Viral Video: ಎಂಜಿನಿಯರ್‌ಗೆ ಶೂನಿಂದ ಥಳಿಸಿದ ಬಿಜೆಪಿ ಕಾರ್ಯಕರ್ತ; ಶಾಕಿಂಗ್ ವಿಡಿಯೊ ವೈರಲ್
Dalit Engineer Beaten: ದಲಿತ ಎಂಜಿನಿಯರ್ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ವಿದ್ಯುತ್ ಇಲಾಖೆಯ ಕಚೇರಿಯಲ್ಲಿ ನಡೆದಿದೆ. ಎಂಜಿನಿಯರ್ ತಲೆಗೆ ಶೂನಿಂದ ಹೊಡೆದು, ಜಾತಿ ನಿಂದನೆ ಮಾಡಿ ನಿಂದಿಸಿದ್ದಾನೆ ಎಂದು ವರದಿಯಾಗಿದೆ. ಇದರ ವಿಡಿಯೊ ವೈರಲ್ ಆಗಿದೆ.


ಲಖನೌ: ದಲಿತ ಎಂಜಿನಿಯರ್ (Dalit Engineer) ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಬಲ್ಲಿಯಾದಲ್ಲಿರುವ ವಿದ್ಯುತ್ ಇಲಾಖೆಯ ಕಚೇರಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ಕಚೇರಿಯ ಕ್ಯಾಬಿನ್ ಒಳಗೆ ಹಲ್ಲೆ ನಡೆಸಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ(Viral Video). ಎಂಜಿನಿಯರ್ ತಲೆಗೆ ಶೂನಿಂದ ಹೊಡೆದು, ಜಾತಿ ನಿಂದನೆ ಮಾಡಿ ನಿಂದಿಸಿದ್ದಾನೆ ಎಂದು ವರದಿಯಾಗಿದೆ.
ಎಂಜಿನಿಯರ್ ದೂರಿನ ಪ್ರಕಾರ, ಬಿಜೆಪಿಯ ಮಾಜಿ ಮಂಡಲ ಅಧ್ಯಕ್ಷ ಮುನ್ನಾ ಬಹದ್ದೂರ್ ಸಿಂಗ್ ನೇತೃತ್ವದಲ್ಲಿ ಸುಮಾರು 20 ರಿಂದ 25 ಜನರು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅವರ ಕಚೇರಿಗೆ ನುಗ್ಗಿ ಹಲ್ಲೆ ನಡೆಸಲು ಪ್ರಾರಂಭಿಸಿದರು. ಮುನ್ನಾ ಬಹದ್ದೂರ್ ಸಿಂಗ್, ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಾ ಕೋಪದಿಂದ ಕೂಗಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಸಿಂಗ್ ಶೂ ಹಿಡಿದು ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಹಲ್ಲೆ ನಡೆಸುವುದನ್ನು ನಿಲ್ಲಿಸಿದರು. ಕಚೇರಿಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲವಾಗಿದ್ದರಿಂದ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಮತ್ತೊಬ್ಬ ಸಿಬ್ಬಂದಿ ರೆಕಾರ್ಡ್ ಮಾಡಿದ್ದಾರೆ ಎಂದು ಎಂಜಿನಿಯರ್ ಹೇಳಿದರು. ಘಟನೆಯ ನಂತರ, ಎಂಜಿನಿಯರ್ ವೈದ್ಯಕೀಯ ತಪಾಸಣೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
ವಿಡಿಯೊ ವೀಕ್ಷಿಸಿ:
In UP's Ballia, a BJP leader identified as Munna Bahadur Singh attacked with slipper Lal Singh, a Dalit and power department engineer in his office. pic.twitter.com/3Q5b0nUkir
— Piyush Rai (@Benarasiyaa) August 23, 2025
ಹತ್ತಿರದ ಹಳ್ಳಿಗಳಲ್ಲಿನ ವಿದ್ಯುತ್ ಕಡಿತದ ಬಗ್ಗೆ ದೂರು ನೀಡಲು 10 ರಿಂದ 12 ಬಿಜೆಪಿ ಕಾರ್ಯಕರ್ತರೊಂದಿಗೆ ಕಚೇರಿಗೆ ಹೋಗಿದ್ದಾಗಿ ಮುನ್ನಾ ಬಹದ್ದೂರ್ ಸಿಂಗ್ ಹೇಳಿದ್ದಾರೆ. ಇವರ ಕುಂದುಕೊರತೆಗಳನ್ನು ಎಂಜಿನಿಯರ್ ಕಿವಿಗೆ ಹಾಕಿಕೊಳ್ಳಲಿಲ್ಲ. ಇದು ವಾಗ್ವಾದವುಂಟಾಯಿತು. ಎಂಜಿನಿಯರ್ ನಮ್ಮನ್ನು ನಿಂದಿಸಿದ್ದಾರೆ. ಅವರ ಸಹೋದ್ಯೋಗಿಗಳು ನಮ್ಮ ಕೊರಳಪಟ್ಟಿ ಹಿಡಿದು ಥಳಿಸಿದರು. ಅವರು ನಮ್ಮ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದರು ಎಂದು ಸಿಂಗ್ ಆರೋಪಿಸಿದ್ದಾರೆ. ಆದರೆ, ಸಿಂಗ್ ಅವರ ಆರೋಪಗಳನ್ನು ಎಂಜಿನಿಯರ್ ನಿರಾಕರಿಸಿದರು.
ಇನ್ನು ಎಂಜಿನಿಯರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಲ್ಲಿಯಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕೃಪಾ ಶಂಕರ್ ದೃಢಪಡಿಸಿದ್ದಾರೆ. ಪೊಲೀಸರು ಕಾನೂನು ಕ್ರಮಗಳನ್ನು ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಲು ತಂಡಗಳನ್ನು ನಿಯೋಜಿಸಿದ್ದಾರೆ.
ಇದನ್ನೂ ಓದಿ: Viral Video: ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.! ನಟ ಗೋವಿಂದ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು