ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಪೇಂದ್ರ ಮಗನ ಆಯುಷ್ ಮೊದಲ ಚಿತ್ರಕ್ಕೆ ಕಾಶ್ಮೀರದಲ್ಲಿ ಮುಹೂರ್ತ;‌ 25 ದಿನಗಳ ಶೂಟಿಂಗ್ ಮುಕ್ತಾಯ

Ayush Upendra Debut Movie: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ಉಪೇಂದ್ರ ಪುತ್ರ ಆಯುಷ್‌ ಅವರ ಮೊದಲ ಸಿನಿಮಾದ ಮುಹೂರ್ತ ನಡೆದು, ಶೂಟಿಂಗ್‌ ಕೂಡ ಪ್ರಾರಂಭವಾಗಿದೆ. ಆಯುಷ್ ನಾಯಕನಾಗಿ ನಟಿಸುತ್ತಿರುವ ಈ ಮೊದಲ ಚಿತ್ರಕ್ಕೆ 'ಮೊದಲ ಸಲ' ಖ್ಯಾತಿಯ ಪುರುಷೋತ್ತಮ್ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಕಾಶ್ಮೀರದಲ್ಲಿ 25 ದಿನಗಳ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.

ನಟ, ನಿರ್ದೇಶಕ ಉಪೇಂದ್ರ ಅವರ ಪುತ್ರ ಆಯುಷ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ಪ್ರಾರಂಭವಾಗಿದೆ. ಈ ಮೂಲಕ ಆಯಷ್ ಉಪೇಂದ್ರ ಸ್ಯಾಂಡಲ್‌ವುಡ್‌ಗೆ ನಾಯಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆಯುಷ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ಕಾಶ್ಮೀರದಲ್ಲೇ ಮುಹೂರ್ತ ನಡೆದಿರುವುದು ವಿಶೇಷ.

ಈವರೆಗೂ ಎಷ್ಟಾಗಿದೆ ಶೂಟಿಂಗ್?‌

ಚಿತ್ರತಂಡ ಯಾವುದೇ ಸಣ್ಣ ಸುಳಿವನ್ನು ಬಿಟ್ಟುಕೊಡದೇ, ಕಾಶ್ಮೀರದಲ್ಲೇ ಶೂಟಿಂಗ್‌ ನಡೆಸಿದೆ. ಈಗಾಗಲೇ ಅಲ್ಲಿ 25 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮುಂದಿನ ಹಂತದ ಶೂಟಿಂಗ್‌ಗಾಗಿ ಚಿತ್ರತಂಡ ಅಣಿಯಾಗುತ್ತಿದೆ. ಇನ್ನು, ಆಯುಷ್‌ ಅವರು ಹೀರೋ ಆಗಲು ಬೇಕಾಗಿರುವ ಪೂರ್ವ ತಯಾರಿಗಳನ್ನೆಲ್ಲಾ ಮಾಡಿಕೊಂಡಿದ್ದಾರಂತೆ. ಮಗನ ಮೊದಲ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿ ಉಪಸ್ಥಿತರಿದ್ದು, ಆಯುಷ್ ಗೆ ಮಾರ್ಗದರ್ಶನ ನೀಡಿದ್ದಾರೆ. ವಿಶೇಷವಾಗಿ ಪ್ರಿಯಾಂಕ ಉಪೇಂದ್ರ ಅವರು ನಿರ್ಮಾಣದ ಅಂಶಗಳ ಕುರಿತು ಗಮನ ಹರಿಸುವುದರ ಜೊತೆಗೆ, ವಿವಿಧ ವಿಭಾಗಗಳಲ್ಲಿ ಚಿತ್ರತಂಡಕ್ಕೆ ಸಹಾಯ ಮಾಡುತ್ತಿದ್ದಾರೆ.

Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್‌ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’

ನಿರ್ದೇಶಕರು ಯಾರು?

ಈ ಸಿನಿಮಾವನ್ನು ಪುರುಷೋತ್ತಮ್ ಸೂರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ರಾಕಿಂಗ್‌ ಸ್ಟಾರ್ ಯಶ್ ಅಭಿನಯದ "ಮೊದಲಾ ಸಲ" ಚಿತ್ರವನ್ನು ಇವರು ನಿರ್ದೇಶಿಸಿದ್ದರು. ಶ್ರೀ‌ ಕಲ್ಪವೃಕ್ಷ ಮೂವೀ ಮೇಕರ್ಸ್ ಲಾಂಛನದಲ್ಲಿ ಅಭಿಷೇಕ್ ಎನ್ ಸಿರಿವಂತ್ ಈ ನೂತನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಕೂಡ ನಿರ್ಮಾಪಕರಿಗೆ ಮೊದಲ ಸಿನಿಮಾ. ಖ್ಯಾತ ಛಾಯಾಗ್ರಾಹಕ ಎಚ್.ಸಿ. ವೇಣು ಅವರ ಛಾಯಾಗ್ರಹಣ ಮಾಡುತ್ತಿದ್ದು, ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Upendra: ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಸದ್ಯದಲ್ಲೇ ಈ ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಬಳಗ, ತಂತ್ರಜ್ಞರ ಕುರಿತು ಮಾಹಿತಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಅಂದಹಾಗೆ, ಕಳೆದ ವರ್ಷ ಆಯುಷ್‌ಗೆ 21 ವರ್ಷ ತುಂಬಿದ್ದರಿಂದ ಇಡೀ ಕುಟುಂಬ ಮಂತ್ರಾಲಯಕ್ಕೆ ತೆರಳಿ ರಾಯರಿಗೆ ವಿಶೇಷ ವಿಶೇಷ ಪೂಜೆ ಸಲ್ಲಿಸಿತ್ತು. ಇದೇ ಸಮಯದಲ್ಲಿ ಆಯುಷ್ ಅಭಿನಯದ ಚೊಚ್ಚಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕಾ, ಮಗಳು ಐಶ್ವರ್ಯಾ ಸೇರಿದಂತೆ ಇಡೀ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.