ಜೀ ಕನ್ನಡ ವಾಹಿನಿಯಲ್ಲಿ (Zee Kannada) ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ (Puttakkana Makkalu serial) ಕೊನೆಗೊಳ್ಳೋದು ಗೊತ್ತೇ ಇದೆ. ಇದರ ಬೆನ್ನಲ್ಲೇ ಯಾವ ಧಾರಾವಾಹಿಗಳು ಬರ್ತಾ ಇವೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ. ಜೊತೆಗೆ ಇನ್ನೊಂದು ಪ್ರಮುಖ ಸೀರಿಯಲ್ ಅಂತ್ಯ ಕಾಣಲಿದೆ ಎನ್ನಲಾಗುತ್ತಿದೆ. ಜೀ ಕನ್ನಡದಲ್ಲಿ `ಕೃಷ್ಣ ರುಕ್ಕು` ಮತ್ತು `ಜಗದ್ಧಾತ್ರಿ` ಎಂಬ ಎರಡು ಹೊಸ ಧಾರಾವಾಹಿಗಳು (New Serial) ಬರಲಿವೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಎರಡು ಧಾರಾವಾಹಿಗಳು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ.
ಹೊಸ ಧಾರಾವಾಹಿಗಳ ಪ್ರೋಮೋ ಇದು
ಜೀ ವಾಹಿನಿಯಲ್ಲಿ ಸಾಕಷ್ಟು ಉತ್ತಮ ಧಾರಾವಾಹಿಗಳು ಪ್ರಸಾರ ಕಾಣುತ್ತಿದೆ. TRPಯಲ್ಲಿಯೂ ಬಹುತೇಕ ಜೀ ಕನ್ನಡ ಧಾರಾವಾಹಿಗಳೇ ಇರ್ತವೆ. ಜೀ ಕನ್ನಡ ವಾಹಿನಿಯು ಎರಡು ಹೊಸ ಧಾರಾವಾಹಿಗಳ ಪ್ರೋಮೋನ ಹಂಚಿಕೊಂಡಿದೆ. ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು.ಜಗದ್ಧಾತ್ರಿ ಹೆಸರಿನ ಧಾರಾವಾಹಿ ಕೂಡ ಬರುತ್ತಿದೆ.
ಇದನ್ನೂ ಓದಿ: Dog Satish: ಧರ್ಮಸ್ಥಳದ ಪಾರ್ಕ್‌ನಲ್ಲಿಯೇ ಬಿರಿಯಾನಿ ಕಬಾಬ್ ತಿಂದಿದ್ದೆ; ಡಾಗ್ ಸತೀಶ್ ಹೊಸ ವಿವಾದ
ಈ ಧಾರಾವಾಹಿ ಪ್ರೋಮೋಗೆ ‘ಇವಳು ಮನೆ ಬೆಳಗೋ ದೀಪವೂ ಹೌದು, ಅಧರ್ಮಕ್ಕೆ ಅಂತ್ಯ ಹಾಡೋ ಜ್ವಾಲೆಯೂ ಹೌದು’ ಎಂಬ ಕ್ಯಾಪ್ಶನ್ ನೀಡಲಾಗಿದೆ.
1200 ಸಂಚಿಕೆ ಪೂರ್ತಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿದ ಖ್ಯಾತಿ ಸೀರಿಯಲ್ ಇದೆ. ಈ ಧಾರವಾಹಿಯಲ್ಲಿ ಏಕಾಂಗಿಯಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬೆಳೆಸಿ ಸ್ವಾವಲಂಬಿಯಾಗಿ ಬದುಕುವ ಪುಟ್ಟಕ್ಕ ಎಂಬ ಛಲಗಾತಿ ಮಹಿಳೆಯ ಕತೆಯಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ, ಧನುಷ್ ಗೌಡ, ಮಂಜುಭಾಷಿಣಿ, ಅಕ್ಷರಾ, ರಮೇಶ್ ಪಂಡಿತ್, ಸಂಜನಾ ಬುರ್ಲಿ, ಹಂಸಾ, ಶಿಲ್ಪಾ, ಅನಿರಿಶ್, ರಮ್ಯಾ ರಾಜು ಸೇರಿ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ. ಉಮಾಶ್ರೀಯವರು ತಾಯಿಯಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Puttakkana Makkalu: ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು; ಕಲಾವಿದರು ಭಾವುಕ!
ಇನ್ನೊಂದು ಕಡೆ ಅಮೃತಧಾರೆ ಧಾರಾವಾಹಿ ಅಂತ್ಯ ಕಾಣಲಿದೆ ಎಂಬ ಚರ್ಚೆಗಳು ಶುರುವಾಗಿವೆ. ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಇನ್ನು, ಜಯದೇವ್ ಹಾಗೂ ತಂಡಕ್ಕೆ ಪಾಠ ಕಲಿಸಿದರೆ ಮುಗಿಯಿತು. ಹೀಗಾಗಿ, ಧಾರಾವಾಹಿ ಪೂರ್ಣಗೊಳ್ಳುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.