ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Aishwarya Shindogi: ಐಶ್ವರ್ಯಾಗೆ ಪ್ರಪೋಸ್ ಮಾಡೇ ಬಿಟ್ರಾ ಶಿಶಿರ್?: ವಿಡಿಯೋ ವೈರಲ್

ಬಿಗ್ ಬಾಸ್ ಮನೆಯಲ್ಲಿರುವಾಗ ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿರುವ ದೃಶ್ಯ ವೈರಲ್ ಆಗಿತ್ತು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಐಶ್ವರ್ಯಾಗೆ ಪ್ರಪೋಸ್ ಮಾಡೇ ಬಿಟ್ರಾ ಶಿಶಿರ್?: ವಿಡಿಯೋ ವೈರಲ್

Shishir and Aishwarya (1)

Profile Vinay Bhat Feb 26, 2025 4:38 PM

ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ಬರುವ ಮುನ್ನ ಬೆಳ್ಳಿ ತೆರೆ ಮತ್ತು ಕಿರುತೆರೆಯಲ್ಲಿ ಸಣ್ಣ-ಪುಟ್ಟ ಪಾತ್ರದ ಮೂಲಕ ಗುರುತಿಸಿಕೊಂಡ ಐಶ್ವರ್ಯಾ ಸಿಂಧೋಗಿ ದೊಡ್ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ದೊಡ್ಡ ದೊಡ್ಡ ಆಫರ್​ಗಳು ಇವರಿಗೆ ಬರುತ್ತಿದೆ. ಸೀಸನ್ 11 ರಲ್ಲಿ ಬಿಗ್ ಬಾಸ್ ಮನೆಗೆ ಬಂದ ಗರ್ಲ್ಸ್ ಬ್ಯೂಟಿಯಲ್ಲಿ ಇವರ ಮೇಲೆ ಎಲ್ಲರ ಕಣ್ಣಿತ್ತು. 90 ದಿನಗಳ ಕಾಲ ದೊಡ್ಮನೆಯಲ್ಲಿದ್ದ ಇವರ ಜೊತೆ ಶಿಶಿರ್ ಶಾಸ್ತ್ರೀ ಹೆಸರು ತಳುಕಿ ಹಾಕಿಕೊಂಡಿತ್ತು. ಇವರಿಬ್ಬರು ಲವ್​ನಲ್ಲಿ ಬಿದ್ದಿದ್ದಾರೆ ಎಂಬ ಟಾಕ್ ಜೋರಾಗಿತ್ತು.

ಬಿಗ್ ಬಾಸ್ ಮನೆಯಲ್ಲಿರುವಾಗ ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿರುವ ದೃಶ್ಯ ವೈರಲ್ ಆಗಿತ್ತು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೆಲ ಸಂದರ್ಶನದಲ್ಲಿ ಇವರ ಬಗ್ಗೆ ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ.

ಇದರ ಮಧ್ಯೆ ಸದ್ಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಜೋಡಿ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಈ ಹಾಡಿನ ಮೂಲಕ ಶಿಶಿರ್​ ಅವರು ಐಶ್ವರ್ಯಾ ಅವರಿಗೆ ಪ್ರಪೋಸ್​ ಮಾಡಿದ್ರಾ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಸೆಲೆಕ್ಟ್​ ಮಾಡಿಕೊಂಡು ಹಾಡು ಹಾಗಿದೆ. ಶಿಶಿರ್​ ಹಾಗೂ ಐಶ್ವರ್ಯಾ ಅವರು ನಟ ಯಶ್ ಅಭಿನಯದ ಲಕ್ಕಿ ಸಿನಿಮಾದ ಗೌರಮ್ಮ.. ಬಾರಮ್ಮ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಆಗ ಶಿಶಿರ್ ಅವರು ಮಂಡಿಯೂರಿ ಐಶೂಗೆ ಪ್ರಪೋಸ್ ಮಾಡಿದಂತೆ ಕಾಣುತ್ತದೆ. ಈ ಕ್ಲಿಪ್​ ನೋಡಿದ ನೆಟ್ಟಿಗರು ಪ್ರಪೋಸ್​ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಮದುವೆ ಬಗ್ಗೆ ಐಶ್ವರ್ಯಾ ಮಾತು:

ಐಶ್ವರ್ಯ ಅವರು ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಆದರೆ, ಒಳ್ಳೆಯ ಗುಣಗಳಿರುವ ಹುಡುಗ ಹಾಗೂ ತನ್ನನ್ನು ಕಾಳಜಿ ಮಾಡುವವ ಸಿಗಬೇಕು. ಅಲ್ಲದೇ, ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳಿದ್ದಾರೆ.

Bhagya Lakshmi Serial: ಭಾಗ್ಯಾಳ ಮಹಾ ನಿರ್ಧಾರ ಬೆಂಬಲಿಸಿದ ಕುಸುಮಾ: ತಾಳಿ ಕಿತ್ತೇ ಬಿಟ್ಟಳು ಭಾಗ್ಯಾ