ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವಿಜಯ್‌ ಹುಟ್ಟುಹಬ್ಬಕ್ಕೆ ವಿಶ್‌ ಇಲ್ಲ, ಇನ್‌ಸ್ಟಾಗ್ರಾಮ್‌ನಲ್ಲೂ ಫಾಲೋ ಮಾಡ್ತಿಲ್ಲʼ;‌ ಸಿಎಂ ಮೇಲೆ ಮುನಿಸಿಕೊಂಡ್ರಾ ನಟಿ ತ್ರಿಶಾ ಕೃಷ್ಣನ್?

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಜೂನ್ 22ರ ಹುಟ್ಟುಹಬ್ಬ. ಆದರೆ, ಅಂದು ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ ಶುಭಕೋರದೆ ಇರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಬರೀ ವಿಶ್ ಮಾಡುವುದು ಮಾತ್ರವಲ್ಲದೆ, ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತ್ರಿಶಾ ಅನ್‌ಫಾಲೋ ಮಾಡಿದ್ದು, ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯೇ ಎಂಬ ವದಂತಿ ದಟ್ಟವಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರಿಗೆ ಜೂನ್‌ 22ರಂದು ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದರೆ, ಅವರ ಆಪ್ತ ಗೆಳತಿ, ಚಿತ್ರನಟಿ ತ್ರಿಶಾ ಕೃಷ್ಣನ್‌ ಅವರು ಮಾತ್ರ ವಿಶ್‌ ಮಾಡಿಲ್ಲ.

ಪ್ರತಿ ಬಾರಿ ವಿಜಯ್‌ ಹುಟ್ಟುಹಬ್ಬಕ್ಕೆ ಮಿಸ್‌ ಇಲ್ಲದೇ ವಿಶ್‌ ಮಾಡುತ್ತಿದ್ದ ತ್ರಿಶಾ ಅವರು ಈ ಬಾರಿ ಮಿಸ್‌ ಮಾಡಿದ್ದೇಕೆ? ಅದರಲ್ಲೂ ಮುಖ್ಯಮಂತ್ರಿಯಾದ ಮೇಲೆ ಇದು ಅವರ ಮೊದಲ ಹುಟ್ಟುಹಬ್ಬ. ಇಂತಹ ಸ್ಪೆಷಲ್‌ ಗಳಿಗೆಯನ್ನು ತ್ರಿಶಾ ಮಾಡಿದ್ದೇಕೆ ಎಂಬ ಚರ್ಚೆಗಳು ಹುಟ್ಟುಕೊಂಡಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ

ಬರೀ ವಿಶ್‌ ಮಾಡದೇ ಇರುವುದು ಮಾತ್ರವಲ್ಲ, ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿಯೂ ತ್ರಿಶಾ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿಯೂ ಹರಡುತ್ತಿದ್ದು, ಇಬ್ಬರ ಸಂಬಂಧದ ಕುರಿತಾದ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಸಂಬಂಧ ಭಾರಿ ಚರ್ಚೆ ನಡೆಯುತ್ತಿದೆ. ವಿಜಯ್‌ ಮತ್ತು ತ್ರಿಶಾ ಅವರ ಗೆಳೆತನದಲ್ಲಿ ಬಿರುಕು ಮೂಡಿದೆಯಾ ಎಂಬ ಮಾತುಗಳು ಕೇಳಿಬಂದಿವೆ.

ಬಾಕ್ಸ್‌ ಆಫೀಸ್‌ನಲ್ಲಿ ʻಕರುಪ್ಪುʼ ಸಿನಿಮಾ ಭರ್ಜರಿ ಹಿಟ್;‌ ನಟಿ ತ್ರಿಶಾ ಕೃಷ್ಣನ್ ಸಂಭಾವನೆ ದಾಖಲೆ ಪ್ರಮಾಣದಲ್ಲಿ ಏರಿಕೆ

ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ

ವಿಜಯ್‌ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಬೇಕೆಂದು ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಆ ಕೇಸ್‌ ಇನ್ನೂ ನಡೆಯುತ್ತಿದೆ. ಈ ಮಧ್ಯೆ ತಮ್ಮ ಪತಿಗೆ ನಟಿಯೊಬ್ಬರ ಜೊತೆ ಸಂಬಂಧ ಇದೆ ಎಂದು ಸಂಗೀತಾ ಆರೋಪ ಮಾಡಿದ್ದರು. ಅದರ ಬೆನ್ನೆಲ್ಲೇ ವಿಜಯ್‌ ಮತ್ತು ತ್ರಿಶಾ ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ನಿರ್ಮಾಪಕರೊಬ್ಬರ ಕುಟುಂಬದ ಮದುವೆಗೆ ವಿಜಯ್‌ ಮತ್ತು ತ್ರಿಶಾ ಒಟ್ಟಿಗೆ ಹೋಗಿದ್ದರು. ಆನಂತರ ವಿಜಯ್‌ ಸಿಎಂ ಪ್ರಮಾಣ ವಚನ ಸ್ವೀಕರಿಸುವ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ತ್ರಿಶಾ, ಸಖತ್‌ ಹೈಲೈಟ್‌ ಆಗಿದ್ದರು. ನಟ ಅಜಿತ್‌ ಅವರ ತಾಯಿ ನಿಧನವಾದಾಗಲೂ ಈ ಜೋಡಿ ಒಟ್ಟಿಗೆ ಹೋಗಿ ಅಂತಿಮ ದರ್ಶನ ಪಡೆದುಕೊಂಡಿತ್ತು.

ಧರಣಿ ನಿರ್ದೇಶನದ 2004 ರ ಬ್ಲಾಕ್‌ಬಸ್ಟರ್ ಗಿಲ್ಲಿ ಚಿತ್ರದಲ್ಲಿ ಈ ಇಬ್ಬರು ತಾರೆಯರು ಮೊದಲು ಒಟ್ಟಿಗೆ ಕೆಲಸ ಮಾಡಿದರು. ಆನಂತರ ತಿರುಪ್ಪಾಚಿ, ಕುರುವಿ, ಆದಿ ಚಿತ್ರಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಕಾಣಿಸಿಕೊಂಡರು. ಆಗಲೇ ಇವರ ಬಗ್ಗೆ ಗಾಸಿಪ್‌ಗಳು ಹರಿದಾಡತೊಡಗಿದವು. ಆಗ ಇಬ್ಬರು ಒಟ್ಟಿಗೆ ನಟಿಸುವುದನ್ನು ನಿಲ್ಲಿಸಿದ್ದರು. ಪುನಃ 14 ವರ್ಷಗಳ ನಂತರ ಲೋಕೇಶ್ ಕನಕರಾಜ್ ಅವರ ʻಲಿಯೋʼ ಚಿತ್ರಕ್ಕಾಗಿ ವಿಜಯ್ ಮತ್ತು ತ್ರಿಷಾ ಮತ್ತೆ ಪರದೆಯ ಮೇಲೆ ಒಂದಾದರು.

Vijay Trisha: ತ್ರಿಶಾ ಜೊತೆಯಲ್ಲೇ ಬಂದ ಸಿಎಂ ವಿಜಯ್; ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಜೋಡಿ

ಆನಂತರವೇ ವಿಜಯ್‌ ಮತ್ತು ತ್ರಿಶಾ ಬಗ್ಗೆ ಗಾಸಿಪ್‌ ಕಾಲಂಗಳಲ್ಲಿ ಹೆಚ್ಚು ಚರ್ಚೆಗಳು ಶುರುವಾಗಿದ್ದವು. ಇದೀಗ ಹೀಗೆ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ವಿಜಯ್‌ - ತ್ರಿಶಾ ಮಧ್ಯೆ ಇಷ್ಟು ಬೇಗ ಬಿರುಕು ಮೂಡಿದೆಯಾ? ವಿಜಯ್‌ ಮೇಲೆ ತ್ರಿಶಾ ಮುನಿಸಿಕೊಂಡ್ರಾ ಎಂಬ ಮಾತುಗಳು ಜೋರಾಗಿ ಕೇಳಿಬಂದಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಅಪ್ಡೇಟ್‌ ಸಿಗಲಿದೆಯಾ? ಕಾದುನೋಡಬೇಕು.