ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ 'ರಾಕಿಂಗ್ ಸ್ಟಾರ್' ಯಶ್ ಅವರ ಸಿನಿ ಪಯಣ, ಬದ್ಧತೆ ಹಾಗೂ ವ್ಯಕ್ತಿತ್ವದ ಕುರಿತು ʻಮಾಸ್ಟರ್‌ಪೀಸ್ʼ ಸಿನಿಮಾ ನಿರ್ದೇಶಕ, ಬರಹಗಾರ ಮಂಜು ಮಾಂಡವ್ಯ ವಿಶ್ವವಾಣಿ ಟಿವಿ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದು, ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. "ಯಶ್ ಅವರ 'ಟಾಕ್ಸಿಕ್' ಸಿನಿಮಾ ಸಂಪೂರ್ಣ ವಿಭಿನ್ನ ಲೆವೆಲ್‌ನಲ್ಲಿರಲಿದ್ದು, ಅವರು ಈಗ ಹಿಟ್-ಫ್ಲಾಪ್ ಲೆಕ್ಕಾಚಾರಗಳನ್ನು ಮೀರಿ ಬೆಳೆದಿದ್ದಾರೆ" ಎಂದು ಮಂಜು ಮಾಂಡವ್ಯ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ 'ಟಾಕ್ಸಿಕ್' ಹವಾ ಗ್ಯಾರಂಟಿ
ಜಾಗತಿಕ ಮಟ್ಟದಲ್ಲಿ ಚಿತ್ರದ ಕಂಟೆಂಟ್ ಜನರಿಗೆ ತಲುಪಿದರೆ ಬರೋಬ್ಬರಿ ₹2000 ಕೋಟಿ ಬಾಕ್ಸ್ ಆಫೀಸ್ ಗಳಿಕೆ ಕಂಡರೂ ಆಶ್ಚರ್ಯವಿಲ್ಲ ಎಂದು ಮಂಜು ಮಾಂಡವ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, 'ರಾಮಾಯಣ' ಚಿತ್ರದ ರಾವಣನ ಪಾತ್ರಕ್ಕೆ ಬೇಕಾದ ಗತ್ತು ಮತ್ತು ಆ್ಯಟಿಟ್ಯೂಡ್ ಯಶ್ ಅವರಲ್ಲಿ ಸಹಜವಾಗಿಯೇ ಇದೆ ಎಂದಿದ್ದಾರೆ.
Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಅಂದು ರಿಂಗ್‌ಟೋನ್, ಇಂದು ಶಾರುಖ್ ಜೊತೆ ಡಿನ್ನರ್
"ನಾವು ʻರಾಜಾಹುಲಿ' ಸಿನಿಮಾದ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಯಶ್ ಮೊಬೈಲ್ ರಿಂಗ್‌ಟೋನ್ ಶಾರುಖ್ ಖಾನ್ ಅವರ 'ಡಾನ್' ಚಿತ್ರದ್ದಾಗಿತ್ತು. ಇಂದು ಅದೇ ಶಾರುಖ್ ಖಾನ್ ಯಶ್ ಅವರನ್ನು ಪ್ರೀತಿಯಿಂದ ಡಿನ್ನರ್‌ಗೆ ಆಹ್ವಾನಿಸುವ ಹಂತಕ್ಕೆ ಯಶ್ ಬೆಳೆದಿದ್ದಾರೆ. ಇದು ಅವರ ಬಲವಾದ ಮ್ಯಾನಿಫೆಸ್ಟೇಷನ್‌ಗೆ ಸಾಕ್ಷಿ. 'ಝೀರೋ' ಚಿತ್ರದ ಎದುರು 'ಕೆಜಿಎಫ್' ಬಂದಾಗಲೂ ಸೀನಿಯರ್ಸ್ ಮೇಲಿನ ಗೌರವವನ್ನು ಯಶ್ ಬಿಟ್ಟುಕೊಟ್ಟಿರಲಿಲ್ಲ" ಎಂದು ಮಂಜು ಮಾಂಡವ್ಯ ಹೇಳಿದ್ದಾರೆ.
'ಮಾಸ್ಟರ್ ಪೀಸ್' ಹುಟ್ಟಿದ ಕಥೆ!
"ಯಶ್ ತಾಯಿಯವರು ನೀಡಿದ್ದ ಒಂದು ಸಂದರ್ಶನದ ಮುಖ್ಯಾಂಶವನ್ನು ಆಧರಿಸಿ, ನೆಗೆಟಿವ್ ಶೇಡ್ ಉಳ್ಳ ಕಥೆಯನ್ನು ರೂಪಿಸಲಾಗಿತ್ತು. ಹಂಸಲೇಖ ಅವರೂ ಮೆಚ್ಚಿದ ಈ ಕಥೆಗೆ ಯಶ್ ಅವರ ಎಫರ್ಟ್ ನೋಡಿಯೇ 'ಮಾಸ್ಟರ್ ಪೀಸ್' ಎಂದು ಹೆಸರಿಡಲಾಗಿತ್ತು. 'ಮಾಸ್ಟರ್ ಪೀಸ್' ಚಿತ್ರೀಕರಣ ಮುಂಬೈ ಗೇಟ್‌ವೇ ಆಫ್ ಇಂಡಿಯಾದಲ್ಲಿ ಮಾಡುವಾಗಲೇ ಹಿಂದಿ ಡಬ್ಬಿಂಗ್ ನೋಡಿ ಜನ ಯಶ್ ಅವರನ್ನ ಗುರುತಿಸುತ್ತಿದ್ದರು. ಯಶ್ ಅವಾಗಲೇ ಹೇಳ್ತಿದ್ರು, 'ಮುಂಬೈಲಿ ತೋರಿಸ್ತೀವಿ, ಇಡೀ ದೇಶಕ್ಕೆ ಕನ್ನಡ ಸಿನಿಮಾ ಎತ್ಕೊಂಡು ಹೋಗ್ಬೇಕು' ಅಂತ. ಆಗಲೇ ಯಶ್ ಅವರಿಗೆ ಕನ್ನಡ ಸಿನಿಮಾವನ್ನು ಇಡೀ ದೇಶಕ್ಕೆ ಕೊಂಡೊಯ್ಯುವ ಸ್ಪಷ್ಟತೆ ಇತ್ತು, ಬಾಕ್ಸ್ ಆಫೀಸ್ ಲೆಕ್ಕಾಚಾರದ ಬಗ್ಗೆ ಅರಿವು ಇತ್ತು" ಎಂದು ಹೊಗಳಿದ್ದಾರೆ ಮಂಜು.
ಪ್ರತಿಭೆಗಳಿಗೆ ಮಣೆ ಹಾಕುವ ರಾಕಿ ಭಾಯ್
"ಹೊಸಬರಿಗೆ ಅವಕಾಶ ಕೊಡುವ ಧೈರ್ಯ ಯಶ್ ಅವರಿಗಿದೆ. ಪ್ರಶಾಂತ್ ನೀಲ್ ಅವರ 'ಉಗ್ರಂ' ನೋಡಿ, 'ಇವರಲ್ಲಿ ಅದ್ಭುತ ಮೇಕಿಂಗ್ ವಿಷನ್ ಇದೆ' ಅಂತ ಗುರುತಿಸಿ ಪ್ರಾಜೆಕ್ಟ್ ಕೊಟ್ಟರು. ಗೀತು ಮೋಹನ್‌ದಾಸ್ ಅವರಿಗೂ ಹಾಗೇ 'ಟಾಕ್ಸಿಕ್' ಜವಾಬ್ದಾರಿ ನೀಡಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಸಿಂಪ್ಲಿಸಿಟಿ ಮರೆತಿಲ್ಲ. ಮೊನ್ನೆ ನನ್ನ ಕಸಿನ್ ಬರ್ತ್‌ಡೇಗೆ ರಾತ್ರಿ 12 ಗಂಟೆಗೆ ಡಬ್ಬಿಂಗ್ ಮುಗಿಸಿ ವಿಡಿಯೋ ಕಾಲ್ ಮಾಡಿ ವಿಶ್ ಮಾಡಿದ್ರು. ಆ ಡೌನ್ ಟು ಅರ್ಥ್ ನೇಚರ್ ಹಾಗೇ ಇದೆ" ಎಂದು ಕೊಂಡಾಡುತ್ತಾರೆ ಯಶ್.
ಹಂಸಲೇಖ ಯಶ್ ಬಗ್ಗೆ ಅವತ್ತೇ ಆ ಒಂದು ಮಾತು ಹೇಳಿದ್ರು
"ಇವತ್ತು ಯಶ್ ಅವರು ಹಿಟ್-ಫ್ಲಾಪ್ ಮೀರಿ ನಿಂತಿದ್ದಾರೆ. ಟಾಕ್ಸಿಕ್ ಕಂಟೆಂಟ್ ಚೆನ್ನಾಗಿದ್ರೆ ವರ್ಲ್ಡ್ ವೈಡ್ 2000 ಕೋಟಿ ರೂ. ದಾಟಿದ್ರೂ ಆಶ್ಚರ್ಯವಿಲ್ಲ. 'ಆಸೆ ಬಿಟ್ಟ ಬುದ್ಧ ಜಗತ್ತನ್ನೇ ಗೆದ್ದ, ಜಗತ್ತನ್ನೇ ಗೆಲ್ಲುವ ಆಸೆ ನಂದಮ್ಮ' ಅಂತ ನಾನು ಸಾಂಗ್ ಬರೆದಿದ್ದೆ. ಇವತ್ತು ಯಶ್ ಜಗತ್ತನ್ನೇ ಗೆಲ್ಲೋಕೆ ಹೊರಟಿದ್ದಾರೆ, ಗೆಲ್ಲಲಿ" ಎಂದು ಹಾರೈಸಿದ್ದಾರೆ ಯಶ್.