ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Andhra King Taluka Review: ತೆಲುಗು ಸಿನಿಮಾದಲ್ಲಿ ʻಕಿಂಗ್‌ʼ ಆದ್ರಾ ಉಪೇಂದ್ರ? ಈ ಚಿತ್ರ ರಾಮ್‌ ಪೋತಿನೇನಿ ಫ್ಯಾನ್ಸ್‌ಗೆ ಇಷ್ಟವಾಯ್ತಾ?

Andhra King Taluka Movie Review: ʻರಿಯಲ್‌ ಸ್ಟಾರ್‌ʼ ಉಪೇಂದ್ರ ಅವರು ಸಣ್ಣ ಗ್ಯಾಪ್‌ನ ಬಳಿಕ ಡೈರೆಕ್ಟರ್‌ ತೆಲುಗು ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್‌ ಪೋತಿನೇನಿ, ಭಾಗ್ಯ‌ಶ್ರೀ ಬೋರ್ಸ್ ಜೋಡಿಯಾಗಿರುವ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾದಲ್ಲಿ ಉಪೇಂದ್ರ ಸೂಪರ್‌ ಸ್ಟಾರ್‌ ನಟರಾಗಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಸಿನಿಮಾ? ಮುಂದೆ ಓದಿ.

Movie: ಆಂಧ್ರ ಕಿಂಗ್ ತಾಲೂಕಾ

Release Date: ನವೆಂಬರ್‌ 27, 2025

Language: ಕನ್ನಡ, ತೆಲುಗು

Genre: ಡ್ರಾಮಾ, ಎಮೋಷನಲ್‌

Director: ಮಹೇಶ್‌ ಬಾಬು ಪಿ.

Cast: ಉಪೇಂದ್ರ, ರಾಮ್‌ ಪೋತಿನೇನಿ, ಭಾಗ್ಯಶ್ರೀ ಬೋರ್ಸ್‌, ರಾವ್‌ ರಮೇಶ್‌, ರಾಜೀವ್‌ ಕನಕಾಲ, ರಾಹುಲ್‌ ರಾಮಕೃಷ್ಣ

Duration: 166 Minutes

Rating: 3/5


ರಾಮ್‌ ಪೋತಿನೇನಿ ಮತ್ತು ಭಾಗ್ಯಶ್ರೀ ಬೋರ್ಸ್‌ ನಟನೆಯ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾದಲ್ಲಿ ಉಪೇಂದ್ರ ಅವರು ತೆರೆಮೇಲೂ ಸಿನಿಮಾ ಹೀರೋ ಆಗಿಯೇ ಕಾಣಿಸಿಕೊಂಡಿದ್ದಾರೆ. ಸದ್ಯ ತೆರೆಕಂಡಿರುವ ಈ ಚಿತ್ರ ಹೇಗಿದೆ? ಆಂಧ್ರ ಕಿಂಗ್‌ ಆಗಿ ಉಪೇಂದ್ರ ಹೇಗೆ ಮೆರೆದಿದ್ದಾರೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾ ಕಥೆ ಏನು?

ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ನೆಚ್ಚಿನ ಸಿನಿಮಾ ನಟರಿಗಾಗಿ ಅಭಿಮಾನಿಗಳು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ದೇವರಂತೆ ಆರಾಧಿಸುತ್ತಾರೆ. ಆ ನಟನಿಗೆ ಈ ಅಭಿಮಾನಿ ಯಾರು ಎಂಬುದೇ ಗೊತ್ತಿರುವುದಿಲ್ಲ. ಆದರೂ ಅಭಿಮಾನಿ ಮಾತ್ರ ನೆಚ್ಚಿನ ಹೀರೋಗೆ ಪ್ರೀತಿ ತೋರುತ್ತಲೇ ಇರುತ್ತಾನೆ. ಅಂಥದ್ದೇ ಒಂದು ಅಭಿಮಾನಿಯ ಕಥೆ ಈ ʻಆಂಧ್ರ ಕಿಂಗ್ ತಾಲೂಕಾʼ! 99 ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿರುವ ನಟ ಸೂರ್ಯ ಕುಮಾರ್‌ (ಉಪೇಂದ್ರ) ತನ್ನ ವೃತ್ತಿ ಮೈಲಿಗಲ್ಲಾದ 100ನೇ ಸಿನಿಮಾಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಆ ಸಿನಿಮಾಕ್ಕೆ ಅಡೆತಡೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ದೂರದ ಹಳ್ಳಿಯೊಂದರಲ್ಲಿರುವ ಅಭಿಮಾನಿ ಸಾಗರ್‌ (ರಾಮ್)‌ ತನ್ನ ನೆಚ್ಚಿನ ಹೀರೋ ಸಹಾಯಕ್ಕೆ ಬರುತ್ತಾನೆ. ಅದ್ಹೇಗೆ? ಯಾವ ರೀತಿ ಸಹಾಯ ಮಾಡುತ್ತಾನೆ? ಹೀರೋ ಮತ್ತು ಅಭಿಮಾನಿ ನಡುವಿನ ನಂಟೇನು ಎಂಬುದೇ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾದ ಕಥೆ.

Real Star Upendra: ತೆಲುಗಿನಲ್ಲಿ ರೀ ರಿಲೀಸ್‌ ಆಗ್ತಿದೆ ಉಪ್ಪಿ ಸಿನಿಮಾ! ಯಾವುದು ಗೊತ್ತಾ?

ನಾಸ್ಟಾಲ್ಜಿಯಾ ಫೀಲಿಂಗ್‌ ಕೊಡುಗ ಆಂಧ್ರ ಕಿಂಗ್‌

ನಿರ್ದೇಶಕ ಮಹೇಶ್‌ ಬಾಬು ಪಿ. ಈ ಹಿಂದೆ ʻಮಿಸ್ ಶೆಟ್ಟಿ ಶ್ರೀ ಪೋಲಿಶೆಟ್ಟಿʼ ಎಂಬ ಸೆನ್ಸಿಬಲ್‌ ಸಿನಿಮಾ ಮಾಡಿದ್ದವರು. ಈ ಬಾರಿ ಅವರು ಮಾಸ್‌ ಎಲಿಮೆಂಟ್ಸ್‌ ಇರುವ ಅಭಿಮಾನಿಯೊಬ್ಬನ ಎಮೋಷನಲ್‌ ಕಥೆಯನ್ನು ʻಆಂಧ್ರ ಕಿಂಗ್ ತಾಲೂಕಾʼ ಮೂಲಕ ಹೇಳಿದ್ದಾರೆ. ಇಡೀ ಕಥೆಯು 2000ನೇ ಅಸುಪಾಸಿನಲ್ಲಿ ನಡೆಯುತ್ತದೆ. ಆಗ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳದ್ದೇ ದರ್ಬಾರು. ಆಗಿನ ಜನರೇಷನ್‌ನ ಸಿನಿಮಾಪ್ರಿಯರಿಗೆ ʻಆಂಧ್ರ ಕಿಂಗ್ ತಾಲೂಕಾʼ ಕನೆಕ್ಟ್‌ ಆಗುತ್ತದೆ. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟನಿಗಾಗಿ ಹಚ್ಚೆ ಹಾಕಿಸಿಕೊಳ್ಳುವುದು, ಕಟೌಟ್‌ ಕಟ್ಟುವುದು, ಥಿಯೇಟರ್‌ ಸಂಭ್ರಮಿಸುವುದು, ಅನ್ನದಾನ, ರಕ್ತದಾನ ಹೀಗೆ ಏನೇನೋ ಮಾಡುತ್ತಾರೆ ಅಭಿಮಾನಿಗಳು. ಆದರೆ ಈ ಸಿನಿಮಾದ ಅಭಿಮಾನಿ ಕೊಂಚ ಡಿಫರೆಂಟ್.‌ ಕಷ್ಟದಲ್ಲಿರುವ ನೆಚ್ಚಿನ ಹೀರೋಗಾಗಿ ಅಸಾಧಾರಣವಾದ ಸಹಾಯವನ್ನೇ ಮಾಡುತ್ತಾನೆ. ಅದು ಹೇಗೆ ಎಂಬುದನ್ನು ತೆರೆಮೇಲೆ ನೋಡಬೇಕು.

Andhra King Taluka Trailer: ಉಪೇಂದ್ರ ಈಗ ‘ಆಂಧ್ರ ಕಿಂಗ್’; ಟಾಲಿವುಡ್‌ನಲ್ಲಿ ʻರಿಯಲ್‌ ಸ್ಟಾರ್‌ʼ ಹವಾ ಜೋರು!

ನಿರ್ದೇಶಕ ಮಹೇಶ್‌ ಬಾಬು ಬರೆದುಕೊಂಡಿರುವ ಕಥೆ ವಿಭಿನ್ನವಾಗಿದೆ. ಆದರೆ ತಕ್ಕುದಾದ ಖಡಕ್‌ ಎನ್ನಿಸುವ ಸ್ಕ್ರೀನ್‌ಪ್ಲೇ ಬೇಕಿತ್ತು ಎನಿಸುತ್ತದೆ. ಇನ್ನಷ್ಟು ಮಾಗಿದ ಬರವಣಿಗೆ ಇದ್ದಿದ್ದರೆ, ʻಆಂಧ್ರ ಕಿಂಗ್ ತಾಲೂಕಾʼ ಇನ್ನಷ್ಟು ಆಪ್ತವಾಗುತಿತ್ತು. ಅಲ್ಲದೆ, ಕೆಲವೊಂದು ಕಡೆ ಲಾಜಿಕ್‌ ಮಿಸ್‌ ಎನಿಸುತ್ತವೆ. ಸಿನಿಮಾ ಅವಧಿ ಜಾಸ್ತಿ ಇರುವುದು ಮತ್ತೊಂದು ಹಿನ್ನಡೆ. ಮೊದಲರ್ಧಕ್ಕಿಂತ ಸೆಕೆಂಡ್‌ ಹಾಫ್‌ಗ ಜಾಸ್ತಿ ತೂಕ ಇದೆ. ವಿವೇಕ್‌ & ಮೆರ್ವಿನ್‌ ಅವರ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಸಿದ್ದಾರ್ಥ್‌ ನುನಿ ಛಾಯಾಗ್ರಹಣ ಚೆನ್ನಾಗಿದೆ. ಸಾಮಾನ್ಯ ವ್ಯಕ್ತಿಗಳ ಮೇಲೆ ಸಿನಿಮಾ ನಟರು ಹೇಗೆ ಪರಿಣಾಮ ಬೀರುತ್ತಾರೆ ಎಂಬುದಕ್ಕೆ ಬರುವ ಹಿನ್ನೆಲೆ ಚೆನ್ನಾಗಿದೆ.

ಉಪೇಂದ್ರ ಸೂಕ್ತವಾದ ಆಯ್ಕೆ

ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾಗೆ ಉಪೇಂದ್ರ ಸೂಕ್ತವಾದ ಆಯ್ಕೆ ಎನ್ನಬಹುದು. ಒಬ್ಬ ಸ್ಟಾರ್‌ ಹೀರೋ ಪಾತ್ರವನ್ನು ಅವರು ಬಹಳ ನೀಟ್‌ ಆಗಿ ನಿಭಾಯಿಸಿದ್ದಾರೆ. ಸ್ಕ್ರೀನ್‌ ಸ್ಪೇಸ್‌ ಕಡಿಮೆ ಇದ್ದರೂ, ಪರಿಣಾಮ ದೊಡ್ಡದು. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಉಪೇಂದ್ರ ಹೈಲೈಟ್‌ ಆಗಿದ್ದಾರೆ. ಫ್ಯಾನ್‌ ಬಾಯ್‌ ಆಗಿ ರಾಮ್‌ ಪೋತಿನೇನಿ ಬೆಸ್ಟ್‌ ನಟನೆ ನೀಡಿದ್ದಾರೆ. ತುಂಬಾ ಸಿಂಪಲ್‌ ಆಗಿ ಅವರನ್ನಿಲ್ಲಿ ತೋರಿಸಲಾಗಿದೆ. ಸಾದಾ ಸೀದಾ ಅಭಿಮಾನಿಯಾಗಿ ಅವರು ಇಷ್ಟವಾಗುತ್ತಾರೆ. ನಾಯಕಿ ಭಾಗ್ಯಶ್ರೀ ಬೋರ್ಸ್‌ ಕೂಡ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸಿರುವ ರಾವ್‌ ರಮೇಶ್‌, ತುಳಸಿ, ರಾಜೀವ್‌ ಕನಕಾಲ, ರಾಹುಲ್‌ ರಾಮಕೃಷ್ಣ, ಮುರಳಿ ಶರ್ಮಾ ನೋಡುಗರಿಗೆ ಇಷ್ಟವಾಗುತ್ತಾರೆ.