ಕನ್ನಡ ಕಿರುತೆರೆ (Kannada Serial) ಲೊಕದಲ್ಲಿ ಹಲವಾರು ಧಾರಾವಾಹಿಗಳು (Kannada Serial) ಪ್ರಸಾರ ಕಾಣುತ್ತಿವೆ. ಒಂದೊಂದು ಸೀರಿಯಲ್‌ನಲ್ಲಿ ಥರೇಹವಾರಿ ಕಥೆಗಳು ಇವೆ. ಆದರೆ ಕೆಲವೊಂದು ಮಾತ್ರ ಜನರ ಮನ ಮುಟ್ಟುತ್ತವೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಚರ್ಚೆಗಳು ಆಗುತ್ತಿವೆ. ಅಂತದ್ದರಲ್ಲಿ, ಈ ಒಂದು ಧಾರಾವಾಹಿಯಲ್ಲಿ ಮಾತ್ರ ಮನೆ ಮಂದಿ ಜೊತೆಗೆ ಕುಳಿತು ನೋಡಬಹುದಾದ ಸೀರಿಯಲ್ ಇದು ಎಂದಿದ್ದಾರೆ ನೆಟ್ಟಿಗರು. ಯಾವುದು ಅದು?
ನಂದಗೋಕುಲ ಧಾರಾವಾಹಿ ಸಖತ್ ಸೌಂಡ್
ಕಲರ್ಸ್ ಕನ್ನಡದ ನಂದಗೋಕುಲ ಧಾರಾವಾಹಿ ಸಖತ್ ಸೌಂಡ್ ಮಾಡುತ್ತಿದೆ. ‘ನಂದಗೋಕುಲ’ ಕನ್ನಡ ಧಾರಾವಾಹಿ ಜನಪ್ರಿಯತೆ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಪ್ರತಿ ವಾರ ಬರುವ ಟಿಆರ್‌ಪಿಯೇ ಸಾಕ್ಷಿ. ಚಂದದ ಕೌಟಂಬಿಕ ಧಾರಾವಾಹಿಯಾಗಿದ್ದು, ಕರ್ನಾಟಕದ ಮನೆ ಮಾತಾಗಿದೆ. ಈ ಧಾರಾವಾಹಿ ನಿರ್ದೇಶನ ಮಾಡುತ್ತಿರುವ ನಿರ್ದೇಶಕರು ಶ್ರವಂತ್ ರಾಧಿಕಾ. ಧಾರಾವಾಹಿಗೆ ಬಂಡವಾಳ ಹಾಕಿರೋದು 'ಬಣ್ಣ ಟಾಕೀಸ್' ನಿರ್ಮಾಣ ಸಂಸ್ಥೆ ಒಡತಿ ನಟಿ ಸಿಂಧು ಕಲ್ಯಾಣ್.
ಇದನ್ನೂ ಓದಿ: Bigg boss Kannada 13: ಬಿಗ್ ಬಾಸ್ ಮನೆಯಲ್ಲಿ ಒಬ್ಬರಾಗೋದು ಸುಲಭ ಅಲ್ಲ! ಯಾರು ಈ ಹೇಮಲತಾ ?
ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುವ ಈ ಸೀರಿಯಲ್ ಈ ರೀತಿಯ ಸಂಬಂಧ ಯಾವ ಧಾರಾವಾಹಿಯಲ್ಲೂ ನೋಡಲು ಸಿಗೋದಿಲ್ಲ ಎನ್ನುತ್ತಿದ್ದಾರೆ ಜನ. ಹಿರಿಯ ಸೊಸೆ ಪ್ರಿಯಾ, ತಪ್ಪು ಮೇಲೆ ತಪ್ಪು ಮಾಡುತ್ತಿದ್ರೂ, ಆಕೆಯನ್ನು ಕ್ಷಮಿಸಿ, ಆಕೆಯ ಪರವಾಗಿ ನಿಂತು, ಮಾವನ ಕೈಯಲ್ಲೂ ಭೇಷ್ ಅನಿಸುವಂತೆ ಮಾಡಿದವರು ಅಮ್ಮು ಮತ್ತು ಮೀನಾ.
ಈ ಧಾರಾವಾಹಿಯಲ್ಲಿ ಮಾತ್ರ ಆರೋಗ್ಯಯುತ ಸಂಬಂಧವನ್ನು ತೋರಿಸುವುದು. ಈ ಧಾರಾವಾಹಿಯಲ್ಲಿ ಮಾತ್ರ ಸಂಬಂಧವನ್ನು ಕೂಡಿಸುವ ಕೆಲಸ ನಡೆಯುತ್ತದೆ. ಗಟ್ಟಿಮೇಳ ಧಾರಾವಾಹಿ ಬಳಿಕ, ಕೂಡು ಕುಟುಂಬದ ಸುಂದರ ಕಥೆ ಹೊಂದಿರುವ ಧಾರಾವಾಹಿ ಇದೊಂದೆ ಅಂತ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ಬದಲಾದ ಪ್ರಿಯಾಳನ್ನು ನೋಡಿ ಒಂದಷ್ಟು ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಈಗ ಧಾರಾವಾಹಿಗೆ ನಂದಗೋಕುಲ ಎಂದು ಹೆಸರಿಟ್ಟದ್ದಕ್ಕೂ ಸಾರ್ಥಕ ಆಯ್ತು ಎಂದಿದ್ದಾರೆ. ನಂದಗೋಕುಲ' ಧಾರಾವಾಹಿ ಕಿರುತೆರೆಯ ವಲಯದಲ್ಲಿ ವಿಭಿನ್ನ ಕಥಾ ಹಂದರ ಹೊಂದಿರುವ ಹೊಸ ರೀತಿಯ ಕತೆ, ಮನೆ - ಮನಸ್ಸುಗಳನ್ನ ತಾಕಿರುವ ಪ್ರತಿಯೊಬ್ಬ ಅಪ್ಪನ ಕತೆ.
ಇದನ್ನೂ ಓದಿ: Pavithra Bandhana: ಪವಿತ್ರ ಬಂಧನಕ್ಕೆ ಹೊಸ ಸಮಯ! ಕಂಪ್ಲೀಟ್ ಮಾಹಿತಿ ಇಲ್ಲಿದೆ
ವಿಶೇಷವಾದ ಮನ ಮುಟ್ಟುವ ಪಾತ್ರಗಳಿಗೆ ಹೆಸರಾದ ಈ ಧಾರಾವಾಹಿ. 'ನಂದಗೋಕುಲ' ಧಾರಾವಾಹಿಯಲ್ಲಿ ಅಭಿ ದಾಸ್, ಅರವಿಂದ್, ವಿಜಯ್ ಚಂದ್ರ, ಯಶವಂತ್, ಅಮೃತಾ ನಾಯ್ಡು, ಮೇಘಾ ಮುಂತಾದವರು ಅಭಿನಯಿಸುತ್ತಿದ್ದಾರೆ.