ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಆಡಿಯೋ ಮೆಸೇಜ್ನಲ್ಲಿ ಸಲ್ಮಾನ್ ಖಾನ್ ಹೆಸರು ಉಲ್ಲೇಖಿಸಿದ ಬಿಷ್ಣೋಯ್ ಗ್ಯಾಂಗ್
Tiger Shroff Assassination Attempt: ಮುಂಬೈಯ ಜುಹು ಪ್ರದೇಶದಲ್ಲಿ ಭಾನುವಾರ (ಅಕ್ಟೋಬರ್ 18) ಬಾಲಿವುಡ್ ನಟ ಟೈಗರ್ ಶ್ರಾಫ್ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆದಿದ್ದು, ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಹಿಸಿಕೊಂಡಿದೆ. ಸಲ್ಮಾನ್ ಖಾನ್ ಸಹವಾಸ ಮಾಡಿದ್ದಕ್ಕೆ ಈ ಶಿಕ್ಷೆ ಎಂದು ಗ್ಯಾಂಗ್ ಹೇಳಿದೆ.
ಟೈಗರ್ ಶ್ರಾಫ್ ಮತ್ತು ಸಲ್ಮಾನ್ ಖಾನ್ (ಸಂಗ್ರಹ ಚಿತ್ರ) -
ಮುಂಬೈ, ಅ. 18: ಬಹುದೊಡ್ಡ ಅಪಾಯದಿಂದ ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂಬೈಯ ಜುಹು ಪ್ರದೇಶದಲ್ಲಿ ಭಾನುವಾರ (ಅಕ್ಟೋಬರ್ 18) ಟೈಗರ್ ಶ್ರಾಫ್ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆದಿದೆ. ಅಪರಿಚಿತ ವ್ಯಕ್ತಿಗಳು ಶೂಟ್ ಮಾಡಿದ್ದು, ಟೈಗರ್ ಶ್ರಾಫ್ ಕಾರ್ ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ವಹಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ ಮೆಸೇಜ್ ಹೊರ ಬಿದ್ದಿದೆ. ಅಚ್ಚರಿ ಎಂದರೆ ಇದರಲ್ಲಿ ಮತ್ತೋರ್ವ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರನ್ನು ಪ್ರಸ್ತಾವಿಸಲಾಗಿದೆ. 2 ವರ್ಷಗಳ ಹಿಂದೆ ಸಲ್ಮಾನ್ ಖಾನ್ ಮನೆ ಬಳಿಯೂ ಗುಂಡಿನ ದಾಳಿ ನಡೆದಿತ್ತು.
ಸಲ್ಮಾನ್ ಖಾನ್ ಜತೆ ಸಂಬಂಧ ಹೊಂದಿರ ಪ್ರತಿಯೊಬ್ಬರಿಗೂ ಇದೇ ಗತಿಯಾಗಲಿದೆ ಎಂದು ಆಡಿಯೋದಲ್ಲಿ ಎಚ್ಚರಿಸಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಘಟನೆಗೂ ಬಿಷ್ಣೋಯ್ ಗ್ಯಾಂಗ್ಗೂ ಇರುವ ಸಂಬಂಧದ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಜತೆಗೆ ಹರಿದಾಡುತ್ತಿರುವ ಆಡಿಯೋದ ಸತ್ಯಾಸತ್ಯತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನದ್ದು ಎನ್ನಲಾದ ಆಡಿಯೋ ಮೆಸೇಜ್:
Alleged viral clip of Anil Pandit after the firing on Tiger Shroff. He claims to be from Bishnoi Gang, and says anyone close to Salman Khan will be targeted. https://t.co/AKg6S0cEST
— Singh Varun (@singhvarun) October 18, 2026
ಆಡಿಯೋ ಸಂದೇಶದಲ್ಲಿ ಏನಿದೆ?
ಆಡಿಯೋ ಸಂದೇಶದಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡಿದ್ದಾನೆ. ಸಲ್ಮಾನ್ ಖಾನ್ ಜತೆ ಕೆಲಸ ಮಾಡದಂತೆ ಸಾಕಷ್ಟು ಬಾರಿ ಎಚ್ಚರಿಸಿದರೂ ಶ್ರಾಫ್ ಇದನ್ನು ಗಂಭೀರವಾಗಿ ಪರಿಗಣಿಸದ ಕಾರಣ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. ಜತೆಗೆ ಸಲ್ಮಾನ್ ಖಾನ್ ಜತೆ ಗುರುತಿಸಿಕೊಂಡಿರುವ ಇತರರಿಗೂ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಘಟನೆ ಬಾಲಿವುಡ್ ಕಲಾವಿದರ ಸುರಕ್ಷತೆ ಬಗ್ಗೆ ಕಳವಳ ಮೂಡುವಂತೆ ಮಾಡಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ
ಬೈಕ್ನಲ್ಲಿ ಬಂದ ಮೂವರಿಂದ ಕೃತ್ಯ
ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿ ಬೈಕ್ನಲ್ಲಿ ಆಗಮಿಸಿದ ಮೂವರು ಅಪರಿಚಿತರು ಕಾರ್ನಲ್ಲಿ ತೆರಳುತ್ತಿದ್ದ ಶ್ರಾಫ್ನತ್ತ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಜುಹುವಿನ ಪುಷ್ಪ ಪಾರ್ಕ್ ಬಳಿ ಸಂಜೆ 7 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ಈ ವೇಳೆ ಶ್ರಾಫ್ ಫುಟ್ಬಾಲ್ ಮ್ಯಾಚ್ ಮುಗಿಸಿ ಹಿಂದಿರುಗುತ್ತಿದ್ದರು. ಯಾವುದೇ ಗಾಯಗಳಿಲ್ಲದೆ ಶ್ರಾಫ್ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ. ಆದರೆ ಚಾಲಕ ಸೇರಿ ಅವರ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆಸಿದ ಅಪರಿಚಿತರ ಪತ್ತೆಗೆ ಪೊಲೀಸರು 15 ತಂಡವನ್ನು ರಚಿಸಿದ್ದಾರೆ. ಸಿಸಿಟಿವಿ ಕ್ಯಾಮರಾ ದೃಶ್ಯವನ್ನು ಪರಿಶೀಲಿಸಲಾಗುತ್ತಿದೆ.
ಲಾರೆನ್ಸ್ ಬಿಷ್ಣೋಯ್ ಸಹೋದರನಿಗೆ ಬಿಗ್ ಶಾಕ್; ಅಮೆರಿಕದಿಂದ ಗ್ಯಾಂಗ್ಸ್ಟರ್ ಅನ್ಮೋಲ್ ಗಡಿಪಾರು
ನಟ ಟೈಗರ್ ಶ್ರಾಫ್ ಮೇಲೆ ದಾಳಿ:
#TigerShroff #tiger #Tigershockey #tigerattack #tigershrof #tigershroffnews Actor Tiger Shroff was shot at in Mumbai’s Juhu on Sunday while returning home after playing football, police sources said. He is safe and did not suffer any gunshot injury. Two gangsters linked to the Lawrence Bishnoi gang claimed responsibility for the attack. Mumbai Police said the firing took place around 7 pm near Pushpa Park. Three rounds were fired at his BMW, sources told India Today. According to sources, three men arrived on a motorcycle. One fired multiple rounds, while a second appeared to attempt to fire. The third waited on the motorcycle before all three fled. Shroff, seated on the side facing the shooters, moved towards the driver’s seat during the firing. His driver has been admitted to Nanavati Hospital. Police have cordoned off the area for investigation. Jackie Shroff’s team also confirmed that his son was safe. “Tiger is okay,” the team said. Iam again saying Yogi ji is the only solution to these gangster @myogiadityanath @myogioffice
— Amit Bhardwaj (@AmmyBhardwaj) October 18, 2026
ಸಲ್ಮಾನ್ ಖಾನ್ ಮೇಲೆ ಯಾಕಿಷ್ಟು ದ್ವೇಷ?
ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವಿನ ಶತ್ರುತ್ವ ಇಂದು ನಿನ್ನೆಯದಲ್ಲ. ಸದ್ಯ ಗುಜರಾತ್ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹಲವು ಬಾರಿ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ್ದ. 1998ರಲ್ಲಿ ಸಲ್ಮಾನ್ ಖಾನ್ ರಾಜಸ್ಥಾನದಲ್ಲಿ ಬಿಷ್ಣೋಯ್ಗಳ ಪವಿತ್ರ ಕೃಷ್ಣಮೃಗವನ್ನು ಬೇಟೆಯಾಡಿದ್ದರಿಂದ ಈ ವೈರತ್ವ ಹುಟ್ಟಿಕೊಂಡಿದೆ. ಸಲ್ಮಾನ್ ಖಾನ್ ಅವರೊಂದಿಗಿನ ಒಡನಾಟದ ಕಾರಣದಿಂದಲೇ ಶ್ರಾಫ್ ಅವರನ್ನು ಗುರಿಯಾಗಿಸಲಾಗಿದೆಯಾ ಎನ್ನುವ ಬಗ್ಗೆಯೂ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.