ನಿರ್ದೇಶಕ, ನಟ ಪಾರ್ತಿಬನ್ ಬಹಿರಂಗ ವೇದಿಕೆಯಲ್ಲೇ ತ್ರಿಶಾ (Trisha Krishnan ) ಬಗ್ಗೆ ವ್ಯಂಗ್ಯವಾಡಿರೋದು ಭಾರಿ ಚರ್ಚೆಗಳು ಆಗುತ್ತಿವೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಗಳಲ್ಲಿ, ತ್ರಿಶಾ ಕುಂಡವೈ (Parthiban) ಪಾತ್ರವನ್ನು ನಿರ್ವಹಿಸಿದರೆ, ಪಾರ್ತಿಬನ್ ಎರಡನೇ ಚಿತ್ರದಲ್ಲಿ ಚಿನ್ನ ಪಜುವೆಟ್ಟರಾಯರ್ ಪಾತ್ರವನ್ನು ನಿರ್ವಹಿಸಿದರು.ಈ ಕುಂಡವೈಯನ್ನು ಕೆಲವು ದಿನಗಳವರೆಗೆ ಮನೆಯಲ್ಲಿ ಇಡಬೇಕು. ಅದು ಒಳ್ಳೆಯದು. ಅವರನ್ನು ಹೊರಗೆ ಬರಲು ಬಿಡಬೇಡಿ ಎಂದು ವ್ಯಂಗ್ಯವಾಡಿದ್ದರು. ಈ ಬಗ್ಗೆ ಈಗ ತ್ರಿಷಾ ತಿರುಗೇಟು ಕೊಟ್ಟಿದ್ದಾರೆ.
ತ್ರಿಷಾ ತಿರುಗೇಟು
ಟ್ವೀಟ್‌ನಲ್ಲಿ ನಟಿ ಬರೆದುಕೊಂಡಿದ್ದು ಹೀಗೆ, ಇತ್ತೀಚಿನ ಕಾರ್ಯಕ್ರಮವೊಂದರ ಆಯೋಜಕರು ನನಗೆ ತಿಳಿಸಿದ್ದು, ಒಬ್ಬ ವ್ಯಕ್ತಿಯು ತನ್ನ ಸಹಾಯಕನ ಮೂಲಕ ತಿಳಿಸಿದ ಕೋರಿಕೆಯ ಮೇರೆಗೆ ಕೊನೆಯ ಕ್ಷಣದಲ್ಲಿ ನನ್ನ ಹೆಸರು ಮತ್ತು ಚಿತ್ರವನ್ನು ವಿಡಿಯೋ ಪ್ಲೇ ಮಾಡಿಸಿದ್ದಾರೆ.
ಮೈಕ್ರೋಫೋನ್ ಕಾಮೆಂಟ್ ಅನ್ನು ಬುದ್ಧಿವಂತ ಅಥವಾ ಹಾಸ್ಯಮಯವಾಗಿಸುವುದಿಲ್ಲ. ಅದು ಮೂರ್ಖತನವನ್ನು ಪ್ರದರ್ಶಿಸುತ್ತದೆ. ಜ್ಞಾನವಿಲ್ಲದ ಒರಟು ಪದಗಳು ಅವರು ಉದ್ದೇಶಿಸಿರುವ ವ್ಯಕ್ತಿಯ ಬಗ್ಗೆ ಹೆಚ್ಚು ಹೇಳುತ್ತವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Vijay and Trisha Krishnan: ತ್ರಿಷಾ ಬಗ್ಗೆ ಬಹಿರಂಗ ವೇದಿಕೆಯಲ್ಲೇ ನಿರ್ದೇಶಕ ಪಾರ್ತಿಬನ್ ವ್ಯಂಗ್ಯ!
Trisha Krishnan
ಮೌನ ಮುರಿದ ವಿಜಯ್
ಶನಿವಾರ ಟಿವಿಕೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, "ಇತ್ತೀಚಿನ ದಿನಗಳಲ್ಲಿ ಕೆಲವು ಸಮಸ್ಯೆಗಳು ಶುರುವಾಗಿವೆ, ಅಲ್ಲವೇ? ನೀವೆಲ್ಲರೂ ಆ ಆರೋಪಗಳ ವಿರುದ್ಧ ಹೋರಾಡುವುದರ ಬಗ್ಗೆ ನಾನು ನೋಡುತ್ತಿದ್ದೇನೆ. ಇದೆಲ್ಲ ನೋಡಿದಾಗ ನನಗೆ ನೋವಾಗುತ್ತದೆ. ಅದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ. ಜನರ ಸಮಸ್ಯೆಗಳಲ್ಲಿ ಭಾಗಿಯಾಗೋಣ. ಆ ಸಮಸ್ಯೆಯ ಬಗ್ಗೆ ನೋಯಿಸಿಕೊಳ್ಳಬೇಡಿ - ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಯೋಗ್ಯವಲ್ಲ. ಆತ್ಮವಿಶ್ವಾಸದಿಂದಿರಿ ಎಂದು ಹೇಳಿದರು.
'ದಾದಾ ಈಸ್ ಬ್ಯಾಕ್' ಎಂಬ ಕನ್ನಡ ಚಿತ್ರದಲ್ಲಿ ಕೂಡ ಪಾರ್ತಿಬನ್ ನಟಿಸಿದ್ದರು. ಕಳೆದ ವರ್ಷ ಬಂದ 'ಇಡ್ಲಿ ಕಡೈ' ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದರು. ಒಟ್ಟಾರೆ ಸಿನಿಮಾ ತಾರೆಯರೇ ವಿಜಯ್ ಹಾಗೂ ತ್ರಿಶಾ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಇದನ್ನೂ ಓದಿ: Junior NTR: ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದ ಹಾಗೆ ಇರತ್ತೆ; ಕನ್ನಡದಲ್ಲೇ ಜ್ಯೂನಿಯರ್ ಎನ್‌ಟಿಆರ್ ಭಾಷಣ
ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.