ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Trisha Krishnan: ದಳಪತಿ ವಿಜಯ್ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

Trisha Krishnan: ನಟ ವಿಜಯ್ ಮತ್ತು ತ್ರಿಶಾ ನಡುವೆ ಆಪ್ತ ಗೆಳತನವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಇದೆ. ‘ಕರುಪ್ಪುದಚಿತ್ರದ ಮೊದಲ ಪ್ರದರ್ಶನ ಇತ್ತು. ಈ ವೇಳೆ ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ಅಷ್ಟೇ ಅಲ್ಲ ವಿಜಯ್‌ ಹೆಸರನ್ನು ಕೂಗಿದ್ದಾರೆ. ಆಗ ನಟಿ ನಾಚಿ ನೀರಾಗಿದ್ದಾರೆ.

ತ್ರಿಶಾ ಕೃಷ್ಣನ್

ಚೆನ್ನೈನಲ್ಲಿ ನಡೆದ ಒಂದು ವೈರಲ್ ವಿಡಿಯೋ ಈಗ ಸಖತ್‌ ಸೌಂಡ್‌ ಮಾಡ್ತಿದೆ. ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರನ್ನು ಮತ್ತೊಮ್ಮೆ ಗಮನ ಸೆಳೆಯುವಂತೆ ಮಾಡಿದೆ. ನಟ ವಿಜಯ್ (Thalapathy Vijay) ಮತ್ತು ತ್ರಿಶಾ ನಡುವೆ ಆಪ್ತ ಗೆಳತನವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ (Kollywood) ಇದೆ. ‘ಕರುಪ್ಪುದಚಿತ್ರದ ಮೊದಲ ಪ್ರದರ್ಶನ ಇತ್ತು. ಈ ವೇಳೆ ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ಅಷ್ಟೇ ಅಲ್ಲ ವಿಜಯ್‌ ಹೆಸರನ್ನು ಕೂಗಿದ್ದಾರೆ. ಆಗ ನಟಿ ನಾಚಿ ನೀರಾಗಿದ್ದಾರೆ.

ನಾಚಿ ನೀರಾದ ತ್ರಿಶಾ

ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ತ್ರಿಶಾ ಅವರು ತಮ್ಮ ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದಂತೆಯೇ ಫೋಟೋ ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು ಮುಗಿಬಿದ್ದರು.

ಇದನ್ನೂ ಓದಿ: Shefali Shah: ಮಕ್ಕಳ ಬದಲು ನಾಯಿಗಳನ್ನು ಸಾಕಿ ಎಂದ ಖ್ಯಾತ ನಟಿ ಶೆಫಾಲಿ ಶಾ ; ಕಾರಣ ಇದು

ಈ ವೇಳೆ ಕಾರಿನ ಬಳಿ ಬಂದ ಅಭಿಮಾನಿಯೊಬ್ಬರು, ‘ದಳಪತಿಯನ್ನು ಕೇಳಿದೆ ಅಂತ ಹೇಳಿ’ ಎಂದು ನಗುತ್ತಾ ಹೇಳಿದರು. ಇದನ್ನು ಕೇಳಿದ ತಕ್ಷಣ ತ್ರಿಶಾ ಮುಖದಲ್ಲಿ ನಾಚಿಕೆ ಕಾಣುತ್ತಿತ್ತು. ‘ಖಂಡಿತವಾಗಿ’ ಎಂದು ಉತ್ತರಿಸಿ, ನಾಚಿಕೆಯಿಂದ ತಲೆ ತಗ್ಗಿಸಿದರು. ಕಾರಿನಲ್ಲಿ ಕುಳಿತು ಯಾರಿಗೋ ಮೆಸೇಜ್ ಕಳುಹಿಸುತ್ತಾ ಅವರು ನಿರಂತರವಾಗಿ ಮುಗುಳ್ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮೇ 10ರಂದು ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಭವ್ಯ ಸಮಾರಂಭದಲ್ಲಿ ತ್ರಿಶಾ ಅವರು ಎಲ್ಲರ ಗಮನ ಸೆಳೆದಿದ್ದರು.



ಇತ್ತೀಚಿನ ಸೂರ್ಯ ಅವರ ಸಿನಿಮಾಗಳಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಕಡಿಮೆ ಇತ್ತು ಎಂಬ ಕೊರಗನ್ನು ಆರ್‌ಜೆ ಬಾಲಾಜಿ ನೀಗಿಸಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಹೀರೊ ಎಂಟ್ರಿ ಸೀನ್‌ಗಳು ಗೂಸ್‌ಬಂಪ್ಸ್ ನೀಡುತ್ತವೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: Chaithra Achar: ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ನಟಿ

ಸಿನಿಮಾ ಬಿಡುಗಡೆಯ ಮೊದಲ ದಿನವೇ ನಟಿ ತ್ರಿಷಾ ಕೃಷ್ಣನ್, ನಿರ್ದೇಶಕ ಆರ್‌ಜೆ ಬಾಲಾಜಿ ಮತ್ತು ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜೊತೆ ‘ಫಸ್ಟ್ ಡೇ ಫಸ್ಟ್ ಶೋ’ ನೋಡಿದ್ದಾರೆ.

Yashaswi Devadiga

View all posts by this author