ಮೆಗಾ ಕುಟುಂಬದಲ್ಲಿ ಸದ್ಯ ಸಂಭ್ರಮ ಮುಗಿಲು ಮುಟ್ಟಿದೆ. ಕಾರಣ, ನಟ ರಾಮ್ ಚರಣ್ - ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದು, ಸಿನಿಮಾ, ರಾಜಕೀಯ ಮತ್ತು ಉದ್ಯಮ ರಂಗದ ಗಣ್ಯರು ಹಾಗೂ ಮೆಗಾ ಅಭಿಮಾನಿಗಳು, ನೆಟ್ಟಿಗರು ಶುಭಾಶಯ ಕೋರಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯರ ಆಗಮನದಿಂದ ಚಿರಂಜೀವಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಇದೇ ವೇಳೆ ಮೆಗಾ ಸ್ಟಾರ್ ಚಿರಂಜೀವಿ ಈ ಹಿಂದೆ ನೀಡಿದ್ದ ವಾರಸುದಾರನ ಕುರಿತ ಹೇಳಿಕೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
"ಮನೆಯಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳೇ ಇದ್ದಾರೆ, ಒಬ್ಬ ವಾರಸುದಾರನನ್ನು ನೀಡುವಂತೆ ಚರಣ್‌ಗೆ ಕೇಳುತ್ತಿದ್ದೇನೆ" ಎಂದು ತಮಾಷೆಯಾಗಿ ಹೇಳಿದ್ದ ಚಿರಂಜೀವಿ ಮಾತುಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ರಾಮ್ ಚರಣ್-ಉಪಾಸನಾ ದಂಪತಿಗೆ ಜನಿಸಿದ ಅವಳಿ ಮಕ್ಕಳಲ್ಲಿ ಗಂಡು ಮಗು ಇರುವುದರಿಂದ, ಹಳೆಯ ಹೇಳಿಕೆಗಳನ್ನು ಮತ್ತೆ ಕೆದಕಿ ಟೀಕಿಸಲಾಗುತ್ತಿದೆ. ಚಿರಂಜೀವಿಯನ್ನು ಗುರಿಯಾಗಿಸಿ ಟ್ರೋಲ್ ಮಾಡಲಾಗುತ್ತಿದೆ. ಈ ಹಾದಿಯಲ್ಲಿ ವ್ಯಕ್ತಿಯೊಬ್ಬ ಮಾಡಿದ ಟ್ವೀಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. "ಗಂಡು ಮಗು ಹುಟ್ಟಿದಾಗ ತೋರಿಸುವ ಸಂತೋಷ, ಹೆಣ್ಣು ಮಗು ಹುಟ್ಟಿದಾಗ ಕಾಣಿಸಲಿಲ್ಲ" ಎಂದು ಟ್ವೀಟ್ ಮಾಡಿದ್ದು, ಅದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.
Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್ ಚರಣ್; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ
ಸಿಡಿದ ಮೆಗಾ ಸೊಸೆ
ಇದೀಗ ಈ ಟೀಕೆಗಳಿಗೆ ಮೆಗಾ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಇಂತಹ ಪೋಸ್ಟ್‌ಗಳು ಆಕ್ಷೇಪಾರ್ಹವಾಗಿರುವುದಲ್ಲದೆ, ಒಂದು ಸಂತೋಷದ ಕ್ಷಣವನ್ನು ಅಸಹ್ಯಕರವಾಗಿ ಬದಲಾಯಿಸುವ ಪ್ರಯತ್ನದಂತಿದೆ" ಎಂದಿದ್ದಾರೆ ಲಾವಣ್ಯ!
ನಟಿ ಲಾವಣ್ಯ ತ್ರಿಪಾಠಿ ಟ್ವೀಟ್
ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಸರಿಯಲ್ಲ
"ಚಿರಂಜೀವಿ ಅವರು ತಮ್ಮ ಕುಟುಂಬದ ಮಹಿಳೆಯರನ್ನು, ಮುಖ್ಯವಾಗಿ ಮೊಮ್ಮಕ್ಕಳನ್ನು ಎಷ್ಟು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಾರೆ ಎಂಬುದು ಹೊರಗಿನವರಿಗೆ ತಿಳಿದಿಲ್ಲ. ಅವರು ಮಾಡುವ ಕೆಲಸಗಳಲ್ಲಿ ಕನಿಷ್ಠ ಶೇ.1ರಷ್ಟನ್ನು ಮಾಡಲಾಗದವರು ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಸರಿಯಲ್ಲ, ನಿಜವಾಗಿ ತಿಳಿಯದ ವ್ಯಕ್ತಿಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು" ಎಂದು ಲಾವಣ್ಯ ಅವರು ಹೇಳಿದ್ದಾರೆ.
Ram Charan: ನಟ ರಾಮ್ ಚರಣ್ ನೋಡಿ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್
ಲಾವಣ್ಯ ಬಗ್ಗೆ..
ನಟಿ ಲಾವಣ್ಯ ತ್ರಿಪಾಠಿ ಅವರು 2012ರಲ್ಲಿ ‘ಅಂದಾಲ ರಾಕ್ಷಸಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ತಮಿಳು ಮತ್ತು ಹಿಂದಿ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದರು. ಮೆಗಾ ಹೀರೋ ವರುಣ್ ತೇಜ್ (ಚಿರಂಜೀವಿ ತಮ್ಮನ ಮಗ) ಅವರೊಂದಿಗೆ ಪ್ರೀತಿಯಲ್ಲಿದ್ದ ಲಾವಣ್ಯ 2024ರಲ್ಲಿ ಅವರನ್ನು ಮದುವೆಯಾದರು. ಈ ದಂಪತಿಗೆ 2025ರಲ್ಲಿ ಗಂಡು ಮಗು ಜನಿಸಿದ್ದು, ಅದಕ್ಕೆ ‘ವಾಯುವ್ ತೇಜ್’ ಎಂದು ಹೆಸರಿಡಲಾಗಿದೆ.