ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ (T N Seetharam) ಅವರು ಕಳೆದ ವರ್ಷ ಹಠಾತ್ತನೆ ತಮ್ಮ ಧಾರಾವಾಹಿ 'ಮಗಳು ಜಾನಕಿ'ಯನ್ನು ನಿಲ್ಲಿಸಿ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದ್ದರು. ಆ ಬಗ್ಗೆ ಕ್ಷಮೆಯನ್ನು ಯಾಚಿಸಿದ್ದರು. ಖ್ಯಾತ ನಿರ್ದೇಶಕ ಹಾಗೂ ನಟ ಟಿ.ಎನ್. ಸೀತಾರಾಮ್ ತಮ್ಮ ಜನಪ್ರಿಯ 'ಸಿಎಸ್‌ಪಿ' (CSP) ಪಾತ್ರದೊಂದಿಗೆ 'ಮುಂದಿನ ಅಧ್ಯಾಯ' ಎಂಬ ಹೊಸ ವೆಬ್ ಸರಣಿಯ ಮೂಲಕ ಯೂಟ್ಯೂಬ್‌ಗೆ ಕಾಲಿಡುತ್ತಿದ್ದಾರೆ.
ಒಂದು ಸಂಪೂರ್ಣ ಸೀಸನ್ ಮುಗಿದ ಮೇಲೆ ಎಲ್ಲಾ ಎಪಿಸೋಡ್ ಗಳನ್ನು ಒಟ್ಟಿಗೆ ಕೂಡ ನೋಡಬಹುದು. ಸ್ವಲ್ಪ ಸಮಯದ ನಂತರ ಮತ್ತೊಂದು ಸೀಸನ್ ಪ್ರಸಾರ ಮಾಡುವ ಯೋಜನೆ ರೂಪಿಸಲಾಗಿದೆ. ಒಂದು ಸೀಸನ್‌ನಿಂದ ಮತ್ತೊಂದು ಸೀಸನ್‌ಗೆ ಕಥೆ ಒಂದೇ ರೀತಿಯಾಗಿರುತ್ತದೆ, ಹೆಚ್ಚು ಬದಲಾವಣೆ ಇರುವುದಿಲ್ಲ. ಇದರ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿದ್ದು, ಕಥಾ ವಸ್ತುಗಳು ಸ್ವಲ್ಪ ಬದಲಾಗುತ್ತವೆ ಆದರೆ ಮಂಡ್ಯ ರವಿ ನಿಧನದಿಂದಾಗಿ ಅವರು ಮಾಡಬೇಕಿದ್ದಭಾರ್ಗಿ ಪಾತ್ರದಲ್ಲಿ ಈಗ ಹನುಮಂತೇ ಗೌಡ ಕಾಣಿಕೊಳ್ಳಲಿದ್ದಾರೆ.
ಈ ವೆಬ್ ಸರಣಿಗೆ ನಿರ್ದೇಶನವನ್ನು ಚಂದನ್ ಶಂಕರ್ ಮಾಡುತ್ತಿದ್ದು, ಟಿ.ಎನ್. ಸೀತಾರಾಮ್ ಅವರೇ ಪ್ರಧಾನ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸೀತಾರಾಮ್ ಅವರು ಸಿಎಸ್‌ಪಿ ಪಾತ್ರದ ಜೊತೆಗೆ ಹಲವು ಹೊಸ ಹಾಗೂ ಹಳೆಯ ಪಾತ್ರಗಳನ್ನು ಜೋಡಿಸಿಕೊಂಡು ಈ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಇದು ಯೂಟ್ಯೂಬ್ನಲ್ಲಿ ಉಚಿತವಾಗಿ ಸಿಗಲಿದೆ.
ಇದನ್ನೂ ಓದಿ: Nivin Pauly: ಮಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್
ಮಾಯಾಮೃಗ', 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ', 'ಮಗಳು ಜಾನಕಿ'.. ಸೇರಿದಂತೆ ಕನ್ನಡ ಕಿರುತೆರೆಗೆ ಹಲವಾರು ಸೂಪರ್ ಡ್ಯೂಪರ್ ಹಿಟ್ ಧಾರಾವಾಹಿಗಳನ್ನು ಕೊಟ್ಟ ಖ್ಯಾತಿ ಟಿ ಎನ್ ಸೀತಾರಾಮ್ ಅವರಿಗೆ ಸಲ್ಲಬೇಕು. ತಮ್ಮ ಬಹುತೇಕ ಧಾರಾವಾಹಿಗಳಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಯಾಮೃಗ ಡಿವಿಡಿ ರೂಪದಲ್ಲಿ ಹೊರಬಂದರೆ, ಮುಕ್ತ ಮುಂತಾದ ಧಾರಾವಾಹಿಗಳಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂವಾದವನ್ನು ಏರ್ಪಡಿಸುತ್ತಿದ್ದರು.
ಮತದಾನ, ಮೀರಾ ಮಾಧವ ರಾಘವ, ಕಾಫಿ ತೋಟ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಬಹುತೇಕ ಸೀರಿಯಲ್ ಗಳು ಮಹಿಳಾ ಪ್ರಧಾನವಾಗಿವೆ. ಇದಕ್ಕೆ ನಿಧನರಾದ ತಮ್ಮ ಸಹೋದರಿ ಪದ್ಮಾ ಸ್ಫೂರ್ತಿಯೆಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ: Shakeel Noorani: ಖ್ಯಾತ ಸಿನಿಮಾ ಡೈರೆಕ್ಟರ್ ಅರೆಸ್ಟ್
2006 ರ ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳ ಅಧ್ಯಕ್ಷರಾಗಿದ್ದರು. ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ತೀರ್ಪುಗಾರರಾಗಿದ್ದರು.