ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nana Patekar: ಹಿರಿಯ ನಟ ನಾನಾ ಪಾಟೇಕರ್​ ಇನ್ನಿಲ್ಲ

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಅವರು ತೀವ್ರ ಹೃದಯಾಘಾತದಿಂದ 75 ನೇ ವಯಸ್ಸಿನಲ್ಲಿ ನಿಧನರಾದರು. ಇಂದು ಬೆಳಗ್ಗೆ ಗೋವಾದ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಜನವರಿ 1, 1951 ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಅವರು, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮ ಖಡಕ್ ಡೈಲಾಗ್ ಡೆಲಿವರಿ ಹಾಗೂ ಅದ್ಭುತ ಅಭಿನಯಕ್ಕೆ ಹೆಸರಾಗಿದ್ದರು.

ಹಿರಿಯ ನಟ ನಾನಾ ಪಾಟೇಕರ್

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರು ತೀವ್ರ ಹೃದಯಾಘಾತದಿಂದ 75 ನೇ ವಯಸ್ಸಿನಲ್ಲಿ ನಿಧನರಾದರು. ಇಂದು ಬೆಳಗ್ಗೆ ಗೋವಾದ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಜನವರಿ 1, 1951 ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಅವರು, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮ ಖಡಕ್ ಡೈಲಾಗ್ ಡೆಲಿವರಿ ಹಾಗೂ ಅದ್ಭುತ ಅಭಿನಯಕ್ಕೆ ಹೆಸರಾಗಿದ್ದರು.

ಗೋವಾದ ತಮ್ಮ ನಿವಾಸದಲ್ಲಿ ತಡರಾತ್ರಿ ದಿಢೀರ್ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.ಆಸ್ಪತ್ರೆಯ ಮೂಲಗಳ ಪ್ರಕಾರ, ನಾನಾ ಪಾಟೇಕರ್ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ತಂದ ತಕ್ಷಣವೇ ವೈದ್ಯರ ತಂಡವು ಸತತ 45 ನಿಮಿಷಗಳ ಕಾಲ ಅವರನ್ನ ಬದುಕಿಸಲು ಮತ್ತು ಪ್ರಜ್ಞೆ ಮರಳಿ ತರಲು ವೈದ್ಯಕೀಯ ಯತ್ನ ನಡೆಸಿತಾದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಅಂತಿಮವಾಗಿ, ಅವರು ಮೃತಪಟ್ಟಿದ್ದಾರೆ ಎಂದು ದೃಢೀಕರಿಸಲಾಯ್ತು.

ಇದನ್ನೂ ಓದಿ: Bigg Boss Kannada 13: ರಾಕ್ಷಸರಾಗಿ ಮಂಜ, ಕಾವ್ಯಾಗೆ ಕಾಟ ಕೊಟ್ಟು ರಣಕೇಕೆ! ಕಾಲಿಗೆ ಬಿದ್ದ ತಾಂಡವ್‌

ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಶಿಷ್ಟ ಸಂಭಾಷಣೆ ಶೈಲಿ ಹಾಗೂ ತೀವ್ರತೆಯುಳ್ಳ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ‘ಪರಿಂದಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್‌ಕಮ್’, ‘ನಟಸಾಮ್ರಾಟ್’ ಸೇರಿದಂತೆ ಹಲವು ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಅವಿಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು. ಅತ್ಯುತ್ತಮ ನಟನೆಗಾಗಿ ಅವರು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ: Bigg Boss Kannada 13: ಅವಳು ಬೇಡ ಅಂದ್ರೂ ಬಿಡಲ್ಲ; ‘ಪ್ರೀತ್ಸೇ’ ಅಂತ ಸೋನಿಕಾ ಹಿಂದೆ ಬಿದ್ದ ಜಗ್ಗ ಮಮ್ಮಿ!

ನಾನಾ ಪಾಟೇಕರ್ ಅವರು ಕನ್ನಡ ಚಿತ್ರದಲ್ಲೂ ಅಭಿನಯಿಸಿದ್ದರು. ನಾನಾ ಪಾಟೇಕರ್ ಕನ್ನಡದಲ್ಲಿ ನಟಿಸಿದ್ದ ಏಕೈಕ ಚಿತ್ರ ಯಕ್ಷ 2010 ರಲ್ಲಿ ಬಿಡುಗಡೆಯಾಗಿತ್ತು.ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾನಾ ಪಾಟೇಕರ್ ಅವರು ಯೋಗರಾಜ್ ಪುಲಕೇಶ್ ಎಂಬ ಖಡಕ್ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ (ಡಿಸಿಪಿ) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Yashaswi Devadiga

View all posts by this author