ಬೆಂಗಳೂರು,ಜ.22: ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು (Ugram Manju) ಮದುಮಗನಾಗಿ ಮಿಂಚಲು ರೆಡಿಯಾಗಿದ್ದಾರೆ. ಉಗ್ರಂ ಮಂಜು ಸಾಯಿ ಸಂಧ್ಯಾ ಜೊತೆ ಸಪ್ತಪದಿ ತುಳಿಯಲಿದ್ದು ಜನವರಿ 23ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ಹಾಗೆಯೇ ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿದೆ. ಮನೆಯಲ್ಲಿಯೇ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಆಪ್ತರು ಹಾಗೂ ಆತ್ಮೀಯ ಗೆಳೆಯರು ಮಾತ್ರ ಭಾಗವಹಿಸಿದ್ದರು. ಸದ್ಯ ಹಳದಿ ಶಾಸ್ತ್ರದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಂಜು 'ಉಗ್ರಂ' ಸಿನಿಮಾದಿಂದ ಖ್ಯಾತಿ ಪಡೆದಿದ್ದು ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಕಿರಿಕ್ ಪಾರ್ಟಿ, ಹೀರೋ, ಕಿಡಿ, ಕಿರೀಟ, ರಾನಿ, ದೂರದರ್ಶನ ಸಿನಿಮಾಗ ಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಮ್ಯಾಕ್ಸ್ ಸಿನಿಮಾದಲ್ಲಿ ಉಗ್ರಂ ಮಂಜು ಸೂಪರ್ ಆಗಿ ಆ್ಯಕ್ಟ್ ಮಾಡಿದ್ದರು. ಸುದೀಪ್ ಜೊತೆಗೆಯೇ ಖಡಕ್ ಆಗಿಯೇ ಡೈಲಾಗ್ ಹೊಡೆದು ಮಿಂಚಿದ್ದರು. ಸದ್ಯ ಮಂಜು ಅವರು ಸಾಯಿ ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಧ್ಯಾ ಅವರು ಟ್ರಾನ್ಸ್‌ಪ್ಲಾಂಟ್ ಕೋ–ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದು , ಕಳೆದ ಕೆಲವು ತಿಂಗಳ ಹಿಂದೆ ಅವರ ನಿಶ್ಚಿತಾರ್ಥವು ಅದ್ದೂರಿಯಾಗಿ ನೆರವೇರಿತ್ತು.
Kannada New Movie: ‘ಪ್ರೇಮ್ ಲವ್ ನಂದಿನಿ’ ಪೋಸ್ಟರ್ ಬಿಡುಗಡೆ! ನಿರ್ದೇಶಕಿಯಾದ ಸುಧಾ
ಜನವರಿ 23 ರಂದು ಧರ್ಮಸ್ಥಳದಲ್ಲಿ ಮದುವೆ ಕಾರ್ಯ ಕ್ರಮ ನಡೆಯಲಿದ್ದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ನಡೆಯಲಿದೆ. ಸದ್ಯ ಮನೆಯಲ್ಲಿ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿದೆ. ಮಧುಮಗನ ಕಳೆಯಲ್ಲಿ ಮಂಜು ಮಿಂಚುತ್ತಿರುವ ಫೋಟೋಗಳು ಭಾರೀ ವೈರಲ್ ಆಗಿವೆ. ಅರಶಿನ ನೀರಿನಲ್ಲಿ ಮಂಜು ಮಿಂದೆದಿದ್ದು ಮಧುಮಗನ ಕಳೆಯಲ್ಲಿ ಮಂಜು ಕಂಗೊಳಿಸಿದ್ದಾರೆ
ಮದುವೆಯ ಶುಭಾರಂಭಕ್ಕೆ ಸಂಕೇತವಾದ ಅರಿಶಿಣ ಶಾಸ್ತ್ರದಲ್ಲಿ ಸಂಪ್ರದಾಯಿಕ ವೇಸ್ಟಿ ಧರಿಸಿ ಸಿಂಪಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶುಭ ಸಮಾರಂಭದಲ್ಲಿ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಅರಿಶಿಣ ಶಾಸ್ತ್ರದಲ್ಲಿ ಸ್ನೇಹಿತರು ಕುಟುಂಬದೊಂದಿಗೆ ಎಂಜಾಯ್ ಮಾಡಿದ್ದಾರೆ.