ಕೆಲ ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ತಮ್ಮ ಮದುವೆಯ ಸಂಭ್ರಮವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಮದುವೆಯ ನಂತರ ಈ ಜೋಡಿ ದೇಶದಾದ್ಯಂತ ಸಿಹಿ ಹಂಚುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದೆ.
ಮಾರ್ಚ್ 1ರಂದು ದೇಶಾದ್ಯಂತ ಸಿಹಿ ವಿತರಣೆ
ಮದುವೆಯಾದ ಹಿನ್ನೆಲೆಯಲ್ಲಿ ಇಂದು ದೇಶದ ಆಯ್ದ ನಗರಗಳಲ್ಲಿ ಸಿಹಿ ವಿತರಣೆ ಮಾಡಲು ಈ ಜೋಡಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಈ ಜೋಡಿ, "ಈ ದೇಶದ ಸುಂದರ ಜನರಿಗೆ ನಮಸ್ಕಾರ. ನೀವು ಯಾವಾಗಲೂ ನಮ್ಮ ಪಯಣ ಮತ್ತು ನಮ್ಮ ಪ್ರೀತಿಯ ಭಾಗವಾಗಿದ್ದೀರಿ. ನಮ್ಮ ಮದುವೆಯ ಸಂಭ್ರಮವನ್ನು ನಿಮ್ಮೆಲ್ಲರ ಜೊತೆ ಆಚರಿಸುವುದು ನಮಗೆ ನಿಜವಾದ ಸಂತೋಷ ತರುತ್ತದೆ. ಭಾರತೀಯರಾದ ನಾವು ಯಾವುದೇ ಸಂಭ್ರಮವನ್ನು ಹೇಗೆ ಆಚರಿಸುತ್ತೇವೆ? ಖಂಡಿತವಾಗಿಯೂ ಆಹಾರ ಮತ್ತು ಸಿಹಿಯೊಂದಿಗೆ! ಅದಕ್ಕಾಗಿಯೇ ಮಾರ್ಚ್ 1 ರಂದು ನಮ್ಮ ಜೀವನದ ಈ ದೊಡ್ಡ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ದೇಶದಾದ್ಯಂತ ಪ್ರೀತಿ ಮತ್ತು ಸಿಹಿ ತುಂಬಿದ ಟ್ರಕ್‌ಗಳನ್ನು ಕಳುಹಿಸುತ್ತಿದ್ದೇವೆ" ಎಂದು ಹೇಳಿಕೊಂಡಿದೆ.
ದೇವಸ್ಥಾನಗಳಲ್ಲಿ ನಡೆಯಲಿದೆ ಅನ್ನದಾನ
ಬರೀ ಸಿಹಿ ವಿತರಣೆ ಮಾತ್ರವಲ್ಲ, ಈ ಜೋಡಿಯು ಭಾರತದಲ್ಲಿರುವ ವಿವಿಧ ಪ್ರಮುಖ ದೇವಾಲಯಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಕೂಡ ಆಯೋಜಿಸಿದೆ. "ನಮ್ಮ ಈ ಹೊಸ ಆರಂಭಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ" ಎಂದು ಈ ಜೋಡಿ ಕನ್ನಡಿಗರು ಸೇರಿದಂತೆ ಇಡೀ ದೇಶದ ಜನತೆಯಲ್ಲಿ ವಿನಂತಿಸಿಕೊಂಡಿದೆ. ವಿರೋಶ್ ಜೋಡಿಯ ಈ ಕೆಲಸಕ್ಕೆ ಭಾರಿ ಮಚ್ಚುಗೆ ವ್ಯಕ್ತವಾಗಿದೆ.
Vijay Deverakonda: ವಿಜಯ್ ದೇವರಕೊಂಡ ಮನೆ ಈಗ ಝಗಮಗ! ಮದುವೆ ತಯಾರಿ ಹೇಗಿದೆ?
ವಿಜಯ್ ದೇವರಕೊಂಡ ಪೋಸ್ಟ್
ಎಲ್ಲೆಲ್ಲಿ ಸಿಹಿ ವಿತರಣೆ ನಡೆಯಲಿದೆ?
ಕರ್ನಾಟಕ: ಬೆಂಗಳೂರು, ಮೈಸೂರು, ಮತ್ತು ರಶ್ಮಿಕಾ ಅವರ ಹುಟ್ಟೂರು ಕೊಡಗು.
ತೆಲಂಗಾಣ: ಹೈದರಾಬಾದ್, ಮಹಬೂಬ್‌ನಗರ, ಮತ್ತು ಕರೀಂನಗರ.
ಆಂಧ್ರಪ್ರದೇಶ: ವಿಶಾಖಪಟ್ಟಣಂ, ವಿಜಯವಾಡ, ಮತ್ತು ಪುಟ್ಟಪರ್ತಿ.
ತಮಿಳುನಾಡು: ಚೆನ್ನೈ ಮತ್ತು ಕೊಯಂಬತ್ತೂರು.
ಕೇರಳ: ಕೊಚ್ಚಿ.
ಪಾಂಡಿಚೇರಿ.
ದೆಹಲಿ, ಚಂಡೀಗಢ
ಉತ್ತರ ಪ್ರದೇಶ: ನೋಯ್ಡಾ ಮತ್ತು ಗಾಜಿಯಾಬಾದ್.
ಮಧ್ಯಪ್ರದೇಶ: ಭೋಪಾಲ್
ರಾಜಸ್ಥಾನ: ಜೈಪುರ
ಮಹಾರಾಷ್ಟ್ರ: ಮುಂಬೈ.
ಗುಜರಾತ್: ಅಹಮದಾಬಾದ್
ಸದ್ಯ ಬಿಹಾರಕ್ಕೆ ಸಿಹಿ ವಿತರಣೆ ಇಲ್ಲ!
ಬಿಹಾರದ ಪಟ್ನಾದಲ್ಲಿ ಇಂದು ಸಿಹಿ ವಿತರಣೆ ನಡೆಯಬೇಕಿತ್ತು. ಆದರೆ, ರೈಲು ಅಪಘಾತದ ಹಿನ್ನೆಲೆಯಲ್ಲಿ ಸರಕು ಸಾಗಣೆ ವಿಳಂಬವಾಗಿರುವುದರಿಂದ, ಬಿಹಾರದಲ್ಲಿ ಮಾತ್ರ ಸೋಮವಾರ (ಮಾರ್ಚ್ 2) ಸಿಹಿ ಹಂಚಲಾಗುವುದು ಎಂದು ತಂಡ ತಿಳಿಸಿದೆ.
ಅನ್ನದಾನ ನಡೆಯುವ ದೇವಸ್ಥಾನಗಳು ಯಾವುವು?
ತಮ್ಮ ವೈವಾಹಿಕ ಜೀವನದ ಈ ಸುಂದರ ಕ್ಷಣವನ್ನು ಅರ್ಥಪೂರ್ಣವಾಗಿಸಲು ನಿರ್ಧರಿಸಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಇಂದು (ಮಾರ್ಚ್ 1) ದೇಶದ ವಿವಿಧ ರಾಜ್ಯಗಳ 16 ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕರ್ನಾಟಕ:
ಶಿವೋಹಂ ಶಿವ ದೇವಸ್ಥಾನ (ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು)
ಶ್ರೀ ಇಗ್ಗುತ್ತಪ್ಪ ದೇವಸ್ಥಾನ (ಪಾಡಿ, ಕೊಡಗು) - ರಶ್ಮಿಕಾ ಅವರ ತವರು ಜಿಲ್ಲೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ (ಮೈಸೂರು)
ರಾಧಾ ಕೃಷ್ಣ ದೇವಸ್ಥಾನ (ಇಸ್ಕಾನ್) (ಹರೇ ಕೃಷ್ಣ ಹಿಲ್ಸ್, ರಾಜಾಜಿನಗರ, ಬೆಂಗಳೂರು)
ತೆಲಂಗಾಣ ಮತ್ತು ಆಂಧ್ರಪ್ರದೇಶ:
ಚಿಂತಪಲ್ಲಿ ಸಾಯಿಬಾಬಾ ದೇವಸ್ಥಾನ (ನಲ್ಗೊಂಡ ಜಿಲ್ಲೆ, ತೆಲಂಗಾಣ)
ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಮಾನ್ಯಂಕೊಂಡ, ಮಹಬೂಬ್‌ನಗರ)
ಹರೇ ಕೃಷ್ಣ ಹೆರಿಟೇಜ್ ಟೆಂಪಲ್ (ಹೈದರಾಬಾದ್)
ಶ್ರೀ ಕನಕ ಮಹಾಲಕ್ಷ್ಮಿ ದೇವಸ್ಥಾನ (ವಿಶಾಖಪಟ್ಟಣಂ)
ದ್ವಾರಕಾ ತಿರುಮಲ ದೇವಸ್ಥಾನ (ಚಿನ್ನ ತಿರುಪತಿ, ಏಲೂರು ಜಿಲ್ಲೆ)
ಶ್ರೀ ಕನಕದುರ್ಗಾ ದೇವಸ್ಥಾನ (ವಿಜಯವಾಡ)
ಉತ್ತರ ಪ್ರದೇಶ: ಶ್ರೀ ಶ್ರೀ ಕೃಷ್ಣ ಬಲರಾಮ ಮಂದಿರ (ವೃಂದಾವನ)
ಅಸ್ಸಾಂ: ಶ್ರೀ ರುಕ್ಮಿಣಿ ದೇವಸ್ಥಾನ (ಗುವಾಹಟಿ - ಇಸ್ಕಾನ್)
ಗುಜರಾತ್: ಶ್ರೀ ಶ್ರೀ ಗೋವಿಂದ ಧಾಮ ದೇವಸ್ಥಾನ (ಅಹಮದಾಬಾದ್ - ಇಸ್ಕಾನ್)
ಛತ್ತೀಸ್‌ಗಢ: ಶ್ರೀ ಶ್ರೀ ರಾಧಾ ರಾಸ್ ಬಿಹಾರಿ ಜಿ ಮಂದಿರ (ರಾಯ್‌ಪುರ - ಇಸ್ಕಾನ್)
ರಾಜಸ್ಥಾನ: ಗೋವಿಂದ ದೇವ್ ಜಿ ದೇವಸ್ಥಾನ (ಜೈಪುರ)
ತಮಿಳುನಾಡು: ಅರುಲ್ಮಿಗು ಕೋನಿಯಮ್ಮನ್ ದೇವಸ್ಥಾನ (ಕೊಯಂಬತ್ತೂರು)