿವೆ ಎಂದು ಕುತೂಹಲದಿಂದ ಕಾಯುತ್ತಿದ್ದೇವೆ" ಎಂದೆಲ್ಲಾ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ʻಡೆವಿಲ್‌ʼ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಇದ್ದಾರೆ. ಶರ್ಮಿಳಾ ಮಾಂಡ್ರೆ ಇಂಪಾರ್ಟೆಂಟ್‌ ರೋಲ್‌ ಮಾಡಿದ್ದು, ಮಹೇಶ ಮಾಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ಚಂದು ಗೌಡ, ವಿನಯ್‌ ಗೌಡ, ಗಿಲ್ಲಿ ನಟ, ಗೋವಿಂದೇಗೌಡ, ರೋಜರ್‌ ನಾರಾಯಣ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.