ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: 'ಕಾಂತಾರ ಚಾಪ್ಟರ್‌ 1' ಚಿತ್ರದ ಬಿಡುಗಡೆಗೆ ದಿನಗಣನೆ; ರಿಷಬ್‌ ಶೆಟ್ಟಿ ಜತೆಗೆ ಪ್ರಭಾಸ್‌ ಎಂಟ್ರಿ: ಫ್ಯಾನ್ಸ್‌ಗೆ ಡಬಲ್‌ ಧಮಾಕ

The Raja Saab: ಪ್ರಭಾಸ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೆಲುಗಿನ ʼದಿ ರಾಜಾ ಸಾಬ್‌ʼ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಅಕ್ಟೋಬರ್‌ 2ರಂದು ತೆರೆಗೆ ಬರುತ್ತಿರುವ ʼಕಾಂತಾರ: ಚಾಪ್ಟರ್‌ 1' ಚಿತ್ರದೊಂದಿಗೆ ʼದಿ ರಾಜಾ ಸಾಬ್‌ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಲಿದೆ.

ಬೆಂಗಳೂರು: ಜಾಗತಿಕ ಸಿನಿಪ್ರೇಮಿಗಳ ಗಮನ ಸೆಳೆದಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1ʼ (Kantara: Chapter 1) ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಚಿತ್ರತಂಡ ಕೊನೆಯ ಹಂತದ ಸಿದ್ಧತೆಯಲ್ಲಿ ತೊಡಗಿದೆ. ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರ ಪೋಸ್ಟರ್‌ ಈಗಾಗಲೇ ಗಮನ ಸೆಳೆದಿದ್ದು, ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದೆ. 2022ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿದ್ದ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಕಾರಣಕ್ಕೆ ಸೆಟ್ಟೇರಿದಾಗಿನಿಂದಲೇ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರತಂಡ ಇದೀಗ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ತೆಲುಗಿನ ಬಹುನಿರೀಕ್ಷಿತ, ಪ್ರಭಾಸ್‌ (Prabhas) ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಟ್ರೈಲರ್ ʼಕಾಂತಾರ: ಚಾಪ್ಟರ್‌ 1ʼರೊಂದಿಗೆ ರಿಲೀಸ್‌ ಆಗಲಿದೆ.

ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ದಿ ರಾಜಾ ಸಾಬ್’ ಈಗಾಗಲೇ ಕುತೂಹಲ ಮೂಡಿಸಿದೆ. ಹಲವು ವರ್ಷಗಳ ಬಳಿಕ ಫನ್ನಿ ಕ್ಯಾರೆಕ್ಟರ್‌ನಲ್ಲಿ ಪ್ರಭಾಸ್‌ ನಟಿಸುತ್ತಿದ್ದು, ಈಗಾಗಲೇ ರಿಲೀಸ್‌ ಆಗಿರುವ ಪೋಸ್ಟರ್‌ ಮತ್ತು ಟೀಸರ್‌ ಸದ್ದು ಮಾಡುತ್ತಿದೆ. ಮಾರುತಿ ದಾಸರಿ ನಿರ್ದೇಶನದ ಈ ಚಿತ್ರ ಈ ವರ್ಷದ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಅದಾದ ಬಳಿಕ ರಿಲೀಸ್‌ ಡೇಟ್‌ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಯ್ತು. ಈ ವಿಚಾರದಲ್ಲಿ ಬೇಸರಗೊಂಡಿದ್ದ ಪ್ರಭಾಸ್‌ ಫ್ಯಾನ್ಸ್‌ಗೆ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ಜತೆಗೆ ಟ್ರೈಲರ್‌ ಗಿಫ್ಟ್‌ ಸಿಗಲಿದೆ.



ಈ ಸುದ್ದಿಯನ್ನೂ ಓದಿ: Kantara: Chapter 1 Movie: 'ಕಾಂತಾರ ಚಾಪ್ಟರ್ 1' ಸಿನಿಮಾಕ್ಕಾಗಿ ಹಾಡಲಿದ್ದಾರೆ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಇಂಟರ್ವೆಲ್​​ನಲ್ಲಿ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಟ್ರೈಲರ್ ಪ್ರದರ್ಶಿಸಲಾಗುತ್ತದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರವಾ ಅಥವಾ ಸಿನಿಮಾ ಎಲ್ಲೆಲ್ಲಿ ಬಿಡುಗಡೆ ಆಗುತ್ತದೆಯೋ ಅಲ್ಲೆಲ್ಲ ಟ್ರೈಲರ್ ಪ್ರದರ್ಶನ ಮಾಡಲಾಗುತ್ತದೆಯೋ ಎಂಬ ಬಗ್ಗೆ ಖಾತ್ರಿ ಇಲ್ಲ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ.

ಹಾರರ್‌, ಕಾಮಿಡಿ, ಆ್ಯಕ್ಷನ್‌ ಚಿತ್ರ ‘ದಿ ರಾಜಾ ಸಾಬ್’ನಲ್ಲಿ ನಿಧಿ ಅಗರ್ವಾಲ್‌, ಸಂಜಯ್‌ ದತ್‌, ಮಾಳವಿಕಾ ಮೋಹನನ್‌, ಬ್ರಹ್ಮಾನಂದಮ್‌, ರಿದ್ಧಿ ಕಪೂರ್‌, ಯೋಗಿ ಬಾಬು, ಅನುಪಮ್‌ ಖೇರ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

'ಕಾಂತಾರ: ಚಾಪ್ಟರ್‌ 1' ಚಿತ್ರದ ಒಟಿಟಿ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ

ರಿಲೀಸ್‌ಗೂ ಮೊದಲೇ ʼಕಾಂತಾರ: ಚಾಪ್ಟರ್ 1’ ಸಿನಿಮಾ ದಾಖಲೆ ನಿರ್ಮಿಸಿದೆ. ಒಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಬರೋಬ್ಬರಿ 125 ಕೋಟಿ ರೂ.ಗೆ ಖರೀದಿಸಿದೆ. ಹೀಗಾಗಿ ಬಜೆಟ್‌ನಷ್ಟು ಮೊತ್ತ ರಿಲೀಸ್‌ಗೆ ಮೊದಲೇ ಚಿತ್ರತಂಡ ಕೈ ಸೇರಿದೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಈ ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದಾರೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನದ ಈ ಚಿತ್ರದ ಹಾಡಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತದ ಮೂಲಕ ಸಂಚಲನ ಸೃಷ್ಟಿಸಿದ ಪಂಜಾಬ್‌ ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ನೀಡುತ್ತಿರುವುದು ವಿಶೇಷ.