ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಭಾಗ್ಯರಾಜ್ ಹೃದಯಾಘಾತದಿಂದ ನಿಧನ

Writer K Bhagyaraj: ನಿರ್ಮಾಪಕ, ನಟ ಮತ್ತು ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಹೃದಯಾಘಾತದಿಂದ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದಾಗಿ ತಮಿಳು ಚಿತ್ರರಂಗದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಸಾರ್ವಜನಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಈ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು, ತಮ್ಮ ಸಾವಿಗೆ ಕೆಲವೇ ದಿನಗಳ ಮೊದಲು ಗೋವಾದಲ್ಲಿ ನಡೆದ ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಿದ್ದರು.

ನಿರ್ದೇಶಕ, ನಟ ಕೆ. ಭಾಗ್ಯರಾಜ್ (ಸಂಗ್ರಹ ಚಿತ್ರ)

ಚೆನ್ನೈ, ಜೂ. 27: ತಮಿಳು ಚಿತ್ರರಂಗಕ್ಕೆ ಅಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ನಿರ್ಮಾಪಕ, ನಟ ಮತ್ತು ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) (K Bhagyaraj) ಶನಿವಾರ (ಜೂನ್‌ 27) ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದಾಗಿ ತಮಿಳು ಚಿತ್ರರಂಗದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಸಾರ್ವಜನಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಇವರು ತಮ್ಮ ಸಾವಿಗೆ ಕೆಲವೇ ದಿನಗಳ ಮೊದಲು ಗೋವಾದಲ್ಲಿ ನಡೆದ ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಿದ್ದರು.

ಖ್ಯಾತ ನಿರ್ದೇಶಕ ಭಾರತಿರಾಜಾ ಅವರ ಸಹಾಯಕರಾಗಿ ಸಿನಿಮಾರಂಗ ಪ್ರವೇಶಿಸಿದ ಭಾಗ್ಯರಾಜ್ ತಮ್ಮದೇ ವಿಶಿಷ್ಟ ಕಥೆ, ನಿರ್ದೇಶನ ಮತ್ತು ಅಭಿನಯದ ಮೂಲಕ ತಮಿಳು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.1980ರ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚಿದ್ದ ಅವರು ʼಅಂದ 7 ನಾಟ್ಕಲ್ʼ, ʼಮುಂದನೈ ಮುಡಿಚುʼ, ʼಆಖ್ರಿ ರಾಸ್ತʼ ಇತ್ಯಾದಿ ಹಲವು ಶ್ರೇಷ್ಠ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ 2015ರಲ್ಲಿ ರಿಲೀಸ್ ಆದ "ರೆಡ್ ಅಲರ್ಟ್" ಚಿತ್ರದಲ್ಲಿ ಮುಖ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಭಾಗ್ಯರಾಜ್‌ ಅವರಿಗೆ ಗೌರವ ಸಲ್ಲಿಸಿದ ಸಿಎಂ ವಿಜಯ್‌:



1953ರ ಜನವರಿ 7ರಂದು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂ ಬಳಿಯ ವೆಲ್ಲಂಕೋವಿಲ್‌ನಲ್ಲಿ ಜನಿಸಿದ ಕೃಷ್ಣಸ್ವಾಮಿ ಭಾಗ್ಯರಾಜ್ ತಮ್ಮ ಗುರು ಕೆ. ಭಾರತಿರಾಜ ನಿರ್ದೇಶನದ ಚಲನಚಿತ್ರ '16 ವಯಸ್ಸಿನಿಲೆ' ಚಿತ್ರದಲ್ಲಿ ಸಹಾಯಕರಾಗಿ ಬೆಳ್ಳಿತೆರೆಯಲ್ಲಿ ಕಾಲಿಟ್ಟರು. ಆ ಬಳಿಕ ಎರಡು ವರ್ಷಗಳೊಳಗೆ, 'ಸುವರಿಲ್ಲದ ಚಿತ್ತಿರಂಗಳ್' ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು. ಭಾರತಿರಾಜ ಅವರ 'ಪುತಿಯ ವಾರಪುಗಳ್' ಚಿತ್ರದಲ್ಲಿ ಭಾಗ್ಯರಾಜ್‌ ನಾಯಕನಗಿ ಕಾಣಿಸಿಕೊಂಡರು.

'ದೃಶ್ಯಂ 3' ತೆಲುಗು ಆವೃತ್ತಿಯ OTT ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

ಶನಿವಾರ ಬೆಳಗ್ಗೆ ಚೆನ್ನೈಯ ಮನೆಯಲ್ಲಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದದೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಮಧ್ಯಾಹ್ನ 1.30ಕ್ಕೆ ಚೆನ್ನೈನ ಬೆಸೆಂಟ್ ನಗರ ಸ್ಮಶಾನದಲ್ಲಿ ನಡೆಯಿತು. ಭಾಗ್ಯರಾಜ್ ಪತ್ನಿ, ನಟಿ ಪೂರ್ಣಿಮಾ ಭಾಗ್ಯರಾಜ್ ಮತ್ತು ಅವರ ಮಕ್ಕಳಾದ ನಟ ಶಾಂತನು ಭಾಗ್ಯರಾಜ್ ಮತ್ತು ಮಗಳು ಶರಣ್ಯ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.

ಸಾಮಾಜಿಕ ಕಾಳಜಿಯುಳ್ಳ ಸಿನಿಮಾಗಳ ಮೂಲಕ ಅತ್ಯಂತ ಪ್ರಭಾವಶಾಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ತಮಿಳು ಚಿತ್ರರಂಗಕ್ಕೆ ಅವು ಸಾಕಷ್ಟು ಕೊಡುಗೆ ನೀಡಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ದಂತಕಥೆ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಹಿಂದೊಮ್ಮೆ ಭಾಗ್ಯರಾಜ್ ಅವರನ್ನು ಚಲನಚಿತ್ರೋದ್ಯಮದಲ್ಲಿ ತಮ್ಮ ಉತ್ತರಾಧಿಕಾರಿ ಎಂದು ಸಾರ್ವಜನಿಕವಾಗಿ ಶ್ಲಾಘಿಸಿದ್ದರು. ಇವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.