ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil: ರಿಲೀಸ್‌ ಆಯ್ತು ʼಇದ್ರೆ ನೆಮ್ಮದಿಯಾಗ್ ಇರ್ಬೇಕ್ʼ ಸಾಂಗ್‌; ಅರ್ಧ ಗಂಟೆಯಲ್ಲೇ 5 ಲಕ್ಷ ವ್ಯೂವ್ಸ್‌*!

ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಮತ್ತೆ ನಟ ದರ್ಶನ್‌ ಜೈಲು ಸೇರಿದ್ದಾರೆ. ಅವರು ಜೈಲಿನಲ್ಲಿರುವಾಗಲೇ ಅವರ ಡೆವಿಲ್‌ ಚಿತ್ರದ ಕುರಿತು ಹಲವು ಅಪ್‌ಡೇಟ್‌ಗಳು ದೊರೆಯುತ್ತಿವೆ. ಚಿತ್ರತಂಡ (The Devil) ಇದೀಗ ಪ್ರಚಾರದ ಮೊದಲ ಹಂತವಾಗಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಬಿಡುಗಡೆ ಮಾಡಿದೆ.

ರಿಲೀಸ್‌ ಆಯ್ತು ʼಇದ್ರೆ ನೆಮ್ಮದಿಯಾಗ್ ಇರ್ಬೇಕ್ʼ ಸಾಂಗ್‌

Vishakha Bhat Vishakha Bhat Aug 24, 2025 10:48 AM

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಮತ್ತೆ ನಟ ದರ್ಶನ್‌ ಜೈಲು ಸೇರಿದ್ದಾರೆ. ಅವರು ಜೈಲಿನಲ್ಲಿರುವಾಗಲೇ ಅವರ ಡೆವಿಲ್‌ ಚಿತ್ರದ ಕುರಿತು ಹಲವು ಅಪ್‌ಡೇಟ್‌ಗಳು ದೊರೆಯುತ್ತಿವೆ. ಚಿತ್ರತಂಡ (The Devil) ಇದೀಗ ಪ್ರಚಾರದ ಮೊದಲ ಹಂತವಾಗಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಬಿಡುಗಡೆ ಮಾಡಿದೆ. ಈ ಸಾಂಗ್‌ ಮೊದಲೇ ರಿಲೀಸ್‌ ಆಗಬೇಕಿತ್ತು. ಈ ಹಾಡಿನ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಕೊನೆಗೂ ಸಾಂಗ್‌ ರಿಲೀಸ್‌ ಆಗಿದೆ. ಇಂದು ಬೆಳಗ್ಗೆ 10.5ಕ್ಕೆ ಸರಿಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ. ರಿಲೀಸ್‌ ಆಗಿ ಅರ್ಧ ಗಂಟೆಯೊಳಗೇ 5 ಲಕ್ಷ ವೀವ್ಸ್‌ಆಗಿದೆ.

ದಿ ಡೆವಿಲ್‌ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.

ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಲನ್‌, ತಾರಕ್ ಮುಂತಾದ ಸಿನಿಮಾಗಳನ್ನು ಮಾಡಿದ್ದ ಅವರು ಈಗ ಪಕ್ಕಾ ಮಾಸ್ ಕಥೆಯನ್ನು ಪ್ರೇಕ್ಷಕರ ಎದುರು ತರಲು ಸಜ್ಜಾಗಿದ್ದಾರೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆ ಹಂತದ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಬಹು ನಿರೀಕ್ಷಿತ ಚಿತ್ರ ಡೆವಿಲ್‌ ಸಿನಿಮಾದ ಇದ್ರೆ ನೆಮ್ಮದಿಯಾಗಿರ್ಬೇಕು ಎನ್ನುವ ಸಾಂಗ್‌ ಸ್ವಾತಂತ್ರ್ಯ ದಿನಾಚರಣೆಯ ದಿನವೇ ರಿಲೀಸ್‌ ಆಗಬೇಕಿತ್ತು. ಆದರೆ ದರ್ಶನ್‌ ಮತ್ತೆ ಜೈಲುಪಾಲಾದ್ದರಿಂದ ಚಿತ್ರತಂಡ ಅದನ್ನು ಮುಂದೂಡಿತ್ತು.

ಈ ಸುದ್ದಿಯನ್ನೂ ಓದಿ: Vijayalakshmi Darshan: ಡೆವಿಲ್‌ ಚಿತ್ರದ ಪರ ವಿಜಯಲಕ್ಷ್ಮಿ ಕ್ಯಾಂಪೇನ್‌; ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

ದರ್ಶನ್‌ ಈಗ ಮತ್ತೆ ಜೈಲು ಪಾಲಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಸಿಗದಿದ್ರೆ ಡೆವಿಲ್ ಚಿತ್ರ ತಂಡಕ್ಕೆ ತೊಂದರೆಯಾಗಬಾರದೆಂದು ಶೂಟಿಂಗ್‌ ಸಂಪೂರ್ಣ ಮುಗಿಸಲಾಗಿದೆ. ಕಳೆದ ವಾರವಷ್ಟೇ ರಾಜಸ್ಥಾನದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿ ದರ್ಶನ್‌ ವಾಪಸ್‌ ಆಗಿದ್ದರು. ಡೆವಿಲ್ ಸಿನಿಮಾದ ತನ್ನ ಪತ್ರದ ಡಬ್ಬಿಂಗ್ ಕೂಡ ಮಾಡಿ ಕೊಟ್ಟಿದ್ದಾರೆ. ಸಿನಿಮಾ ಸಂಬಂಧಿಸಿದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಡೆವಿಲ್ ಸಿನಿಮಾಗೆ ಸುಮಾರು 40 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದಾರೆ.