ಬೆಂಗಳೂರು: ಯುವ ಪ್ರತಿಭೆಗಳ ತಂಡದಿಂದ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಕನ್ನಡ ಚಿತ್ರ 'ರೋಣ' (Rona Movie) ಮೊದಲ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು ಬಹಳಷ್ಟು ಅದ್ಬುತವಾಗಿ ಮೂಡಿಬಂದಿದೆ. 'ಅಬ್ಬಬ್ಬಾ ನಮ್ಮೂರ ಜಾತ್ರೇ ಬಂತೂ ಹಾಡು' ಇದೀಗ ಸಂಗೀತ ಪ್ರಿಯರ ಮೆಚ್ಚುಗೆ ಗಳಿಸಿದೆ. ಜಾತ್ರೆಯ ಸಂಭ್ರಮವನ್ನು ಹೆಚ್ಚಿಸುವ ಈ ಹಾಡು "ಅಬ್ಬಬ್ಬಾ ನಮ್ಮೂರ ಜಾತ್ರೇ ಬಂತೂ ಎನ್ನುವ ಗಾಯನ ಸಿನಿಪ್ರಿಯರನ್ನು ಸೆಳೆದಿದೆ.
ಬಿಕೆ ಅರ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಈ ಹಾಡು, ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದು ಯಶಸ್ಸು ಕಂಡಿದೆ. ಹಾಡಿನ ಸಂಗೀತ ಮತ್ತು ಸಾಹಿತ್ಯವು ಜನರನ್ನು ಜಾತ್ರೆಯ ಸಂಭ್ರಮದ ವಾತಾವರಣಕ್ಕೆ ಕೊಂಡೊಯ್ಯಲಿದೆ. ಖ್ಯಾತ ಗಾಯಕ ಆಂಟನಿ ದಾಸನ್ ಅವರ ವಿಶಿಷ್ಟ ಧ್ವನಿಯಲ್ಲಿ ಈ ಜಾನಪದ ಹಾಡು ಹೊಸ ಉತ್ಸಾಹ ವನ್ನು ತುಂಬಿದೆ.
'ರೋಣ' ಚಿತ್ರದ 'ಅಬ್ಬಬ್ಬಾ ನಮ್ಮ ಊರ ಜಾತ್ರೆ ಬಂತು' ಹಾಡು ಬಿಡುಗಡೆ:
ಹಿರಿಯ ಗೀತರಚನಾಕಾರರಾದ ಡಾ. ವಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಸಾಹಿತ್ಯವು ಗ್ರಾಮೀಣ ಸೊಗಡನ್ನು ನೀಡಿದೆ. ಗಗನ್ ಬದೇರಿಯಾ ಅವರ ಸಂಗೀತ ನಿರ್ದೇಶನವು ಮಾಸ್ ಮತ್ತು ಜಾನಪದದ ಮಿಶ್ರಣವಾಗಿ ಕೇಳುಗರನ್ನು ಹಿಡಿದಿರಿಸಿದೆ. ರಘು ಅರ್ ಜೆ ಅವರ ನೃತ್ಯ ನಿರ್ದೇಶನದಲ್ಲಿ ಕಲಾವಿದರು ಜಾತ್ರೆಯ ಹುಮ್ಮಸ್ಸಿನ ಕುಣಿತವನ್ನು ಪ್ರದರ್ಶಿಸಿದ್ದಾರೆ.
ಇದನ್ನು ಓದಿ:Kanakaraja Movie: ಸ್ಯಾಂಡಲ್‌ವುಡ್‌ಗೆ ಅನೂಪ್ ರೇವಣ್ಣ ರೀ ಎಂಟ್ರಿ; ʼಕನಕರಾಜʼ ಚಿತ್ರಕ್ಕೆ ಮುಹೂರ್ತ
ನಿರ್ದೇಶಕ ಸತೀಶ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ ಈ 'ರೋಣ' ಚಿತ್ರವು ನವೆಂಬರ್ 7ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಘು ರಾಜ ನಂದ , ಶರತ್ ಲೋಹಿತಾಶ್ವ, ಚಿಲ್ಲರ್ ಮಂಜ, ಬಾಲರಾಜ್ ವಾಡಿ, ಮತ್ತು ಪ್ರಕೃತಿ ಕೆ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಒಟ್ಟಿನಲ್ಲಿ, ರೋಣ ಚಿತ್ರದ ಈ ಜಾತ್ರೆಯ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಬಹಳಷ್ಟು ಹೆಚ್ಚಿಸಿದೆ.