ಮಾಜಿ ʻಬಿಗ್ ಬಾಸ್ʼ ಸ್ಪರ್ಧಿಗಳಾದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) 2024ರಲ್ಲಿ ಡಿವೋರ್ಸ್ ಪಡೆದರು. ಅಂದಹಾಗೆ, ಇವತ್ತಿನವರೆಗೂ ಇವರ ಡಿವೋರ್ಸ್ ವಿಷ್ಯ ಚರ್ಚೆಯಲ್ಲಿದೆ. ಚಂದನ್ ಶೆಟ್ಟಿ, ಸಿನಿಮಾಗಳಲ್ಲಿ, ರ್ಯಾಪ್ ಸಾಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಡಿವೋರ್ಸ್ ನಂತರ ನಿವೇದಿತಾ ಗೌಡ ಅವರನ್ನೇ ಗುರಿಯಾಗಿಸಿಕೊಂಡು ಹೆಚ್ಚು ಟೀಕೆಗಳು ಕೇಳಿಬರುತ್ತಿವೆ. ಈ ಕುರಿತು ''ರಾಜೇಶ್ ಗೌಡ'' ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ ಗೌಡ, ಯಾರು ಡಿವೋರ್ಸ್ ಪಡೆಯಬೇಕು ಎನ್ನುವ ಉದ್ದೇಶದಿಂದ ಮದುವೆಯಾಗಲ್ಲ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಕೂಡ ಮುಖ್ಯ ಕಾರಣ!
ನಿವೇದಿತಾ ಗೌಡ ಮಾತನಾಡಿ, ಯಾರೂ ಡಿವೋರ್ಸ್ ಆಗಬೇಕು ಅಂತ ಮದುವೆ ಆಗಲ್ಲ. ನಮ್ಮಲ್ಲಿ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ ಅನ್ಸತ್ತೆ. ಅದಕ್ಕೆ ಸೋಷಿಯಲ್ ಮೀಡಿಯಾ ಕೂಡ ಮುಖ್ಯ ಕಾರಣ ಇರಬಹುದು. ಫ್ರೆಂಡ್ಸ್ ಆಗೇ ಇದ್ದು ಬಿಡಬೇಕಿತ್ತು ಅನ್ಸತ್ತೆ. ನಾವು ಎಲ್ಲೇ ಹೋದರು ನೀವು ಮದುವೆ ಆಗಿದ್ರೆ ಚೆನ್ನಾಗಿರ್ತಿತ್ತು ಅನ್ನೋ ಮಾತು ಬರ್ತಾ ಇತ್ತು. ಆಗ ನಮ್ಮಿಬ್ಬರಲ್ಲೂ ಆ ಫೀಲಂಗ್ಸ್ ಬರೋಕೆ ಶುರು ಆಯ್ತು. ಆದರೆ, ನಾವು ಯಾವತ್ತೂ ಜೊತೆಯಾಗಿ ಸಮಯ ಕಳೆದಿರಲಿಲ್ಲ, ಎಲ್ಲೋ ಒಂದು ಕಡೆ ಇದರಿಂದ ಹಿನ್ನೆಡೆಯಾಯ್ತು ಅಂತ ಅನ್ಸುತ್ತೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Amruthadhaare Serial: ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?
ಗಾಸಿಪ್ ತುಂಬಾ ಮಿತಿ ಮೀರಿತ್ತು
ʻನಾವು ಪ್ರೆಸ್‌ಮೀಟ್ ಮಾಡಿದ್ವಿ. ವಿಚ್ಚೇದನದ ವಿಚಾರ ತುಂಬಾನೇ ವೈಯಕ್ತಿಕವಾದದ್ದು ಎಂದು ಹೇಳಿದ್ದಾರೆ. ನಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎನ್ನುವುದಕ್ಕೆ ಉತ್ತರ ನಾನು ಯಾರಿಗೂ ಕೊಡಬೇಕಿರಲಿಲ್ಲ. ಆದರೆ ಎಲ್ಲ ಈ ಬಗ್ಗೆ ಗಾಸಿಪ್ ತುಂಬಾ ಮಿತಿ ಮೀರಿತ್ತು. ಸಿಕ್ಕಿದವರೆಲ್ಲ ಕಮೆಂಟ್ ಮಾಡಲು ಶುರು ಮಾಡಿದರು. ಆದ್ರೆ ಯಾರು ಯಾರೂ ಬೇಡದೇ ವಿಚಾರಗಳ ಬಗ್ಗೆ ಮಾತನಾಡಲು ಶುರು ಮಾಡಿದರು. ಈ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಬೇಕೆಂಬ ಉದ್ದೇಶದಿಂದ ನಾವು ಮಾಧ್ಯಮದವರ ಮುಂದೆ ಬಂದು ಮಾತನಾಡಬೇಕೆಂದು ತೀರ್ಮಾನ ಮಾಡಿದೆವುʼ ಎಂದು ಹೇಳಿದ್ಧಾರೆ.
ನಾನು ಎಲ್ಲರ ವೈಯಕ್ತಿಕ ಸ್ಪೇಸ್ ನಾನು ಗೌರವ ಕೊಡುತ್ತೇನೆ. ಈಗ ನಾನು ನನ್ನ ಜೀವನದ ಬಗ್ಗೆ ಗಮನ ಕೊಡುತ್ತಿದ್ದೇನೆ. ಇನ್ನು ನನ್ನ ಬಗ್ಗೆ ಬೇರೆಯವರು ಅಂದುಕೊಳ್ಳೋದು ನನಗೆ ಮ್ಯಾಟರ್ ಕೂಡ ಆಗುವುದಿಲ್ಲ ಎಂದಿದ್ದಾರೆ.
ಎರಡನೇ ಮದುವೆ ಬಗ್ಗೆ ಬಾಯ್ಬಿಟ್ಟಿದ್ದ ಚಂದನ್ ಶೆಟ್ಟಿ!
ಇದಕ್ಕೂ ಮುಂಚೆ ಮಾಧ್ಯಮವೊಂದರ ಸಂದರ್ಶನದಲ್ಲಿ ಇತ್ತೀಚೆಗೆ ಚಂದನ್ ಶೆಟ್ಟಿ ಕೂಡ ಮಾತನಾಡಿದ್ದರು. ಚಂದನ್ ಶೆಟ್ಟಿ ಮಾತನಾಡಿ, ʻಜೀವನದಲ್ಲಿ ಮದುವೆ ಅನ್ನೋದು ತುಂಬಾ ಮುಖ್ಯ. ಪ್ರತಿಯೊಬ್ಬರ ಜೀವನದಲ್ಲಿ ಪಾರ್ಟನರ್ ಅನ್ನೋದು ಮುಖ್ಯ. ನನಗೂ ಈವಾಗಲೂ ಅನುಭವ ಆಗ್ತಾಲೇ ಇದೆ. ಈಗ ಓಕೆ. ಆದರೆ ವಯಸ್ಸಾದ ಮೇಲೆ ಒಂಟಿತನ ಕಾಡೋಕೆ ಶುರು ಆಗುತ್ತೆ. ತಪ್ಪು ಮಾಡಿದೆ ಅಂತ. ಬಾಳ ಸಂಗಾತಿ ಹುಡುಕಬೇಕು. ನಿರೀಕ್ಷೆ ಇಲ್ಲ.
ಇದನ್ನೂ ಓದಿ: Annayya Serial: ತಂಗಿ ಜೀವನದ ಜೊತೆ ಆಟ ಆಡಿದ ಸೀನನನ್ನು ಸುಮ್ನೆ ಬಿಡೋನಲ್ಲ ಶಿವಣ್ಣ!
ಅದೆಲ್ಲ ಹೇಳಬಾರದು. ಅದೆಲ್ಲ ಪರೀಕ್ಷೆ. ಪ್ರತಿಯೊಂದು ರಿಲೇಶನ್‌ಶಿಪ್‌ನಲ್ಲೂ. ಆ ಪರೀಕ್ಷೆಯಲ್ಲಿ ನೀವು ಯಾವ ರೀತಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೀರಾ ಎನ್ನುವುದರ ಮೇಲೆ ಮುಂದಿನ ಜೀವನ ನಡೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಈ ಬಾರಿ ಸ್ವಲ್ಪ ಟೈಮ್ ತಗೊಂಡು, ಯೋಚನೆ ಮಾಡಿ, ನೋಡಿ ಆಮೇಲೆ ನಿರ್ಧಾರ ಮಾಡುವುದಾಗಿʼ ಹೇಳಿದ್ದರು.