ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನಾನು ಫ್ಯಾನ್ ಅಲ್ವಾ? ನಂಗ್ಯಾಕೆ ಮದುವೆಗೆ ಕರೆಯಲಿಲ್ಲʼ; ಕೋಪಗೊಂಡ ಪುಟ್ಟ ಅಭಿಮಾನಿಯನ್ನು ರಶ್ಮಿಕಾ - ವಿಜಯ್‌ ದೇವರಕೊಂಡ ಕೂಲ್‌ ಮಾಡಿದ್ದೇಗೆ?

Vijay & Rashmika: ತ್ತೀಚೆಗಷ್ಟೇ ವಿವಾಹವಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿಯ ಮೇಲೆ ಪುಟ್ಟ ಬಾಲಕಿ 'ಲಕ್ಕಿ ತಲ್ಲಿ' ಮುನಿಸಿಕೊಂಡಿದ್ದಾಳೆ. "ನಾನು ಫ್ಯಾನ್ ಅಲ್ವಾ? ನನ್ನನ್ನ ಯಾಕೆ ಮದುವೆಗೆ ಕರೆಯಲಿಲ್ಲ?" ಎಂದು ಅವಳು ಮಾಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಅವರ ಉತ್ತರವೇನು?

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ಸಂಭ್ರಮದ ಭಾಗವಾಗಿ ಈ ಜೋಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಭಿಮಾನಿಗಳು ಮತ್ತು ಮಾಧ್ಯಮದವರನ್ನು ವಿಶೇಷವಾಗಿ ಆಹ್ವಾನಿಸಿ ಪಾರ್ಟಿ ನೀಡಿದ್ದಲ್ಲದೆ, ದೇಶಾದ್ಯಂತ ಸಿಹಿ ಹಂಚುವುದರ ಜೊತೆಗೆ ಅನ್ನದಾನವನ್ನೂ ಮಾಡಲಾಗಿತ್ತು.

ಮಾ.4ರಂದು ಸಿನಿಮಾ ಮತ್ತು ರಾಜಕೀಯ ಗಣ್ಯರಿಗಾಗಿ ಅದ್ಧೂರಿ ರಿಸೆಪ್ಷನ್ ಕೂಡ ಆಯೋಜಿಸಲಾಗಿತ್ತು. ಆದರೆ, ರಶ್ಮಿಕಾ ಮತ್ತು ವಿಜಯ್ ನನ್ನನ್ನು ತಮ್ಮ ಮದುವೆಗೆ ಕರೆಯಲಿಲ್ಲ ಎಂದು ಪುಟ್ಟ ಬಾಲಕಿಯೊಬ್ಬಳು ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದಕ್ಕೆ ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಕೂಡ ರಿಪ್ಲೈ ಮಾಡಿದ್ದಾರೆ.

ಗದ್ದರ್ ಚಲನಚಿತ್ರ ಪ್ರಶಸ್ತಿ ಘೋಷಣೆ; ಅತ್ಯುತ್ತಮ ತೆಲುಗು ನಟಿ ಪ್ರಶಸ್ತಿ ಪಡೆದ ರಶ್ಮಿಕಾ ಮಂದಣ್ಣ

ಯಾರು ಈ ಬಾಲಕಿ?

ರೀಲ್ಸ್‌ ಮೂಲಕ ವೈರಲ್‌ ಆಗಿರುವ ಬಾಲಕಿಯನ್ನು ಲಕ್ಕಿ ತಲ್ಲಿ ಎಂದು ಗುರುತಿಸಲಾಗಿದೆ. ಆ ಪುಟಾಣಿಯ ಇನ್‌ಸ್ಟಾಗ್ರಾಮ್‌ ಪೇಜ್‌ ಕೂಡ ಅದೇ ಹೆಸರಿನಲ್ಲಿದೆ. ವಿಜಯ್ ಮತ್ತು ರಶ್ಮಿಕಾ ವಿವಾಹದ ಹಿನ್ನೆಲೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿರುವ ಈ ಬಾಲಕಿ, "ವಿಜಯ್ ದೇವರಕೊಂಡ-ರಶ್ಮಿಕಾ ಮದುವೆಯಾಗಿದೆ.. ಮದುವೆಗೆ ನಮ್ಮನ್ನೂ ಕರೆಯಬಹುದಿತ್ತು ಅಲ್ವಾ? ಎಲ್ಲಾ ಕಡೆ ಲಡ್ಡು ಹಂಚುತ್ತಿದ್ದಾರೆ, ಅನ್ನದಾನ ಮಾಡುತ್ತಿದ್ದಾರೆ. ನಾವು ಕೂಡ ಅಭಿಮಾನಿಗಳೇ ಅಲ್ವಾ? ನಾನು ಕೂಡ ರೀಲ್ಸ್ ಮಾಡುತ್ತೇನೆ, ನನ್ನನ್ನು ಮದುವೆಗೆ ಕರೆದರೆ ಏನಾಗುತ್ತಿತ್ತು? ಈ ವಿಡಿಯೋವನ್ನು ಅವರಿಗೆ ಶೇರ್ ಮಾಡಿ" ಎಂದು ಆ ಪುಟ್ಟ ಅಭಿಮಾನಿ ಮುದ್ದುಮುದ್ದಾಗಿ ತನ್ನ ಅಸಮಾಧಾನವನ್ನು ಆ ವಿಡಿಯೋದಲ್ಲಿ ವ್ಯಕ್ತಪಡಿಸಿದ್ದಾಳೆ.

ರಶ್ಮಿಕಾ ಮಂದಣ್ಣ ಶೇರ್‌ ಮಾಡಿದ ರಿಸೆಪ್ಷನ್‌ ವಿಡಿಯೋದಲ್ಲಿ ‌ʻಕನ್ನಡʼ ಹಾಡು; ಕೊಡವ ಸಂಪ್ರದಾಯ ಮರೆಯದ ನ್ಯಾಷನಲ್‌ ಕ್ರಶ್‌ಗೆ ಫ್ಯಾನ್ಸ್‌ ಮೆಚ್ಚುಗೆ

ವಿಜಯ್‌ ದೇವರಕೊಂಡ ಏನಂದ್ರು ನೋಡಿ

ಈ ವೈರಲ್‌ ವಿಡಿಯೋ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಅವರ ಗಮನಕ್ಕೆ ಬಂದಿದೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ರಶ್ಮಿಕಾ, ಲಕ್ಕಿ ತಲ್ಲಿಗೆ ಸಮಾಧಾನ ಮಾಡಿದ್ದರು.

ನಂತರ ಆ ವಿಡಿಯೋಗೆ ಕಾಮೆಂಟ್‌ ಮಾಡಿದ್ದ ವಿಜಯ್‌ ದೇವರಕೊಂಡ, ""ಬುಜ್ಜಿ ತಾಯಿ, ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನ್ನ ಫೇವರೆಟ್ ಖಾದ್ಯಗಳು ಏನು? ನಿನಗೆ ಇಷ್ಟವಾದ ಸ್ವೀಟ್ಸ್ ಯಾವುದು ಅಂತ ಹೇಳು. ಎಲ್ಲವನ್ನೂ ಮನೆಯಲ್ಲೇ ಮಾಡಿಸುತ್ತೇನೆ.. ನಾವು ಚೆನ್ನಾಗಿ ಊಟ ಮಾಡೋಣ" ಎಂದು ಕಾಮೆಂಟ್ ಮಾಡಿದ್ದಾರೆ. ತಮ್ಮ ಪುಟ್ಟ ಅಭಿಮಾನಿಯ ಕೋಪವನ್ನು ತಣಿಸಲು ವಿಜಯ್ ಅವರೇ ಖುದ್ದಾಗಿ ಮನೆಗೆ ಆಹ್ವಾನಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಲಕ್ಕಿ ತಲ್ಲಿ ಮಾಡಿದ್ದ ರೀಲ್ಸ್



ಪ್ರತಿಕ್ರಿಯಿಸಿದ ಬಾಲಕಿ

ಇನ್ನು, ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಅವರ ಪ್ರತಿಕ್ರಿಯೆ ಕಂಡು ಖುಷಿಯಾದ ಬಾಲಕಿ, "ಈ ವಿಡಿಯೋವನ್ನು ಅವರ ತನಕತಲುಪಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಹೇಳಿದ್ದಾಳೆ.